ಸಿನಿಮಾ ಸುದ್ದಿ

ವಿಚ್ಛೇದನ ಪ್ರಕರಣ: ಐಶ್ವರ್ಯಾ ಜೊತೆ ಧನುಷ್ ನ್ಯಾಯಾಲಯಕ್ಕೆ ಆಗಮನ; ನ.27ಕ್ಕೆ ಅಂತಿಮ ಆದೇಶ!

2022ರಲ್ಲಿ ಧನುಷ್ ಮತ್ತು ಐಶ್ವರ್ಯ ತಮ್ಮ ಪ್ರತ್ಯೇಕತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು. ಅಂದೇ ಮಾಜಿ ದಂಪತಿಗಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು ಇಬ್ಬರು ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದು ಇದರ ಬೆನ್ನಲ್ಲೇ ಇಬ್ಬರು ರಾಜಿ ಮಾಡಿಕೊಳ್ಳಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ವಿಚ್ಛೇದನ ಪ್ರಕರಣ: ಐಶ್ವರ್ಯಾ ಜೊತೆ ಧನುಷ್ ನ್ಯಾಯಾಲಯಕ್ಕೆ ಆಗಮನ; ನ.27ಕ್ಕೆ ಅಂತಿಮ ಆದೇಶ!
ಐಶ್ವರ್ಯ ರಜನಿಕಾಂತ್-ಧನುಷ್
Published On :

ಚೆನ್ನೈ: ದಕ್ಷಿಣ ಭಾರತದ ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಸಾಕಷ್ಟು ಸಮಯದಿಂದ ಬೇರ್ಪಟ್ಟಿದ್ದಾರೆ. ಧನುಷ್ ಮತ್ತು ಐಶ್ವರ್ಯಾ ಈಗಾಗಲೇ ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದ್ದು ಇಂದು ವಿಚ್ಛೇದನಕ್ಕಾಗಿ ಚೆನ್ನೈ ಕೌಟುಂಬಿಕ ನ್ಯಾಯಾಲಯಕ್ಕೆ ಮೊದಲ ಬಾರಿಗೆ ಹಾಜರಾಗಿದ್ದರು.

2022ರಲ್ಲಿ ಧನುಷ್ ಮತ್ತು ಐಶ್ವರ್ಯ ತಮ್ಮ ಪ್ರತ್ಯೇಕತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು. ಅಂದೇ ಮಾಜಿ ದಂಪತಿಗಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು ಇಬ್ಬರು ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದು ಇದರ ಬೆನ್ನಲ್ಲೇ ಇಬ್ಬರು ರಾಜಿ ಮಾಡಿಕೊಳ್ಳಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ಐಶ್ವರ್ಯಾ ಮತ್ತು ಧನುಷ್ ವಿಚಾರಣೆಯ ನಂತರ, ನ್ಯಾಯಾಧೀಶರು ನವೆಂಬರ್ 27 ಅನ್ನು ಮುಂದಿನ ದಿನಾಂಕವನ್ನಾಗಿ ನೀಡಿದ್ದು, ಅಂದೇ ಧನುಷ್-ಐಶ್ವರ್ಯಾ ವಿಚ್ಛೇದನದ ಅಂತಿಮ ಆದೇಶ ನೀಡಲಿದೆ ಎಂದು ಹೇಳಲಾಗುತ್ತಿದೆ. ಅದೇ ಸಮಯದಲ್ಲಿ, ಧನುಷ್ ಮತ್ತು ಐಶ್ವರ್ಯಾ ನ್ಯಾಯಾಲಯಕ್ಕೆ ಮಾಸ್ಕ್ ಧರಿಸಿ ಆಗಮಿಸಿದ್ದರು.

2004ರಲ್ಲಿ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಚೆನ್ನೈನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. 2022ರ ಜನವರಿ 17ರಂದು ಇಬ್ಬರೂ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ವಿಚ್ಛೇದನವನ್ನು ಘೋಷಿಸಿದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.