'45' ಸಿನಿಮಾ ಟೀಸರ್ ಅನಾವರಣ: ಶಿವಣ್ಣ-ಉಪೇಂದ್ರ ಮುಂದೆ ರಾಜ್ ಬಿ ಶೆಟ್ಟಿ ಕರಾಟೆ ಪ್ರದರ್ಶನ!
ಅವರೊಟ್ಟಿಗೆ ತಮಾಷೆಯ ದನಿಯಲ್ಲಿ ಮಂಗಳೂರು ಶೈಲಿಯ ಕನ್ನಡದಲ್ಲಿ ಮಾತನಾಡುವ ರಾಜ್ ಬಿ ಶೆಟ್ಟಿ, ರೌಡಿಗಳು ಚಾಕು ತೆಗೆದು ಹೆದರಿಸಲು ಪ್ರಯತ್ನಿಸಿದಾಗ ‘ನನ್ನ ಮೈಮುಟ್ಟುವ ಪ್ರಯತ್ನ ಮಾಡಬೇಡಿ, ನಮ್ಮಣ್ಣ ನಾನು ಚಿಕ್ಕವನಿದ್ದಾಗ ಕರಾಟೆ ಕ್ಲಾಸ್ಗೆ ಕಳಿಸಿದ್ದ’ ಎನ್ನುತ್ತಾ ಕರಾಟೆ ಪ್ರತಿಭೆ ಪ್ರದರ್ಶಿಸಲು ಮುಂದಾಗುತ್ತಾರೆ.

ಅರ್ಜುನ್ ಜನ್ಯ ಚೊಚ್ಚಲ ಬಾರಿಗೆ ನಿರ್ದೇಶಕನ ಮಾಡಿರುವ ಸಿನಿಮಾ ‘45’ ಚಿತ್ರೀಕರಣ ಬಹುತೇಕ ಅಂತ್ಯವಾಗಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯುತ್ತಿದ್ದು, ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಶಿವರಾಜಕುಮಾರ್ ಮತ್ತು ಉಪೇಂದ್ರ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ ಅವರ ಪಾತ್ರವನ್ನು ರಹಸ್ಯವಾಗಿಟ್ಟುಕೊಂಡು ಶಿವರಾಜ್ಕುಮಾರ್ ಮತ್ತು ಉಪೇಂದ್ರ ಅವರ ಫರ್ಸ್ಟ್ ಲುಕ್ ಅನಾವರಣಗೊಳಿಸುವ ಮೂಲಕ ಅರ್ಜುನ್ ಅಭಿಮಾನಿಗಳಿಗೆ ಈ ಸಸ್ಪೆನ್ಸ್ ನೀಡಿದ್ದರು. ಅಂತಿಮವಾಗಿ ದೀಪಾವಳಿಯ ಆಸುಪಾಸಿನಲ್ಲಿ ರಾಜ್ ಅವರ ಟೀಸರ್ ಬಿಡುಗಡೆ ಮಾಡಿ ಎಲ್ಲಾ ಕುತೂಹಲಗಳಿಗೆ ತೆರೆ ಎಳೆದಿದ್ದಾರೆ.
ಈಗ ಬಿಡುಗಡೆ ಆಗಿರುವ ರಾಜ್ ಬಿ ಶೆಟ್ಟಿ ಅವರ ಕ್ಯಾರೆಕ್ಟರ್ ಟೀಸರ್ ಬ್ಲಾಕ್ ಆಂಡ್ ವೈಟ್ನಲ್ಲಿ ಆರಂಭವಾಗುತ್ತದೆ. ರಾಜ್ ಬಿ ಶೆಟ್ಟಿಯನ್ನು ಇಬ್ಬರು ರೌಡಿಗಳು ಅಡ್ಡಗಟ್ಟಿದ್ದಾರೆ. ಅವರೊಟ್ಟಿಗೆ ತಮಾಷೆಯ ದನಿಯಲ್ಲಿ ಮಂಗಳೂರು ಶೈಲಿಯ ಕನ್ನಡದಲ್ಲಿ ಮಾತನಾಡುವ ರಾಜ್ ಬಿ ಶೆಟ್ಟಿ, ರೌಡಿಗಳು ಚಾಕು ತೆಗೆದು ಹೆದರಿಸಲು ಪ್ರಯತ್ನಿಸಿದಾಗ ‘ನನ್ನ ಮೈಮುಟ್ಟುವ ಪ್ರಯತ್ನ ಮಾಡಬೇಡಿ, ನಮ್ಮಣ್ಣ ನಾನು ಚಿಕ್ಕವನಿದ್ದಾಗ ಕರಾಟೆ ಕ್ಲಾಸ್ಗೆ ಕಳಿಸಿದ್ದ’ ಎನ್ನುತ್ತಾ ಕರಾಟೆ ಪ್ರತಿಭೆ ಪ್ರದರ್ಶಿಸಲು ಮುಂದಾಗುತ್ತಾರೆ. ಅಲ್ಲಿಗೆ ಟೀಸರ್ ಅಂತ್ಯವಾಗಿದೆ. ಟೀಸರ್ ನೋಡಿದವರಿಗೆ ರಾಜ್ ಬಿ ಶೆಟ್ಟಿ ಅವರದ್ದು ಹಾಸ್ಯ ಭರಿತವಾಗಿರುವ ನಾಯಕ ಪಾತ್ರ ಅನಿಸುತ್ತದೆ. ಮಾತ್ರವಲ್ಲ, ಟೀಸರ್ನಲ್ಲಿ ರಾಜ್ ಬಿ ಶೆಟ್ಟಿಯನ್ನು ಎದುರಾಗಿ ಚಾಕು ತೋರಿಸಿ ಹೆದರಿಸಲು ಯತ್ನಿಸಿರುವ ಇಬ್ಬರು ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಎನ್ನುವ ಅನುಮಾನವೂ ಮೂಡುತ್ತದೆ. ಏಕೆಂದರೆ ಅವರ ಒಬ್ಬರ ಚಾಕುವಿಗೆ ‘ಓಂ’ ಹೆಸರಿನ ಚೈನ್ ಇದ್ದರೆ ಇನ್ನೊಬ್ಬರ ಚಾಕುವಿಗೆ ತ್ರಿಶೂಲವಿದೆ.
ಶರ್ಟ್, ಟೈ ಹಾಕಿಕೊಂಡು ಕಾರ್ಪೊರೇಟ್ ಉದ್ಯೋಗಿಯಂತೆ ರಾಜ್ ಬಿ ಶೆಟ್ಟಿ ಕಾಣಿಸುತ್ತಿದ್ದಾರೆ. ಕೈಯಲ್ಲಿ ಕಡಗ ಸಹ ಇದೆ. ಈಗ ಕಾರ್ಪೊರೇಟ್ ಉದ್ಯೋಗ ಮಾಡುತ್ತಿರುವ ಆದರೆ ಫ್ಲ್ಯಾಶ್ಬ್ಯಾಕ್ನಲ್ಲಿ ರೌಡಿಸಂ ಹಿಸ್ಟರಿ ಇರುವ ಪಾತ್ರ ಇವರದ್ದಾಗಿರಬಹುದು ಎಂಬ ಅನುಮಾನವೂ ಸಹ ಮೂಡುತ್ತಿದೆ. ಈ ಟೀಸರ್ ಹಂಚಿಕೊಂಡಿರುವ ನಿರ್ದೇಶಕ ಅರ್ಜುನ್ ಜನ್ಯ, ‘ಕರಾಟೆ ಪಟು ಬರ್ತಿದ್ದಾರೆ ಎಲ್ಲಾರು ಹುಷಾರು’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಸಿನಿಮಾದ ಬಗ್ಗೆ ಹೆಚ್ಚಿನ ಅಪ್ ಡೇಟ್ ಗಳನ್ನು ಮುಂದಿನ ದಿನದಲ್ಲಿ ಹಂಚಿಕೊಳ್ಳುವುದಾಗಿ ಅರ್ಜುನ್ ಜನ್ಯ ಹೇಳಿದ್ದಾರೆ. ಸೂರಜ್ ಪ್ರೊಡಕ್ಷನ್ ಅಡಿಯಲ್ಲಿ ರಮೇಶ್ ರೆಡ್ಡಿ ನಿರ್ಮಿಸಿರುವ 45 ಸಿನಿಮಾಗೆ ಅರ್ಜುನ್ ಜನ್ಯ ನಿರ್ದೇಶನ ಮಾತ್ರವಲ್ಲದೆ ಚಿತ್ರದ ಸಂಗೀತವನ್ನೂ ಸಹ ಸಂಯೋಜಿಸಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ ಹೊಣೆ ಹೊತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



