MAX ತೆರೆಗೆ: ಪೊಲೀಸ್ ಅಧಿಕಾರಿಯಾಗಿ ಕಿಚ್ಚ ಸುದೀಪ್ ಮಾಸ್ ಅವತಾರ! ಹೇಗಿದೆ ಚಿತ್ರ?
ಎರಡೂವರೆ ವರ್ಷಗಳ ಬಳಿಕ ಕಿಚ್ಚಾ ಸುದೀಪ್ ರ ಸಿನಿಮಾವೊಂದು ತೆರೆಗೆ ಅಪ್ಪಳಿಸಿದ್ದು, ದೊಡ್ಡ ಗ್ಯಾಪ್ ನ ಬಳಿಕ ಅಭಿಮಾನಿಗಳು ಕಿಚ್ಚ ಸುದೀಪ್ ರನ್ನು ದೊಡ್ಡ ಪರದೆ ಮೇಲೆ ಕಂಡು ಖುಷಿಯಾಗಿದ್ದಾರೆ.

ಬೆಂಗಳೂರು: ಕಿಚ್ಚಾ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಮ್ಯಾಕ್ಸ್ (Max the Movie) ಇಂದು ತೆರೆಗೆ ಅಪ್ಪಳಿಸಿದ್ದು, ಸುದೀಪ್ ಅಭಿಮಾನಿಗಳು ಭರ್ಜರಿಯಾಗಿ ಮ್ಯಾಕ್ಸ್ ಚಿತ್ರವನ್ನು ಸ್ವಾಗತಿಸಿದ್ದಾರೆ.
ಕ್ರಿಸ್ಮಸ್ ಹಬ್ಬದ ಸಡಗರದ ನಡುವೆಯೇ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ (Max Movie) ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸಿದ್ದು, ಇಂದು ಬೆಳಗ್ಗೆ 7 ಗಂಟೆಗೆ ರಾಜ್ಯದ 250ಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಿದೆ. ಆ ಮೂಲಕ ಕ್ರಿಸ್ಮಸ್ ಹಬ್ಬದ ಜೊತೆಗೆ ಸುದೀಪ್ ಅಭಿಮಾನಿಗಳಿಗೆ ಮ್ಯಾಕ್ಸ್ ಚಿತ್ರದ ಮೂಲಕ ಡಬಲ್ ಸಂಭ್ರಮ ಸಿಕ್ಕಂತಾಗಿದೆ.
ಬರೋಬ್ಬರಿ ಎರಡೂವರೆ ವರ್ಷಗಳ ಬಳಿಕ ಕಿಚ್ಚಾ ಸುದೀಪ್ ರ ಸಿನಿಮಾವೊಂದು ತೆರೆಗೆ ಅಪ್ಪಳಿಸಿದ್ದು, ದೊಡ್ಡ ಗ್ಯಾಪ್ ನ ಬಳಿಕ ಅಭಿಮಾನಿಗಳು ಕಿಚ್ಚ ಸುದೀಪ್ ರನ್ನು ದೊಡ್ಡ ಪರದೆ ಮೇಲೆ ಕಂಡು ಖುಷಿಯಾಗಿದ್ದಾರೆ. ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್ ತನು ಅವರು ನಿರ್ಮಾಣ ಮಾಡಿದ್ದಾರೆ.
ಪೊಲೀಸ್ ಅಧಿಕಾರಿಯಾಗಿ ಕಿಚ್ಚ
ಮ್ಯಾಕ್ಸ್ ಚಿತ್ರದಲ್ಲಿ ಸುದೀಪ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದು, ಒಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ರಾತ್ರಿಯಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಇತ್ತ ಮ್ಯಾಕ್ಸ್ ಸಿನಿಮಾ ನೋಡೋದಕ್ಕೆ ನರ್ತಕಿ ಥಿಯೇಟರ್ಗೆ ಸುದೀಪ್ ಪತ್ನಿ ಪ್ರಿಯಾ ಹಾಗೂ ಮಗಳು ಆಗಮಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



