ಹಿಂದೂ ದೇವತೆ ಕಾಳಿಯ ವೇಷ ಧರಿಸಿ ರ್ಯಾಪರ್ ಜೆನೆಸಿಸ್ ಕೀಳುಮಟ್ಟದ ಅಭಿನಯ; ಶಿಲುಬೆ ನೆಕ್ಕಿ ವಿಕೃತಿ, Video!
ಟಾಮಿ ಜೆನೆಸಿಸ್ ಎಂದೇ ಪ್ರಸಿದ್ಧರಾಗಿರುವ ಭಾರತೀಯ ಮೂಲದ ರ್ಯಾಪರ್ ಜೆನೆಸಿಸ್ ಯಾಸ್ಮಿನ್ ಮೋಹನರಾಜ್ ಅವರ ಹೊಸ ವೀಡಿಯೊ 'ಟ್ರೂ ಬ್ಲೂ' ವೈರಲ್ ಆದ ನಂತರ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ.

ಟಾಮಿ ಜೆನೆಸಿಸ್ ಎಂದೇ ಪ್ರಸಿದ್ಧರಾಗಿರುವ ಭಾರತೀಯ ಮೂಲದ ರ್ಯಾಪರ್ ಜೆನೆಸಿಸ್ ಯಾಸ್ಮಿನ್ ಮೋಹನರಾಜ್ ರ ಹೊಸ ವೀಡಿಯೊ 'ಟ್ರೂ ಬ್ಲೂ' ವೈರಲ್ ಆದ ನಂತರ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ. ವೀಡಿಯೊದಲ್ಲಿ, ಅವರು ನೀಲಿ ದೇಹದ ಬಣ್ಣ, ಚಿನ್ನದ ಆಭರಣಗಳು ಮತ್ತು ಕೆಂಪು ಬಿಂದಿಯೊಂದಿಗೆ ಹಿಂದೂ ದೇವತೆಯಂತೆ ಕಾಣಿಸುತ್ತಿದ್ದು, ಕ್ರಿಶ್ಚಿಯನ್ ಶಿಲುಬೆಯನ್ನು ಬಳಸಿರುವುದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀಡಿಯೊದಲ್ಲಿ ಜೆನೆಸಿಸ್ ಶಿಲುಬೆಯನ್ನು ನೆಕ್ಕುವುದು ಮತ್ತು ಅದನ್ನು ಎದೆಯ ಮೇಲಿಟ್ಟುಕೊಂಡು ಪೋಸ್ ನೀಡುವುದನ್ನು ಕಾಣಬಹುದು. ಈ ದೃಶ್ಯವು ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಜನರನ್ನು ಅಸಮಾಧಾನಗೊಳಿಸಿದೆ. ಇದನ್ನು 'ದೇವದೂಷಣೆ' ಎಂದು ಕರೆದಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ರ್ಯಾಪರ್ ಟಾಮಿ ಜೆನೆಸಿಸ್ ಅವರ 'ಟ್ರೂ ಬ್ಲೂ' ಸಂಗೀತ ವೀಡಿಯೊದಲ್ಲಿನ ಈ ದೃಶ್ಯಗಳಿಗಾಗಿ ಬಲವಾಗಿ ಟೀಕಿಸಿದ್ದಾರೆ. ಉದ್ದೇಶಪೂರ್ವಕವಾಗಿ ಧಾರ್ಮಿಕ ಸಮುದಾಯಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮತ್ತೊಬ್ಬ ಬಳಕೆದಾರರು, ಭಾರತೀಯರ ಹಿಂದೂ ಭಾವನೆಗಳನ್ನು ನೋಯಿಸಲು ಉದ್ದೇಶಪೂರ್ವಕವಾಗಿ ಮಾಡಲಾಗಿರುವ ಸಾಧ್ಯತೆಯಿದೆ. ಪೃಷ್ಠದಿಂದ ಶಿಲುಬೆ ಹೊರ ತೆಗೆಯುವುದು? ಅವಳು ಎಲ್ಲರ ಭಾವನೆಗಳನ್ನು ನೋಯಿಸುತ್ತಿದ್ದಾಳೆ. ಬಹುಶಃ ಉದ್ದೇಶಪೂರ್ವಕವಾಗಿ ವೈರಲ್ ಮಾಡಲು ಈ ಅಗ್ಗದ ತಂತ್ರ ಬಳಸಿದ್ದಾರೆ ಎಂದು ಆರೋಪಿಸಿದರು.
ಜೆನೆಸಿಸ್ ಯಾಸ್ಮಿನ್ ಮೋಹನರಾಜ್ ಕೆನಡಾದ ವ್ಯಾಂಕೋವರ್ನಲ್ಲಿ ಜನಿಸಿದ್ದು ತಮಿಳು ಮತ್ತು ಸ್ವೀಡಿಷ್ ಹಿನ್ನೆಲೆಯಿಂದ ಬಂದವರು. ಅವರ ದಿಟ್ಟ ಶೈಲಿಗೆ ಹೆಸರುವಾಸಿಯಾದ ಗಾಯಕಿ ಆಗಾಗ್ಗೆ ಪ್ರಚೋದನಕಾರಿ ಹಾಡುಗಳೊಂದಿಗೆ ಬರುತ್ತಾರೆ. ಇದಕ್ಕೂ ಮೊದಲು ಅವರು ಬಹಳಷ್ಟು ಕೆಲಸಗಳನ್ನು ಮಾಡಿದ್ದು ನಂತರ ಅವರನ್ನು ತೀವ್ರವಾಗಿ ಟ್ರೋಲ್ ಗೆ ಗುರಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



