ಸಿನಿಮಾ ಸುದ್ದಿ

ಕಿರಾಣಿ ಅಂಗಡಿಗೆ ಬಂದು ಖರೀದಿಸಿದ ರಾಕಿಂಗ್ ಸ್ಟಾರ್ ಯಶ್ ದಂಪತಿ: ಖುಷಿಪಟ್ಟ ಅಭಿಮಾನಿಗಳು!

ಕಿರಾಣಿ ಅಂಗಡಿಗೆ ಬಂದು ಖರೀದಿಸಿದ ರಾಕಿಂಗ್ ಸ್ಟಾರ್ ಯಶ್ ದಂಪತಿ: ಖುಷಿಪಟ್ಟ ಅಭಿಮಾನಿಗಳು!
ಕಿರಾಣಿ ಅಂಗಡಿ ಮುಂದೆ ರಾಕಿಂಗ್ ಸ್ಟಾರ್ ಯಶ್ ದಂಪತಿ
Published On :

ಭಟ್ಕಳ: ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ನಟಿ ರಾಧಿಕಾ ಪಂಡಿತ್‌ ಅವರು ಕಿರಾಣಿ ಅಂಗಡಿ ಮುಂದೆ ಇರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ನಿನ್ನೆಯಿಂದ ವೈರಲ್ ಆಗಿದೆ.

ತಾರಾ ದಂಪತಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿರುವ ಚಿತ್ರಾಪುರ ಮಠಕ್ಕೆ ಮೊನ್ನೆ ಭೇಟಿ ನೀಡಿದ್ದರು. ಮಠದೊಳಗೆ ಧಾರ್ಮಿಕ ವಿಧಿ ವಿಧಾನ ಮುಗಿಸಿ ಸ್ವಾಮೀಜಿ ಬಳಿ ಮಾತನಾಡಿ ಹೊರಗೆ ಬಂದಾಗ ಅಭಿಮಾನಿಗಳು ಯಶ್-ರಾಧಿಕಾರನ್ನು ನೋಡಲು ಜಮಾಯಿಸಿದ್ದರು.

ಯಶ್, ಮಗಳು ಐರಾ ಹಾಗೂ ರಾಧಿಕಾ ತಂದೆ ಕಿರಾಣಿ ಅಂಗಡಿಗೆ ಭೇಟಿ ಕೊಟ್ಟಿದ್ದಾರೆ. ಫೋಟೊದಲ್ಲಿ ಮಗಳು ಐರಾಗೆ ಯಶ್ ಏನೋ ತಿನಿಸು ಕೊಡಿಸುತ್ತಿದ್ದಾರೆ. ಇನ್ನು ರಾಧಿಕಾ ಪಂಡಿತ್‌ ಸಾಮಾನ್ಯರಂತೆ ಕಟ್ಟೆ ಮೇಲೆ ಕುಳಿತು ಐಸ್ ಕ್ರೀಮ್ ಸವಿಯುತ್ತಿದ್ದಾರೆ. ರಾಕಿಂಗ್ ದಂಪತಿ ಸಾಮಾನ್ಯರಂತೆ ಕಿರಾಣಿ ಅಂಗಡಿಯಲ್ಲಿ ಖರೀದಿಸುತ್ತಿರುವ ಫೋಟೊ ಕಂಡು ಫ್ಯಾನ್ಸ್ ಬಹಳ ಖುಷಿಪಟ್ಟಿದ್ದಾರೆ.

ಅಂಗಡಿಯಲ್ಲಿ ಖರೀದಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್
ಅಂಗಡಿಯಲ್ಲಿ ಖರೀದಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶಿರಾಲಿಯಲ್ಲಿ ಚಿತ್ರಾಪುರ ಮಠಕ್ಕೆ ಭೇಟಿ ನೀಡಿದ ಯಶ್ ಅವರು ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಮಠದ ಸುತ್ತ ಯಶ್ ಅಭಿಮಾನಿಗಳು ನೆರೆದಿದ್ದರು. ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದರು. ಚಿತ್ರಾಪುರ ಮಠಕ್ಕೆ ಭೇಟಿ ಕೊಟ್ಟ ಯಶ್ ದಂಪತಿಯನ್ನು ನೋಡಲು ಅಪಾರ ಅಭಿಮಾನಿಗಳು ಜಮಾಯಿಸಿದ್ದರು. ಸ್ಥಳದಲ್ಲಿ ಪೊಲೀಸರನ್ನೂ ನಿಯೋಜಿಸಲಾಗಿತ್ತು.

ಯಶ್ ದಂಪತಿ ಅಭಿಮಾನಿಗಳ ಜೊತೆ
ಯಶ್ ದಂಪತಿ ಅಭಿಮಾನಿಗಳ ಜೊತೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.