'ಪರವಶ' ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ರವಿಚಂದ್ರನ್, ಸೋನಲ್ ಮೊಂತೆರೋ, ರಘು ಭಟ್
ನಟ ರವಿಚಂದ್ರನ್, ಗೌರಿಶಂಕರ್ ಮತ್ತು ದಿ ಜಡ್ಜ್ಮೆಂಟ್ ಸೇರಿದಂತೆ ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಧೃವ ಸರ್ಜಾ ಅಭಿನಯದ ಕೆಡಿ - ದಿ ಡೆವಿಲ್ ಚಿತ್ರದಲ್ಲಿಯೂ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವುಗಳ ಹೊರತಾಗಿ, ಅವರು ಇತ್ತೀಚೆಗೆ 'ಪರವಶ' ಎಂಬ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಸದ್ಯ ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿರುವ ನಟ ರವಿಚಂದ್ರನ್, ಗೌರಿಶಂಕರ್ ಮತ್ತು ದಿ ಜಡ್ಜ್ಮೆಂಟ್ ಸೇರಿದಂತೆ ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಧೃವ ಸರ್ಜಾ ಅಭಿನಯದ ಕೆಡಿ - ದಿ ಡೆವಿಲ್ ಚಿತ್ರದಲ್ಲಿಯೂ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವುಗಳ ಹೊರತಾಗಿ, ಅವರು ಇತ್ತೀಚೆಗೆ 'ಪರವಶ' ಎಂಬ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.
ಸುಧೀಂದ್ರ ನಾಡಿಗರ್ ನಿರ್ದೇಶನದ ಮತ್ತು ಅವ್ಯಕ್ತ ಸಿನಿಮಾಸ್ ಅಡಿಯಲ್ಲಿ ಹರೀಶ್ ಗೌಡ ನಿರ್ಮಾಣದ ಪರವಶ ಚಿತ್ರದಲ್ಲಿ ರವಿಚಂದ್ರನ್ ಜೊತೆಗೆ ರಘು ಭಟ್, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಪವಿತ್ರಾ ಲೋಕೇಶ್, ಅನನ್ಯಾ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಹೊಸ ತಂಡದೊಂದಿಗೆ ಕೆಲಸ ಮಾಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರವಿಚಂದ್ರನ್, 'ನಾನು ಈ ಹಿಂದೆ ಮಾಡಿದ್ದಕ್ಕಿಂತ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಚಿತ್ರದಲ್ಲಿ ನನ್ನ ಭಾಗವು ಪೂರ್ಣಗೊಂಡಿದೆ ಮತ್ತು ಸುಧೀಂದ್ರ ನಾಡಿಗರ ನಿರ್ದೇಶನದ ಶೈಲಿಯು ನನಗೆ ಸಾಕಷ್ಟು ಇಷ್ವವಾಗಿದೆ' ಎಂದರು.
ಚಿತ್ರದ ಪೋಸ್ಟರ್ ಅನ್ನು ರವಿಚಂದ್ರನ್ ಮತ್ತು ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಸೋನಲ್ ಮೊಂತೆರೋ ಬಿಡುಗಡೆ ಮಾಡಿದರು.
ಚಿತ್ರದ ತಾರಾಗಣದ ಭಾಗವಾಗಿರುವ ರಾಘವೇಂದ್ರ ರಾಜ್ಕುಮಾರ್ ಅವರೇ 'ಪರವಶ'ಕ್ಕೆ ಕಥೆಯನ್ನು ಬರೆದಿದ್ದಾರೆ. ಅವರ ಪ್ರಕಾರ, ಚಿತ್ರವು ಥ್ರಿಲ್ಲರ್, ಫ್ಯಾಮಿಲಿ ಎಂಟರ್ಟೈನರ್ ಮತ್ತು ರೊಮ್ಯಾನ್ಸ್ನ ಮಿಶ್ರಣವಾಗಿದ್ದು, ಪ್ರೇಕ್ಷಕರ ವಿವಿಧ ಸಂವೇದನೆಗಳನ್ನು ಪೂರೈಸುತ್ತದೆ. ಚಿತ್ರದ ಕೆಲವು ಭಾಗಗಳ ಚಿತ್ರೀಕರಣ ಬಾಕಿ ಇದೆ. ಪರವಶ ಚಿತ್ರದ ಚಿತ್ರೀಕರಣ ಮಂಗಳೂರು, ಉಡುಪಿ, ಮಣಿಪಾಲ, ಕುಂದಾಪುರದಲ್ಲಿ ನಡೆದಿದೆ. ಸಚಿನ್ ಬಸ್ರೂರ್ ಅವರ ಸಂಗೀತವಿರುವ ಈ ಚಿತ್ರಕ್ಕೆ ಆನಂದ್ ಮೀನಾಕ್ಷಿ ಅವರ ಛಾಯಾಗ್ರಹಣ ಮತ್ತು ಪ್ರತೀಕ್ ಶೆಟ್ಟಿ ಅವರ ಸಂಕಲನವೂ ಇರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



