ಸಿನಿಮಾ ಸುದ್ದಿ

ಕ್ರಿಕೆಟಿಗನೊಂದಿಗೆ ಸಪ್ತಪದಿ ತುಳಿದ ನಟಿ ಅರ್ಚನಾ ಕೊಟ್ಟಿಗೆ; RCB ಆಟಗಾರ ದೇವದತ್ ಪಡಿಕ್ಕಲ್ ಹಾಜರಿ!

ಮಂಗಳವಾರ ನಡೆದ ಆರತಕ್ಷತೆ ಸಮಾರಂಭದಲ್ಲಿ ಆರ್‌ಸಿಬಿಯ ದೇವದತ್ ಪಡಿಕಲ್, ಪ್ರಸಿದ್ಧ್ ಕೃಷ್ಣ (ಗುಜರಾತ್ ಟೈಟಾನ್ಸ್), ವೈಶಾಖ್ ವಿಜಯಕುಮಾರ್ (ಪಂಜಾಬ್ ಸೂಪರ್ ಕಿಂಗ್ಸ್) ಸೇರಿದಂತೆ ಹಲವಾರು ಕ್ರಿಕೆಟಿಗರು ಭಾಗವಹಿಸಿದ್ದರು.

ಕ್ರಿಕೆಟಿಗನೊಂದಿಗೆ ಸಪ್ತಪದಿ ತುಳಿದ ನಟಿ ಅರ್ಚನಾ ಕೊಟ್ಟಿಗೆ; RCB ಆಟಗಾರ ದೇವದತ್ ಪಡಿಕ್ಕಲ್ ಹಾಜರಿ!
ಅರ್ಚನಾ ಕೊಟ್ಟಿಗೆ - ಕ್ರಿಕೆಟರ್ ಬಿಆರ್ ಶರತ್
Published On :

ಬೆಂಗಳೂರು: ನಟಿ ಅರ್ಚನಾ ಕೊಟ್ಟಿಗೆ ಬುಧವಾರ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಕ್ರಿಕೆಟಿಗ ಬಿಆರ್ ಶರತ್ ಅವರನ್ನು ವಿವಾಹವಾದರು. ಸ್ಯಾಂಡಲ್‌ವುಡ್ ಮತ್ತು ಕ್ರಿಕೆಟ್ ಕ್ಷೇತ್ರದ ಕೆಲವು ಪ್ರಮುಖರು ಭಾಗವಹಿಸಿ ನವದಂಪತಿಗೆ ಶುಭಕೋರಿದರು.

ಬುಧವಾರ ಬೆಳಿಗ್ಗೆ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಅರ್ಚನಾ ಹಾಗೂ ಶರತ್ ಅವರ ನಿಶ್ಚಿತಾರ್ಥ ನೆರವೇರಿತ್ತು.

ಮಂಗಳವಾರ ನಡೆದ ಆರತಕ್ಷತೆ ಸಮಾರಂಭದಲ್ಲಿ ಆರ್‌ಸಿಬಿಯ ದೇವದತ್ ಪಡಿಕಲ್, ಪ್ರಸಿದ್ಧ್ ಕೃಷ್ಣ (ಗುಜರಾತ್ ಟೈಟಾನ್ಸ್), ವೈಶಾಖ್ ವಿಜಯಕುಮಾರ್ (ಪಂಜಾಬ್ ಸೂಪರ್ ಕಿಂಗ್ಸ್) ಸೇರಿದಂತೆ ಹಲವಾರು ಕ್ರಿಕೆಟಿಗರು ಭಾಗವಹಿಸಿದ್ದರು. ಕರ್ನಾಟಕ ತಂಡದ ಪರ ರಣಜಿ ಕ್ರಿಕೆಟ್ ಆಡುತ್ತಿರುವ ತಮ್ಮ ಸ್ನೇಹಿತ ಬಿಆರ್ ಶರತ್ ಅವರಿಗೆ ಶುಭ ಹಾರೈಸಿದರು.

ಕನ್ನಡ ಚಿತ್ರರಂಗದ ನಟಿಯರಾದ ಸಪ್ತಮಿ ಗೌಡ, ಅಮೃತಾ ಅಯ್ಯಂಗಾರ್, ಸಾನ್ಯಾ ಅಯ್ಯರ್, ಆಶಿಕಾ ರಂಗನಾಥ್, ಅರ್ಚನಾ ಜೋಯಿಸ್, ನವೀನ್ ಶಂಕರ್, ಹಿತಾ ಚಂದ್ರಶೇಖರ್, ಸಾನ್ವಿ ಸುದೀಪ್, ಅನುಷಾ, ಖುಷಿ ರವಿ, ತೇಜಸ್ವಿನಿ ಶರ್ಮಾ, ರೋಶಿನಿ ಮತ್ತು ಇತರರು ಭಾಗಿಯಾಗಿದ್ದರು.

ಅರ್ಚನಾ ಕೊಟ್ಟಿಗೆ 2018ರಲ್ಲಿ ತೆರೆಕಂಡ ಅರಣ್ಯಕಾಂಡ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ವಾಸು ನಾನ್ ಪಕ್ಕಾ ಕಮರ್ಷಿಯಲ್, ಡಿಯರ್ ಸತ್ಯ, ಯೆಲ್ಲೋ ಗ್ಯಾಂಗ್ಸ್ ಮತ್ತು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಈಗ Zee5 ಕನ್ನಡದ ಮೊದಲ ಮೂಲ ಸರಣಿ 'ಅಯ್ಯನ ಮನೆ' ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇದು ಏಪ್ರಿಲ್ 25 ರಂದು ಸ್ಟ್ರೀಮ್ ಆಗಲಿದೆ.

ಶರತ್ ವಿಕೆಟ್-ಕೀಪರ್-ಬ್ಯಾಟ್ಸ್‌ಮನ್ ಆಗಿದ್ದು, 2018ರಲ್ಲಿ ರಣಜಿಗೆ ಪದಾರ್ಪಣೆ ಮಾಡಿದರು ಮತ್ತು ಚೊಚ್ಚಲ ಪಂದ್ಯದಲ್ಲೇ ವಿದರ್ಭ ಕ್ರಿಕೆಟ್ ತಂಡದ ವಿರುದ್ಧ ಶತಕ ಗಳಿಸಿದರು.

ಶರತ್ ಮತ್ತು ಅರ್ಚನಾ ಒಂದೇ ಕಾಲೇಜಿನಲ್ಲಿ ಓದಿದ್ದರು. 'ಶರತ್ ಕಾಲೇಜಿನಲ್ಲಿ ನನ್ನ ಸೀನಿಯರ್ ಮತ್ತು ಆಗಲೇ ನನಗೆ ಶರತ್ ಬಗ್ಗೆ ತಿಳಿದಿತ್ತು, ಆದರೆ ನಾವು ಕ್ಲೋಸ್ ಆಗಿರಲಿಲ್ಲ. ವರ್ಷಗಳ ನಂತರ, 2018 ರಲ್ಲಿ ನಾವು ಪರಸ್ಪರ ಸ್ನೇಹಿತನ ಮೂಲಕ ಭೇಟಿಯಾದೆವು. ಶರತ್‌ಗೆ ನಾನೆಂದರೆ ಮೊದಲಿನಿಂದಲೂ ಇಷ್ಟ. ಆದರೆ, ಶರತ್ ಅವರೇ ಮೊದಲು ಅದನ್ನು ಹೇಳಲಿ ಎಂದು ನಾನು ಕಾಯುತ್ತಿದ್ದೆ. ಆದರೆ, ಉತ್ತಮ ವ್ಯಕ್ತಿ ಎಂದು ಬೆಂಗಳೂರು ಟೈಮ್ಸ್ ಸಂದರ್ಶನವೊಂದರಲ್ಲಿ ಅರ್ಚನಾ ಹೇಳಿದ್ದನ್ನು ಉಲ್ಲೇಖಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.