'ಅನ್‌ಲಾಕ್ ರಾಘವ' ಚಿತ್ರದ ಮೂರನೇ ಹಾಡು ಬಿಡುಗಡೆ: ಶುಭಾಶಯ ಕೋರಿದ ನಟಿ ಸಪ್ತಮಿ ಗೌಡ
ನಾಯಕಿಯಾಗಿ ನಟಿಸಿರುವ ರಾಚೆಲ್ ಡೇವಿಡ್ ಜಾನಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಘವನಾಗಿ ಮಿಲಿಂದ್ ನಟಿಸಿದ್ದಾರೆ.

ಅನ್‌ಲಾಕ್ ರಾಘವ ಚಿತ್ರದ 'ರಾಘವ ರಾಘವ' ಶೀರ್ಷಿಕೆಯು ಮೂರನೇ ಹಾಡು ಬಿಡುಗಡೆಯಾಗಿದೆ. ಹಾಡಿಗೆ ಅಂಕಿತಾ ಕುಂಡು ಧ್ವನಿ ನೀಡಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಹಾಡನ್ನು ಬಿಡುಗಡೆ ಮಾಡಿದ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ, ಚಿತ್ರಕ್ಕೆ ಶುಭ ಕೋರಿದರು.
ನಾಯಕಿಯಾಗಿ ನಟಿಸಿರುವ ರಾಚೆಲ್ ಡೇವಿಡ್ ಜಾನಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಘವನಾಗಿ ಮಿಲಿಂದ್ ನಟಿಸಿದ್ದಾರೆ. ಹಾಡಿಗೆ ಧನಂಜಯ ಅವರ ನೃತ್ಯ ನಿರ್ದೇಶನವಿದ್ದು, ಜೋಡಿಯ ನಡುವಿನ ಕೆಮಿಸ್ಟ್ರಿ ಸಖತ್ ವರ್ಕ್ ಆಗಿದೆ. ಕೋಟೆ ನಗರ ಚಿತ್ರದುರ್ಗದ ರಮಣೀಯ ದೃಶ್ಯಗಳ ನಡುವೆ ಸುಂದರವಾಗಿ ಮೂಡಿಬಂದಿದೆ. ಬೆಟ್ಟಗಳು, ಬಂಡೆಗಳು ಮತ್ತು ಗಲ್ಲಿಗಳಲ್ಲಿನ ದೃಶ್ಯಗಳು ಹಾಡಿನ ಸೌಂದರ್ಯವನ್ನು ಹೆಚ್ಚಿಸಿವೆ.
ಈ ಹಿಂದೆ ಬಿಡುಗಡೆಯಾದ 'ನನ್ ಹುಡುಗಿ' ಮತ್ತು 'ಲಾಕ್ ಲಾಕ್' ಹಾಡುಗಳು ಈಗಾಗಲೇ ಯುವಜನರ ಮೆಚ್ಚಿನವುಗಳಾಗಿವೆ ಮತ್ತು A2 ಮ್ಯೂಸಿಕ್ ಚಾನಲ್‌ನಲ್ಲಿ ಬಿಡುಗಡೆಯಾದ 'ರಾಘವ ರಾಘವ' ಹಾಡು ಇದೀಗ ವೀಕ್ಷಣೆಗೆ ಸಿದ್ಧವಾಗಿದೆ.
ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮಂಜುನಾಥ್ ಡಿ ಮತ್ತು ಗಿರೀಶ್ ಕುಮಾರ್ ನಿರ್ಮಿಸಿರುವ ಅನ್‌ಲಾಕ್ ರಾಘವ ಚಿತ್ರಕ್ಕೆ ದೀಪಕ್ ಮಧುವನಹಳ್ಳಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ರೋಮ್ಯಾನ್ಸ್, ಆ್ಯಕ್ಷನ್ ಮತ್ತು ಮನರಂಜನೆಯ ಭರವಸೆ ನೀಡಿದ್ದಾರೆ. ಫೆಬ್ರುವರಿ 7 ರಂದು ತೆರೆಗೆ ಬರಲಿರುವ ಈ ಚಿತ್ರ ರಾಮ ರಾಮ ರೇ ಖ್ಯಾತಿಯ ಡಿ ಸತ್ಯ ಪ್ರಕಾಶ್ ಅವರ ಕಥೆ ಮತ್ತು ಚಿತ್ರಕಥೆಯನ್ನು ಒಳಗೊಂಡಿದೆ.
ಲವಿತ್ ಛಾಯಾಗ್ರಾಹಕರಾಗಿ, ಅಜಯ್ ಕುಮಾರ್ ಮತ್ತು ಮಧು ತುಂಬಕೆರೆ ಸಂಕಲನವನ್ನು ನಿರ್ವಹಿಸುತ್ತಿದ್ದಾರೆ. ವಿನೋದ್ ಮತ್ತು ಅರ್ಜುನ್ ಅವರ ಸಾಹಸ ಸಂಯೋಜನೆ ಹೊಂದಿರುವ ಈ ಚಿತ್ರದ ತಾರಾಗಣದಲ್ಲಿ ಸಾಧು ಕೋಕಿಲ, ಶೋಭರಾಜ್, ಅವಿನಾಶ್ ಮತ್ತು ಭೂಮಿ ಶೆಟ್ಟಿ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



