ಸಿನಿಮಾ ಸುದ್ದಿ

ರೊಮ್ಯಾಂಟಿಕ್ ಫ್ಯಾಮಿಲಿ ಸಿನಿಮಾಗಾಗಿ ಜೊತೆಯಾದ ಅಜಯ್ ರಾವ್- ಶಿವ ತೇಜಸ್!

'ಧೈರ್ಯಂ' ನಿರ್ದೇಶಕ ಶಿವ ತೇಜಸ್ ಜೊತೆ ನಟ ಅಜಯ್ ರಾವ್ ಕೈ ಜೋಡಿಸಿದ್ದಾರೆ. ಈ ಸಿನಿಮಾದಲ್ಲಿ ಶಿವ ತೇಜಸ್ ಮತ್ತು ಅಜಯ್​ ರಾವ್ ಕೆಲಸ ಮಾಡಿದ್ದರು. ಇದೀಗ ಮತ್ತೊಮ್ಮೆ ಸಿನಿಮಾವೊಂದಕ್ಕೆ ಜೊತೆಯಾಗುತ್ತಿದ್ದಾರೆ.

ರೊಮ್ಯಾಂಟಿಕ್ ಫ್ಯಾಮಿಲಿ ಸಿನಿಮಾಗಾಗಿ ಜೊತೆಯಾದ ಅಜಯ್ ರಾವ್- ಶಿವ ತೇಜಸ್!
ಅಜಯ್ ರಾವ್ - ಶಿವ ತೇಜಸ್ - ಹರೀಶ್ ದೇವಿತಂದ್ರೆ
Published On :

'ಧೈರ್ಯಂ' ನಿರ್ದೇಶಕ ಶಿವ ತೇಜಸ್ ಜೊತೆ ನಟ ಅಜಯ್ ರಾವ್ ಕೈ ಜೋಡಿಸಿದ್ದಾರೆ. ಈ ಸಿನಿಮಾದಲ್ಲಿ ಶಿವ ತೇಜಸ್ ಮತ್ತು ಅಜಯ್​ ರಾವ್ ಕೆಲಸ ಮಾಡಿದ್ದರು. ಇದೀಗ ಮತ್ತೊಮ್ಮೆ ಸಿನಿಮಾವೊಂದಕ್ಕೆ ಜೊತೆಯಾಗುತ್ತಿದ್ದಾರೆ.

ಮಳೆ ಹಾಗು ದಿಲ್ ಪಸಂದ್ ಸಿನಿಮಾಗಳಿಗೆ ನಿರ್ದೇಶಕ ಶಿವ ತೇಜಸ್ ಜನಪ್ರಿಯರಾಗಿದ್ದಾರೆ. ತಮ್ಮ ಮುಂದಿನ ಹೊಸ ಚಿತ್ರಕ್ಕೆ ಶೀರ್ಷಿಕೆ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ಆಕ್ಷನ್ ಥ್ರಿಲ್ಲರ್ ಧೈರ್ಯಂಗಿಂತ ಭಿನ್ನವಾಗಿ ಈ ಬಾರಿ ನಿರ್ದೇಶಕರು ರೊಮ್ಯಾಂಟಿಕ್ ಫ್ಯಾಮಿಲಿ ಕಥೆ  ಮಾಡುತ್ತಿದ್ದಾರೆ.

ಅಜಯ್ ರಾವ್ ಅವರ ಜನ್ಮದಿನದಂದು ಈ ಸಿನಿಮಾ ಅಧಿಕೃತ ಘೋಷಣೆಯನ್ನು ಮಾಡಲಾಗಿದೆ. ಹೆಚ್‌ಪಿಆರ್ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಹರೀಶ್ ದೇವಿತಂದ್ರೆ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹೆಸರಿಡದ ಈ ಚಿತ್ರದಲ್ಲಿ ಯಾರೆಲ್ಲಾ ಅಭಿನಯಿಸಲಿದ್ದಾರೆ? ನಾಯಕಿ ಯಾರು? ಎಂಬುದೂ ಸೇರಿದಂತೆ ಉಳಿದ ಮಾಹಿತಿಯನ್ನು ಚಿತ್ರತಂಡ ಸದ್ಯದಲ್ಲೇ ಹಂಚಿಕೊಳ್ಳಲಿದೆ. ಅಜಯ್ ರಾವ್ ಕೈಯ್ಯಲ್ಲಿ ಹಲವು ಸಿನಿಮಾಗಳಿವೆ,

ಶ್ರೀ ಕೃಷ್ಣ ಆರ್ಟ್ಸ್ ಮತ್ತು ಕ್ರಿಯೇಷನ್ಸ್ ಬ್ಯಾನರ್‌ನಡಿಯಲ್ಲಿ ನಿರ್ಮಾಣಗುತ್ತಿರುವ ಪವನ್ ಭಟ್ ಚೊಚ್ಚಲ ನಿರ್ದೇಶನದ ಯುದ್ಧಕಾಂಡದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಕ್ತಾಯದ ಹಂತದಲ್ಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.