ಜಡೇಶಾ ಕೆ ಹಂಪಿ ನಿರ್ದೇಶನದ 'ವಿಕೆ-29' ಚಿತ್ರ ತಂಡಕ್ಕೆ ರಾಜ್ ಬಿ ಶೆಟ್ಟಿ ಸೇರ್ಪಡೆ!
'ವಿಕೆ-29' ಪೋಸ್ಟರ್ನಲ್ಲಿ ಬಿಡುಗಡೆ ಶುಭ ಮುಹೂರ್ತದ ಸಮಯದಲ್ಲಿ ಹೊಸ ವಿಷಯವೊಂದು ಕೇಳಿ ಬಂದಿದೆ. ವಿಶ್ವಾಸಾರ್ಹ ಮೂಲಗಳ ಪ್ರಕಾರ, ತಾರಾಗಣಕ್ಕೆ ರಾಜ್ ಬಿ ಶೆಟ್ಟಿ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಜಡೇಶಾ ಕೆ ಹಂಪಿ ನಿರ್ದೇಶನದ ಮತ್ತು ವಿಜಯ್ ಕುಮಾರ್ ನಟನೆಯ ಸಿನಿಮಾ ಹಲವು ಕಾರಣಗಳಿಗಾಗಿ ನಿರೀಕ್ಷೆ ಮೂಡಿಸಿದೆ. ಆ್ಯಕ್ಷನ್-ಪ್ಯಾಕ್ಡ್ ಫ್ಯಾಮಿಲಿ ಡ್ರಾಮಾ ಎಂದು ಬಿಂಬಿಸಲಾದ ಈ ಚಿತ್ರವು ಏಪ್ರಿಲ್ ಅಂತ್ಯದ ವೇಳೆಗೆ ಶೂಟಿಂಗ್ ಪ್ರಾರಂಭಿಸಲಿದೆ.
ಈ ಸಿನಿಮಾ ಕೆ ಶಿವರಾಮ ಕಾರಂತ್ ಅವರ ಕ್ಲಾಸಿಕ್ ಚೋಮನ ದುಡಿಯಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತದೆ. 'ವಿಕೆ-29' ಪೋಸ್ಟರ್ನಲ್ಲಿ ಬಿಡುಗಡೆ ಶುಭ ಮುಹೂರ್ತದ ಸಮಯದಲ್ಲಿ ಹೊಸ ವಿಷಯವೊಂದು ಕೇಳಿ ಬಂದಿದೆ. ವಿಶ್ವಾಸಾರ್ಹ ಮೂಲಗಳ ಪ್ರಕಾರ, ತಾರಾಗಣಕ್ಕೆ ರಾಜ್ ಬಿ ಶೆಟ್ಟಿ ಸೇರಿದ್ದಾರೆ ಎಂದು ತಿಳಿದು ಬಂದಿದೆ.
'ಒಂದು ಮೊಟ್ಟೆಯ ಕಥೆ' ಮತ್ತು 'ಗರುಡ ಗಮನ ವೃಷಭ ವಾಹನ' ಚಿತ್ರದ ನಿರ್ದೇಶಕರು 'ಟೋಬಿ' ಮತ್ತು 'ಸ್ವಾತಿ ಮುತ್ತಿನ ಮಳೆ ಹನಿ'ಯಂತಹ ಚಿತ್ರಗಳಲ್ಲಿನ ಅವರ ಅಭಿನಯಕ್ಕಾಗಿ ಸಮಾನವಾಗಿ ಗಮನಸೆಳೆದಿದ್ದಾರೆ. ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ '45' ಸಿನಿಮಾದಲ್ಲೂ ಕೂಡ ನಟಿಸುತ್ತಿದ್ದಾರೆ. ಇದರ ಜೊತೆಗೆ ಕೆಲವು ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದಾರೆ. ಮುಖ್ಯವಾಗಿ ಮುಂಬರುವ ಮಮ್ಮುಟ್ಟಿ ಅಭಿನಯದ 'ಟರ್ಬೊ'ದಲ್ಲೂ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದಾರೆ.
'ಗರುಡ ಗಮನ ವೃಷಭ ವಾಹನ'ದಲ್ಲಿ ರಾಜ್ ಮತ್ತು ರಿಷಬ್ ಶೆಟ್ಟಿ ಅವರ ಕಾಂಬಿನೇಷನ್ ನೋಡಿ ಆನಂದಿಸಿದರೆ, ವಿಜಯ್ ಕುಮಾರ್ ಮತ್ತು ರಾಜ್ ಬಿ ಶೆಟ್ಟಿ ಅವರ ಕಾಂಬಿನೇಷನ್ ಮೊದಲ ಬಾರಿಗೆ ದೊಡ್ಡ ಪರದೆಯಲ್ಲಿ ವೀಕ್ಷಿಸುವುದು ಅಷ್ಟೇ ಆಸಕ್ತಿದಾಯಕವಾಗಿದೆ, ಇದು ಖಂಡಿತವಾಗಿಯೂ ಹೈಲೈಟ್ ಆಗಿರುತ್ತದೆ. ತಯಾರಕರು ಚಿತ್ರೀಕರಣವನ್ನು ಪ್ರಾರಂಭಿಸಿದ ನಂತರ ಮತ್ತು ನಟರು ಸೆಟ್ಗೆ ಸೇರಿದ ನಂತರ ಈ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುತ್ತದೆ.
ಈ ನಡುವೆ ಕೋಲಾರ, ಗುಡಿಬಂಡೆ ಸೇರಿದಂತೆ ಹಲವು ಸ್ಥಳಗಳನ್ನು ಶೂಟಿಂಗ್ ಗಾಗಿ 'ವಿಕೆ-29' ಚಿತ್ರತಂಡ ಅಂತಿಮಗೊಳಿಸಿದೆ. ಇನ್ನುಳಿದಂತೆ ರಚಿತಾ ರಾಮ್ ಅವರನ್ನು ನಾಯಕಿ ಎಂದು ಘೋಷಿಸಿದೆ. ಈ ಚಿತ್ರದಲ್ಲಿ ವಿಜಯ್ ಅವರ ಮಗಳು ರಿತನ್ಯಾ ಅವರ ಅಭಿನಯದ ಚೊಚ್ಚಲ ಚಿತ್ರದಲ್ಲಿ 'ಡೇರ್ಡೆವಿಲ್ ಮುಸ್ತಫಾ' ಖ್ಯಾತಿಯ ಶಿಶಿರ್ ಅವರೊಂದಿಗೆ ನಟಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



