ಅಶುತೋಷ್ ಗೋವರಿಕರ್ ಭೇಟಿಯಾದ ರಿಷಬ್ ಶೆಟ್ಟಿ: 'ಲಗಾನ್’ ಡೈರೆಕ್ಟರ್ ಸಿನಿಮಾದಲ್ಲಿ 'ಕಾಂತಾರ ಶಿವ'?
ನಟ ರಿಷಬ್ ಶೆಟ್ಟಿ - ಲಗಾನ್ ನಿರ್ದೇಶಕ ಅಶುತೋಷ್ ಗೋವರಿಕರ್ ಜೊತೆ ಮುಂಬೈನ ಅವರ ಕಚೇರಿಯ ಮುಂದೆ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿರುವ ಸ್ಪಷ್ಟ ಸುಳಿವು ನೀಡಿದ್ದಾರೆ.

ಭಾರತ ಸಿನಿಮಾ ಇತಿಹಾಸದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾಗಿರುವ ‘ಲಗಾನ್’ ಸಿನಿಮಾವನ್ನು ನಿರ್ದೇಶನ ಮಾಡಿರುವ ಅಶುತೋಷ್ ಗೋವರೀಕರ್ ಅವರ ಹೊಸ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ. ಹೀಗೊಂದು ಸುದ್ದಿ ಕಳೆದ ಕೆಲ ತಿಂಗಳುಗಳಿಂದ ಹರಿದಾಡುತ್ತಿತ್ತು.
ಅದಕ್ಕೆ ಪುಷ್ಠಿ ನೀಡುವಂತೆ ನಟ ರಿಷಬ್ ಶೆಟ್ಟಿ - ಲಗಾನ್ ನಿರ್ದೇಶಕ ಅಶುತೋಷ್ ಗೋವರಿಕರ್ ಜೊತೆ ಮುಂಬೈನ ಅವರ ಕಚೇರಿಯ ಮುಂದೆ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿರುವ ಸ್ಪಷ್ಟ ಸುಳಿವು ನೀಡಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ ಫ್ರಿಕ್ವೇಲ್ ಗಾಗಿ ರಿಷಬ್ ಶೆಟ್ಟಿ ಸಜ್ಜಾಗುತ್ತಿದ್ದು, ಇದರ ನಡುವೆ ರಿಷಬ್ ಶೆಟ್ಟಿ ಶುಕ್ರವಾರ ಬಾಲಿವುಡ್ ನಿರ್ದೇಶಕ ಅಶುತೋಷ್ ಗೋವಾರಿಕರ್ ಮತ್ತು ವಿಷ್ಣು ವರ್ಧನ್ ಇಂದೂರಿ ಅವರೊಂದಿಗೆ ಸಭೆ ನಡೆಸಿದ್ದು ಮತ್ತಷ್ಟು ಊಹಾಪೋಹಗಳನ್ನು ಸೃಷ್ಟಿಸಿದೆ.
ಸೆಪ್ಟೆಂಬರ್ 2023 ರಿಂದ, ರಿಷಬ್ ಮತ್ತು ಅಶುತೋಷ್ ಗೋವಾರಿಕರ್ ಸಿನಿಮಾ ಬಗ್ಗೆ ಊಹಾಪೋಹಗಳಿವೆ. ಆದಾಗ್ಯೂ, ರಿಷಬ್ ಶೆಟ್ಟಿ ಸಿನಿಮಾ ಎಕ್ಸ್ ಪ್ರೆಸ್ ಗೆ ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ, ಸದ್ಯ ಅವರ ಗಮನವು ಕೇವಲ ಕಾಂತಾರ-2 ಮೇಲಿದೆ ಎಂದು ಹೇಳಿದ್ದರು. ಆದರೆ ಈಗ ಈ ಭೇಟಿ ಎಲ್ಲರ ಗಮನ ಸೆಳೆದಿದೆ.
ಕಾಂತಾರ ಪ್ರೀಕ್ವೆಲ್ ನಂತರ ರಿಷಬ್ ಶೆಟ್ಟಿ ಮುಂದಿನ ಪ್ರಾಜೆಕ್ಟ್ ಬಗ್ಗೆ ಕೇಳಿದ ಪ್ರಶ್ನೆಗೆ ಸೂಕ್ತ ಸಮಯದಲ್ಲಿ ಉತ್ತರ ಸಿಗಲಿದೆ ಎಂದಿದ್ದರು. 2022 ರಲ್ಲಿ ಬಿಡುಗಡೆಯಾದ ಕಾಂತಾರ ಗಮನಾರ್ಹ ಯಶಸ್ಸನ್ನು ಕಂಡಿತು, ಕನ್ನಡ ಚಲನಚಿತ್ರವು ವ್ಯಾಪಕವಾದ ಮೆಚ್ಚುಗೆಯನ್ನು ಪಡೆಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಗಣನೀಯ ಯಶಸ್ಸು ಸಾಧಿಸಿತು. ಅದರ ಅಪಾರ ಜನಪ್ರಿಯತೆಯಿಂದಾಗಿ, ಪ್ಯಾನ್ ಇಂಡಿಯಾ ಸಿನಿಮಾವಾಯಿತ. ರಾಷ್ಟ್ರೀಯ ಮನ್ನಣೆಯನ್ನು ಗಳಿಸಿತು ಮತ್ತು ಈಗ ಎಲ್ಲರೂ ಕಾಂತಾರ ಪ್ರೀಕ್ವೆಲ್ ಗಾಗಿ ಎದುರು ನೋಡುತ್ತಿದ್ದಾರೆ.
ರಿಷಬ್ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದು, ನಿರ್ದೇಶಕರು ಬೇರೆ ಕಲಾವಿದರ ಬಗ್ಗೆ ಇನ್ನೂ ಘೋಷಿಸಿಲ್ಲ. ತಂತ್ರಜ್ಞರಿಗೆ ಸಂಬಂಧಿಸಿದಂತೆ, ಕಾಂತಾರ ಪ್ರೀಕ್ವೆಲ್ ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್ ಮತ್ತು ಛಾಯಾಗ್ರಾಹಕ ಅರವಿಂದ್ ಎಸ್ ಕಶ್ಯಪ್ ಜೊತೆಗೂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


