ಅರ್ಜುನ್ ಜನ್ಯ ನಿರ್ದೇಶನದ '45' ಮೂಲಕ ನಟ ಜಾಫರ್ ಸಾದಿಕ್, ರಾಜೇಂದ್ರನ್ ಕನ್ನಡಕ್ಕೆ ಪದಾರ್ಪಣೆ
ಬಹುಭಾಷಾ ನಟ ರಾಜೇಂದ್ರನ್ ಅವರು ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ 45 ಚಿತ್ರತಂಡ ಸೇರಿದ್ದಾರೆ. ಚಿತ್ರದಲ್ಲಿ ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅವರೊಂದಿಗೆ, ಜಾಫರ್ ಸಾದಿಕ್ ಮತ್ತು ನಟ ರಾಜೇಂದ್ರನ್ ಸೇರ್ಪಡೆಯಾಗಿದ್ದಾರೆ.

ಬಹುಭಾಷಾ ನಟ ರಾಜೇಂದ್ರನ್ ಅವರು ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ 45 ಚಿತ್ರತಂಡ ಸೇರಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ ಸಿನಿಮಾದಲ್ಲಿ ಅರ್ಜುನ್ ಜನ್ಯ ಅವರು ಅಗತ್ಯ ಪಾತ್ರ ವರ್ಗವನ್ನು ಒಂದೆಡೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅವರೊಂದಿಗೆ, ಜಾಫರ್ ಸಾದಿಕ್ ಮತ್ತು ನಟ ರಾಜೇಂದ್ರನ್ ಸೇರ್ಪಡೆಯಾಗಿದ್ದಾರೆ.
ಜೈಲರ್, ಜವಾನ್, ವಿಕ್ರಮ್, ಸೈತಾನ್ ಮತ್ತು ವಾಯ್ಸ್ ಆಫ್ ಸತ್ಯನಾಥನ್‌ನಂತಹ ಜನಪ್ರಿಯ ಸಿನಿಮಾಗಳಲ್ಲಿನ ಪಾತ್ರಗಳಿಗೆ ಹೆಸರಾದ ಜಾಫರ್, ಈ ಬಹುಭಾಷಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿದುಬಂದಿದೆ.
ಮತ್ತೊಂದೆಡೆ, ಈಗಾಗಲೇ ನಾಯಕ ಮತ್ತು ಕೋಲಾರ ಎಂಬ ಎರಡು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಬಹುಭಾಷಾ ನಟ ರಾಜೇಂದ್ರನ್ 45 ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ ಮತ್ತು ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅವರು ನಾನ್ ಕಡವುಲ್ ಮತ್ತು ಬಾಸ್ ಎಂಗಿರ ಭಾಸ್ಕರನ್ ಮುಂತಾದ ಚಿತ್ರಗಳಿಗೆ ಹೆಸರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


