ಸಿನಿಮಾ ಸುದ್ದಿ

'ನಿಧಿ ಅಗರ್ವಾಲ್ ಧರಿಸಿದ್ದ ಉಡುಗೆ ಜನರ ಕೆರಳಿಸಿತ್ತು..': ತೆಲುಗು ನಟ ಶಿವಾಜಿ ಮತ್ತೊಂದು ವಿವಾದ! ನಟಿ ಹೇಳಿದ್ದೇನು? Video

ಹೈದರಾಬಾದ್ ಮಾಲ್ ಕಾರ್ಯಕ್ರಮದಲ್ಲಿ ನಟಿ ನಿಧಿ ಅಗರ್ವಾಲ್ ಅವರಿಗೆ ಆದ ಅನುಭವದ ಬಗ್ಗೆ ತೆಲುಗು ನಟ ಶಿವಾಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

'ನಿಧಿ ಅಗರ್ವಾಲ್ ಧರಿಸಿದ್ದ ಉಡುಗೆ ಜನರ ಕೆರಳಿಸಿತ್ತು..': ತೆಲುಗು ನಟ ಶಿವಾಜಿ ಮತ್ತೊಂದು ವಿವಾದ! ನಟಿ ಹೇಳಿದ್ದೇನು? Video
ನಿಧಿ ಅಗರ್ವಾಲ್ ಮತ್ತು ನಟ ಶಿವಾಜಿ
Published On :

ಹೈದರಾಬಾದ್: ಇತ್ತೀಚೆಗಷ್ಟೇ ಹೆಣ್ಣುಮಕ್ಕಳ ಉಡುಗೆ ಕುರಿತು ಮಾತನಾಡಿ ವಿವಾದಕ್ಕೀಡಾಗಿದ್ದ ತೆಲುಗು ನಟ ಶಿವಾಜಿ ಇದೀಗ ಅಂತಹುದೇ ಮತ್ತೊಂದು ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಹೈದರಾಬಾದ್ ಮಾಲ್ ಕಾರ್ಯಕ್ರಮದಲ್ಲಿ ನಟಿ ನಿಧಿ ಅಗರ್ವಾಲ್ ಅವರಿಗೆ ಆದ ಅನುಭವದ ಬಗ್ಗೆ ತೆಲುಗು ನಟ ಶಿವಾಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಟಿಯ ಉಡುಗೆಯೇ ಜನರನ್ನು ಕೆರಳಿಸಿತು ಎಂದು ಶಿವಾಜಿ ಆರೋಪಿಸಿದ್ದಾರೆ.

ಡಿಸೆಂಬರ್ 17 ರಂದು ಹೈದರಾಬಾದ್‌ನ ಲುಲು ಮಾಲ್‌ನಲ್ಲಿ ರಾಜಾ ಸಾಬ್‌ನ ಹಾಡಿನ ಬಿಡುಗಡೆ ಸಮಾರಂಭದಲ್ಲಿ ನಿಧಿ ಚಿತ್ರತಂಡದೊಂದಿಗೆ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಊಹೆಗೂ ಮೀರಿದ ಸಂಖ್ಯೆಯಲ್ಲಿ ಜನರು ಸೇರಿದ್ದರು.ಈವೆಂಟ್ ಮುಗಿದ ಬಳಿಕ ನಟಿ ಅಲ್ಲಿಂದ ಹೊರ ಬರಲು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಸಾಕಷ್ಟು ಜನರು ಅವರ ದೇಹವನ್ನು ಟಚ್ ಮಾಡಿದ್ದರು. ಈ ಸಂಬಂಧ ಕೇಸ್ ಕೂಡ ದಾಖಲಾಗಿತ್ತು.

ಇದೀಗ ಇದೇ ವಿಚಾರವಾಗಿ ನಟ ಶಿವಾಜಿ ಮಾತನಾಡಿದ್ದು, ಹೈದರಾಬಾದ್‌ ಮಾಲ್​​ನಲ್ಲಿ ನಡೆದ ‘ರಾಜಾ ಸಾಬ್’ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ನಟಿ ನಿಧಿ ಅಗರ್​​ವಾಲ್ ಭಾಗಿ ಆಗಿದ್ದರು. ಈ ವೇಳೆ ನಟಿಯ ಮೇಲೆ ಅಲ್ಲಿದ್ದ ಜನರು ಮುಗಿಬಿದ್ದಿದ್ದರು.ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು.

ನಟಿ ಇದರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದರು. ಒಂದು ವೇಳೆ ಆ ನೂಕು ನುಗ್ಗಲಾಟದಲ್ಲಿ ನಿಧಿ ಅವರ ಉಡುಗೆಯ ಒಂದು ಸಣ್ಣ ತುಂಡು ಹರಿದಿದ್ದರೂ ಅವರು ಜೀವನ ಪೂರ್ತಿ ಅಳುತ್ತಿದ್ದರು. ಅದು ಅವರ ಜೀವನದ ಅತ್ಯಂತ ಮರೆಯಲಾದ ದುಃಸ್ವಪ್ನವಾಗಿರುತ್ತಿತ್ತು. ನಟಿಯರು ಸಾಧಾರಣ ಉಡುಗೆ ತೊಡಬೇಕು' ಎಂದಿದ್ದಾರೆ.

'ನಿಧಿಯ ಉಡುಗೆ ಜನಸಮೂಹವನ್ನು ಕೆರಳಿಸಿತು’ ಎಂದು ನೇರವಾಗಿ ಅವರ ಉಡುಗೆ ಬಗ್ಗೆ ಆರೋಪ ಮಾಡಿದ್ದಾರೆ. ‘ಸಾಯಿ ಪಲ್ಲವಿ, ಅನುಷ್ಕಾ, ಸೌಂದರ್ಯ, ಭೂಮಿಕಾ ಮೊದಲಾದವರನ್ನು ಯಾರಾದರೂ ಟಚ್​ ಮಾಡಿದ್ದಾರಾ? ಏಕೆಂದರೆ ಅವರು ಸರಿಯಾಗಿ ಬಟ್ಟೆ ಹಾಕುತ್ತಾರೆ.

ಯಾರೂ ಪ್ರಚೋದಿಸಬೇಡಿ. ನೀವು ಹಾಗೆ ಮಾಡಿದಾಗ ಪುರುಷರು ನಿಮ್ಮನ್ನು ಮುಟ್ಟಬಹುದು ಎಂದು ಭಾವಿಸುತ್ತಾರೆ. ನಿಮಗೆ ಹೇಗೆ ಅನಿಸುತ್ತದೆಯೋ ಹಾಗೆ ಉಡುಗೆ ಧರಿಸಿ. ಆದರೆ,ನಾನು ನಿಜವನ್ನು ಹೇಳುತ್ತಿದ್ದೇನೆ' ಎಂದು ನಟ ಶಿವಾಜಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ನಟಿ ಹೇಳಿದ್ದೇನು?

ಇನ್ನು ನಟ ಶಿವಾಜಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ನಟಿ ನಿಧಿ ಅಗರ್ವಾಲ್, 'ಸಂತ್ರಸ್ತೆಯನ್ನು ದೂಷಿಸುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಲುಲು ಮಾಲ್ ಕಾರ್ಯಕ್ರಮದ ಫೋಟೋವನ್ನು ಹಂಚಿಕೊಂಡು, ‘ಸಂತ್ರಸ್ತೆಯನ್ನು ದೂಷಿಸುವುದು ತಪ್ಪು’ ಎಂಬರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.