ಸಿನಿಮಾ ಸುದ್ದಿ

ಆಗಸ್ಟ್ 9ಕ್ಕೆ 400 ಚಿತ್ರಮಂದಿರಗಳಲ್ಲಿ ಅಬ್ಬರಿಸಲು 'ಭೀಮ' ಸಜ್ಜು

ಡ್ರಗ್‌ ಮುಕ್ತ ಸಮಾಜಕ್ಕೆ ಕರೆ ನೀಡುವ, ಪ್ರತಿಯೊಬ್ಬರಿಗೂ ಜವಾಬ್ದಾರಿಯ ಅರಿವು ಮೂಡಿಸುವಂತಹ ಸಂದೇಶ ನೀಡುವ ಚಿತ್ರ ಇದಾಗಿದ್ದು, ಮೊದಲ ದಿನವೇ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧಗೊಂಡಿದೆ.

ಆಗಸ್ಟ್ 9ಕ್ಕೆ 400 ಚಿತ್ರಮಂದಿರಗಳಲ್ಲಿ ಅಬ್ಬರಿಸಲು 'ಭೀಮ' ಸಜ್ಜು
ಭೀಮಾ ಚಿತ್ರದ ಸ್ಟಿಲ್
Published On :

ದುನಿಯಾ ವಿಜಯ್ ನಾಯಕ ನಟನಾಗಿ ನಟಿಸಿ, ನಿರ್ದೇಶನ ಮಾಡುತ್ತಿರುವ ಬಹು ನಿರೀಕ್ಷಿತ ಚಿತ್ರ ಭೀಮ ಸೆನ್ಸಾರ್ ಮಂಡಳಿಯಿಂದ A ಪ್ರಮಾಣಪತ್ರವನ್ನು ಪಡೆದುಕೊಂಡಿದ್ದು, ಆಗಸ್ಟ್ 9 ರಂದು ತೆರೆ ಮೇಲೆ ಬರಲು ಸಜ್ಜಾಗಿದೆ.

ಡ್ರಗ್‌ ಮುಕ್ತ ಸಮಾಜಕ್ಕೆ ಕರೆ ನೀಡುವ, ಪ್ರತಿಯೊಬ್ಬರಿಗೂ ಜವಾಬ್ದಾರಿಯ ಅರಿವು ಮೂಡಿಸುವಂತಹ ಸಂದೇಶ ನೀಡುವ ಚಿತ್ರ ಇದಾಗಿದ್ದು, ಮೊದಲ ದಿನವೇ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧಗೊಂಡಿದೆ.

ಚಿತ್ರ ಕುರಿತು ಮಾತನಾಡಿದ ದುನಿಯಾ ವಿಜಯ್ ಅವರು, ಭೀಮ ಚಿತ್ರದಲ್ಲಿ ಒಂದು ಸಂದೇಶ ಇದೆ. ಇದು ಸಮಾಜಿ ಕಳಕಳಿ ಸಂದೇಶ ಆಗಿದೆ. ಅದನ್ನು ಚಿತ್ರದಲ್ಲಿ ವಿಭಿನ್ನವಾಗಿಯೇ ತೋರಿಸೋ ಕೆಲಸ ಆಗಿದೆ. ಎಂಎನ್'ಸಿ ಮತ್ತು ಕಾರ್ಪೊರೇಟ್ ವಲಯಗಳಲ್ಲಿ ಕೆಲಸ ಮಾಡುವವರು, ಮಕ್ಕಳು ಮತ್ತು ಬಡಕುಟುಂಬಗಳ ಎದುರಿಸುತ್ತಿರುವ ಸವಾಲುಗಳು, ಒಳನೋಟಗಳು ಮತ್ತು ಪ್ರತಿಫಲನಗಳನ್ನು ತೋರಿಸಲಾಗಿದೆ ಎಂದು ಹೇಳಿದ್ದಾರೆ.

ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದು, ಚರಣ್ ರಾಜ್ ಅವರ ಸಂಗೀತವಿದೆ. ಚಿತ್ರದ ಛಾಯಾಗ್ರಹಣವನ್ನು ಶಿವಸೇನಾ, ಸಂಕಲನ ದೀಪು. ಎಸ್. ಕುಮಾರ್, ಫೈಟ್ಸ್ಗಳನ್ನ ವಿನೋದ್ , ಚೇತನ್ ಡಿಸೋಜಾ, ಟೈಗರ್ ಶಿವ, ಗೌತಮ್ ಹಾಗೂ ಡ್ಯಾನ್ಸ್ ಕೋರಿಯೋಗ್ರಾಫಿ ಬಿ. ಧನಂಜಯ, ರಾಜು ನಿರ್ವಹಿಸಿದ್ದಾರೆ.

ಚಿತ್ರದಲ್ಲಿ ಅಶ್ವಿನಿ ಅಂಬರೀಶ್​ ನಾಯಕಿಯಾಗಿದ್ದು, ಬ್ಲಾಕ್​ ಡ್ರಾಗನ್​ ಮಂಜು, ಪ್ರಿಯಾ ಶಠಮರ್ಷಣ, ಕಾಕ್ರೋಚ್​ ಸುಧಿ, ರಂಗಾಯಣ ರು, ಕಲ್ಯಾಣಿ ರಾಜು, ಅಚ್ಯುತ್​ ಕುಮಾರ್​ ಪ್ರಮುಖ ತಾರಾಗಣದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.