ಮೊದಲ ಮಗುವಿನ ನಿರೀಕ್ಷೆಯಲ್ಲಿ ಟಾಲಿವುಡ್ ನಟ ವರುಣ್ ತೇಜ್, ಲಾವಣ್ಯ ತ್ರಿಪಾಠಿ
34 ವರ್ಷದ ಲಾವಣ್ಯ ತ್ರಿಪಾಠಿ ಮತ್ತು 35 ವರ್ಷದ ವರುಣ್ ತೇಜ್ ಐದು ವರ್ಷ ಡೇಟಿಂಗ್ ಮಾಡಿದ ನಂತರ 2023ರ ನವೆಂಬರ್‌ನಲ್ಲಿ ವಿವಾಹವಾದರು.

ನವದೆಹಲಿ: ಟಾಲಿವುಡ್ ಸ್ಟಾರ್ ದಂಪತಿ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದಾರೆ.
ದಂಪತಿ ಮಂಗಳವಾರ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ತಿಳಿಸಿದ್ದಾರೆ. ದಂಪತಿ ಪರಸ್ಪರ ಕೈ ಹಿಡಿದುಕೊಂಡು, ಪುಟ್ಟ ಮಗುವಿನ ಶೂಗಳನ್ನು ಹಿಡಿದಿರುವ ಫೋಟೊ ಹಂಚಿಕೊಂಡಿದ್ದಾರೆ.
'ಜೀವನದ ಅತ್ಯಂತ ಸುಂದರವಾದ ಪಾತ್ರ, ಶೀಘ್ರದಲ್ಲೇ ಬರಲಿದೆ' ಎಂಬ ಶೀರ್ಷಿಕೆ ನೀಡಲಾಗಿದೆ.
34 ವರ್ಷದ ಲಾವಣ್ಯ ತ್ರಿಪಾಠಿ ಮತ್ತು 35 ವರ್ಷದ ವರುಣ್ ತೇಜ್ ಐದು ವರ್ಷ ಡೇಟಿಂಗ್ ಮಾಡಿದ ನಂತರ 2023ರ ನವೆಂಬರ್‌ನಲ್ಲಿ ವಿವಾಹವಾದರು.
ವರುಣ್ ತೇಜ್ ಇತ್ತೀಚೆಗೆ 2024 ರಲ್ಲಿ ಬಿಡುಗಡೆಯಾದ 'ಮಟ್ಕಾ' ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಲಾವಣ್ಯ ಅವರು 'ಮಿಸ್ ಪರ್ಫೆಕ್ಟ್' ಎಂಬ ಹಾಸ್ಯ ಸರಣಿಯಲ್ಲಿ ನಟಿಸಿದ್ದರು. ಈ ತೆಲುಗು ಸರಣಿಯು 2024ರಲ್ಲಿ ಬಿಡುಗಡೆಯಾಯಿತು ಮತ್ತು ಇದನ್ನು ವಿಶ್ವಕ್ ಖಂಡೇರಾವ್ ನಿರ್ದೇಶಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


