Ramayana: 100 ಕೋಟಿ ರೂ ಸಂಭಾವನೆ ತಿರಸ್ಕರಿಸಿದ ಯಶ್; 'ರಾಮಾಯಣ'ದ ದಕ್ಷಿಣ ಭಾರತ ವಿತರಕ ಹಕ್ಕು ಪಡೆದ ರಾಕಿಂಗ್ ಸ್ಟಾರ್!
ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ: ಭಾಗ 1ರಲ್ಲಿ ಯಶ್ ಅಭಿನಯಿಸಿದ್ದು, ಇದರ ಬಿಡುಗಡೆಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಟಾಕ್ಸಿಕ್ ನಂತರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮತ್ತೊಂದು ಬಿಗ್ ಬಜೆಟ್ ಸಿನಿಮಾ, ಅವರ ರಾಮಾಯಣ: ಭಾಗ 1 ದೀಪಾವಳಿಗೆ ಬಿಡುಗಡೆಯಾಗಲು ಸಿದ್ಧವಾಗಿದೆ.
ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ: ಭಾಗ 1ರಲ್ಲಿ ಯಶ್ ಅಭಿನಯಿಸಿದ್ದು, ಇದರ ಬಿಡುಗಡೆಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ವರದಿಗಳ ಪ್ರಕಾರ, ಎರಡು ಭಾಗಗಳಲ್ಲಿ ಬರುತ್ತಿರುವ ರಾಮಾಯಣದಲ್ಲಿ ರಾವಣನ ಪಾತ್ರಕ್ಕಾಗಿ ನಟ ಯಶ್ ಅವರು ಯಾವುದೇ ಸಂಭಾವನೆಯನ್ನು ಪಡೆದಿಲ್ಲ. ಯಶ್ 100 ಕೋಟಿ ಸಂಭಾವನೆಯನ್ನು ತಿರಸ್ಕರಿಸಿದ್ದಾರೆ. ಸಂಭಾವನೆ ಬದಲಾಗಿ ರಾಕಿಂಗ್ ಸ್ಟಾರ್, 'ರಾಮಾಯಣ'ದ ದಕ್ಷಿಣ ಭಾರತ ವಿತರಣಾ ಹಕ್ಕು ಪಡೆದಿದ್ದಾರೆ ಎನ್ನಲಾಗಿದೆ.
ಚಿತ್ರದೊಂದಿಗೆ ಸಹ-ನಿರ್ಮಾಪಕರಾಗಿರುವ ನಟ ಯಶ್ ಅವರು ರಾಮಾಯಣದ ಎರಡೂ ಭಾಗಗಳ ದಕ್ಷಿಣ ಭಾರತದ ಡಿಸ್ಟ್ರಿಬ್ಯೂಷನ್ ರೈಟ್ಸ್ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಳ್ಳಲಿದ್ದು, ಸಾಯಿ ಪಲ್ಲವಿ ಸೀತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸನ್ನಿ ಡಿಯೋಲ್ ಹನುಮಂತನಾಗಿ, ರವಿ ದುಬೆ ಲಕ್ಷ್ಮಣನಾಗಿ, ಅರುಣ್ ಗೋವಿಲ್ ದಶರಥನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
'ರಾಮಾಯಣ: ಪಾರ್ಟ್ 1' ನವೆಂಬರ್ 6 ರಂದು ಬಿಡುಗಡೆ ಮಾಡಲು ಯೋಜಿಸಲಾಗಿದೆ. ಬೃಹತ್ ಬಜೆಟ್‌ನಲ್ಲಿ ಮೂಡುತ್ತಿರುವ ಈ ಚಿತ್ರದ ಬಗ್ಗೆ ಬಾಲಿವುಡ್ ಜೊತೆಗೆ ಸೌತ್‌ನಲ್ಲೂ ಆಸಕ್ತಿ ಇದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಬಿಸಿನೆಸ್ ವಿಚಾರದಲ್ಲಿ ಭಾರಿ ನಿರೀಕ್ಷೆಗಳು ಮೂಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



