ಸಿನಿಮಾ ಸುದ್ದಿ

Father's day special: ಮಕ್ಕಳ ಜೊತೆ ಪತಿ ನಟ Yash; ಕ್ಯೂಟ್ video ಶೇರ್ ಮಾಡಿದ ರಾಧಿಕಾ ಪಂಡಿತ್

ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಮತ್ತು ರಾಮಾಯಣ: ಪಾರ್ಟ್ ಒನ್ ನಂತಹ ಬಹು ನಿರೀಕ್ಷಿತ ಚಿತ್ರಗಳ ಶೂಟಿಂಗ್ ಬ್ಯುಸಿ ಮಧ್ಯೆ, ಅವರು ತಮ್ಮ ಕುಟುಂಬಕ್ಕೆ ಆದ್ಯತೆ ನೀಡುವುದನ್ನು ಎಂದಿಗೂ ಮರೆತಿಲ್ಲ.

Father's day special: ಮಕ್ಕಳ ಜೊತೆ ಪತಿ ನಟ Yash; ಕ್ಯೂಟ್ video ಶೇರ್ ಮಾಡಿದ ರಾಧಿಕಾ ಪಂಡಿತ್
ರಾಧಿಕಾ ಪಂಡಿತ್-ಯಶ್ ಮಕ್ಕಳ ಜೊತೆ
Published On :

ಅಭಿಮಾನಿಗಳಿಂದ ರಾಕಿಂಗ್ ಸ್ಟಾರ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಕೆಜಿಎಫ್ ಸ್ಟಾರ್ ಯಶ್, ವೈಯಕ್ತಿಕ ಜೀವನದಲ್ಲಿ ತಂದೆ-ತಾಯಿಗೆ ಒಳ್ಳೆಯ ಮಗನಾಗಿ, ಪತ್ನಿಗೆ ಪ್ರೀತಿಯ ಗಂಡನಾಗಿ, ಮಕ್ಕಳಿಗೆ ಉತ್ತಮ ತಂದೆಯಾಗಿ ಕೂಡ ಕರ್ತವ್ಯ ನಿಭಾಯಿಸುತ್ತಿದ್ದಾರೆ.

ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಮತ್ತು ರಾಮಾಯಣ: ಪಾರ್ಟ್ ಒನ್ ನಂತಹ ಬಹು ನಿರೀಕ್ಷಿತ ಚಿತ್ರಗಳ ಶೂಟಿಂಗ್ ಬ್ಯುಸಿ ಮಧ್ಯೆ, ಅವರು ತಮ್ಮ ಕುಟುಂಬಕ್ಕೆ ಆದ್ಯತೆ ನೀಡುವುದನ್ನು ಎಂದಿಗೂ ಮರೆತಿಲ್ಲ. ಈ ವರ್ಷದ ತಂದೆಯ ದಿನಕ್ಕೆ ಯಶ್ ಅವರ ಪತ್ನಿ, ನಟಿ ರಾಧಿಕಾ ಪಂಡಿತ್, ಯಶ್ ಮತ್ತು ಮಕ್ಕಳ ವಿಶೇಷ ವಿಡಿಯೊ ಶೇರ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ತಂದೆ-ಮಕ್ಕಳ ಸುಂದರ ಕ್ಷಣ ಸೆರೆಹಿಡಿಯಲಾಗಿದೆ. ಇದರಲ್ಲಿ ಯಶ್ ತಾಳ್ಮೆಯಿಂದ ಮಕ್ಕಳಿಗೆ ಪಲ್ಟಿ ಹೊಡೆಯುವುದನ್ನು ಕಲಿಸುತ್ತಿದ್ದಾರೆ, ಸ್ಪೈಡರ್ ಮ್ಯಾನ್ ಉಡುಪನ್ನು ಧರಿಸಿದ ವ್ಯಕ್ತಿ ಯಶ್ ಜೊತೆ ಸೇರಿ ಸಮರ್ ಸಾಲ್ಟ್ ಮಾಡುತ್ತಿದ್ದಾರೆ.

ರಾಧಿಕಾ ಈ ವಿಡಿಯೋವನ್ನು " ಮಕ್ಕಳಿಗಾಗಿ ತನ್ನ ಪ್ರಪಂಚವನ್ನು ತಲೆಕೆಳಗಾಗಿ ಮಾಡುವ ವಿಶ್ವದ ಅತ್ಯುತ್ತಮ ತಂದೆಗೆ ತಂದೆ ದಿನಾಚರಣೆಯ ಶುಭಾಶಯಗಳು!" ಎಂಬ ಶೀರ್ಷಿಕೆಯೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.