ನನ್ನ ತಪ್ಪುಗಳು ನಟನೆಯ ಒಂದು ಭಾಗ, ವೈಯಕ್ತಿಕ ದ್ವೇಷವಲ್ಲ: ಬಿಗ್ ಬಾಸ್ ನಿಂದ ಹೊರಬಂದು ಕ್ಷಮೆ ಕೇಳಿದ ಜಗದೀಶ್
ನೂರಾರು ಕ್ಯಾಮೆರಾ, ಸಾವಿರಾರು ಬಿಗ್ಬಾಸ್ ಸಿಬ್ಬಂದಿ, ಆ ನಿರ್ದೇಶಕ, ಆ ಮಾಂತ್ರಿಕ ತಂತ್ರಜ್ಞರು, ಅವರ 24/7 ಡೆಡಿಕೇಷನ್ ಹಾಗೂ 20 ಕೋಟಿಗೂ ಹೆಚ್ಚಿನ ಬಿಗ್ ಬಾಸ್ ಅಭಿಮಾನಿ ದೇವರುಗಳ ಆಶೀರ್ವಾದ ಈ ಹೊಸ ಕರ್ನಾಟಕ ಕ್ರಶ್ ಲಾಯರ್ ಜಗದೀಶ್ ಆಗಿದ್ದಾನೆ ಎಂದಿದ್ದಾರೆ.

ಬೆಂಗಳೂರು: ಮಹಿಳೆಯರನ್ನು ನಿಂದಿಸಿದ ಕಾರಣಕ್ಕೆ ಬಿಗ್ ಬಾಸ್ ಕನ್ನಡದ 11ನೇ ಆವೃತ್ತಿಯಿಂದ ಗೇಟ್ ಪಾಸ್ ಪಡೆದಿರುವ ವಕೀಲ ಕೆ.ಎನ್ ಜಗದೀಶ್ ಕುಮಾರ್, ನಟ ಸುದೀಪ್ ಹಾಗೂ ಇತರ ಸ್ಪರ್ಧಿಗಳ ಕ್ಷಮೆ ಕೋರಿದ್ದಾರೆ.
ಕೆಲ ಮಾಧ್ಯಮಗಳಿಗೆ ಸಂದೇಶ ರವಾನಿಸಿರುವ ಜಗದೀಶ್, ‘ನೂರಾರು ಕ್ಯಾಮೆರಾ, ಸಾವಿರಾರು ಬಿಗ್ಬಾಸ್ ಸಿಬ್ಬಂದಿ, ಆ ನಿರ್ದೇಶಕ, ಆ ಮಾಂತ್ರಿಕ ತಂತ್ರಜ್ಞರು, ಅವರ 24/7 ಡೆಡಿಕೇಷನ್ ಹಾಗೂ 20 ಕೋಟಿಗೂ ಹೆಚ್ಚಿನ ಬಿಗ್ ಬಾಸ್ ಅಭಿಮಾನಿ ದೇವರುಗಳ ಆಶೀರ್ವಾದ ಈ ಹೊಸ ಕರ್ನಾಟಕ ಕ್ರಶ್ ಲಾಯರ್ ಜಗದೀಶ್ ಆಗಿದ್ದಾನೆ ಎಂದಿದ್ದಾರೆ. ನಿಮ್ಮ ಪ್ರತಿ ಒಂದು ಚಪ್ಪಾಳೆ, ಸಂದೇಶ, ನಿಮ್ಮ ಆಶೀರ್ವಾದ ನನ್ನ ಈ ಬಿಗ್ ಬಾಸ್ ಪಯಣ ಯಶಸ್ಸು, ಅದು ನೀವು ಇಟ್ಟ ಈ ನಂಬಿಕೆ. ಮತ್ತೊಮ್ಮೆ ಕೋಟಿ ಕೋಟಿ ನಮನ. ಸಾರ್ಥಕ ಆಯಿತು, ನನ್ನ ಈ ಹುಟ್ಟು, ಈ ಪ್ರೀತಿ, ನನ್ನ ಗೆಲುವಿಗೆ ನೀವು ಕೊಟ್ಟ ಆ ಒಡನಾಟ, ನನ್ನ ಬಳಿ ಪದಗಳು ಕಡಿಮೆ, ವಿಶ್ಲೇಷಣೆ ಮಾಡಲು’ ಎಂದು ಹೇಳಿದ್ದಾರೆ.
ಸುದೀಪ್ ಸರ್ ನನ್ನನ್ನು ಕ್ಷಮಿಸಿ. ನನ್ನ ಕ್ಷಮಾಪಣೆ ಸ್ವೀಕರಿಸಿ. ನಿಮ್ಮ ಮೇಲೆ ನನಗೆ ಪ್ರೀತಿ, ಗೌರವ ಇದೆ. ನಿಮ್ಮ ಸಲಹೆಯಿಂದ ನಾನು ತುಂಬಾ ಕಲಿತೆ. ನೀವು ನನಗೆ ಶಿಕ್ಷಕರ ಸಮಾನ. ನಾನು ಸುದೀಪ್ ಅವರಿಗೆ, ಬಿಗ್ ಬಾಸ್ ತಂಡಕ್ಕೆ ಆಭಾರಿಯಾಗಿರುವೆ’. ಬೆಳಿಗ್ಗೆ ಎದ್ದೇಳಲು ಹಾಕುವ ಹಾಡನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಐಶ್ವರ್ಯಾ ಅವರು ನನ್ನನ್ನು ಕುಣಿಯವಂತೆ ಮಾಡಿದರು. ಅವರಿಗೆ ಧನ್ಯವಾದಗಳು. ರಂಜಿತ್, ಮಾನಸ ಹಾಗೂ ಅಲ್ಲಿರುವ ಎಲ್ಲರೂ ಸಣ್ಣ ವಯಸ್ಸಿನಲ್ಲೇ ಅದ್ಭುತ ಕಲಾವಿದರು ಎಂದು ಸಂದೇಶದಲ್ಲಿ ತಿಳಿಸಿದ್ದಾರೆ. ನಾನು ಎಲ್ಲರೊಳಗೊಬ್ಬನಾಗಲು ಪ್ರಯತ್ನಪಟ್ಟೆ. ನಗಲು ಪ್ರಯತ್ನ ಪಟ್ಟೆ. ಈ ನಿಟ್ಟಿನಲ್ಲಿ ನನ್ನಿಂದ ಕೆಲವು ತಪ್ಪುಗಳಾಗಿವೆ. ಯಾವುದು ವೈಯಕ್ತಿಕವಲ್ಲ. ಅದು ಮನೋರಂಜನೆಯ ಒಂದು ಭಾಗವಾಗಿತ್ತಷ್ಟೇ ಎಂದು ಸಂದೇಶದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



