ಸಿನಿಮಾ ಸುದ್ದಿ

ವಿಚ್ಛೇದನ ಪ್ರಕರಣ: ಧನುಷ್– ಐಶ್ವರ್ಯಾ ರಜನಿಕಾಂತ್‌ಗೆ ಕೋರ್ಟ್ ನೋಟಿಸ್

ನಟ ಧನುಷ್ ಹಾಗೂ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಇತ್ತೀಚೆಗೆ ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಅಕ್ಟೋಬರ್ 7ರಂದು ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ.

ವಿಚ್ಛೇದನ ಪ್ರಕರಣ: ಧನುಷ್– ಐಶ್ವರ್ಯಾ ರಜನಿಕಾಂತ್‌ಗೆ ಕೋರ್ಟ್ ನೋಟಿಸ್
ಧನುಷ್ – ಐಶ್ವರ್ಯಾ
Published On :

ಚೆನ್ನೈ: ನಟ ಧನುಷ್ ಹಾಗೂ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಇತ್ತೀಚೆಗೆ ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಅಕ್ಟೋಬರ್ 7ರಂದು ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ. ಈ ಸಂಬಂಧ ನೋಟಿಸ್ ನೀಡಿರುವುದಾಗಿ ವರದಿಯಾಗಿದೆ.

ಜನವರಿ 2022 ರಂದು ತಾವಿಬ್ಬರೂ ದೂರ ಆಗುತ್ತಿರುವ ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು ಐಶ್ವರ್ಯ ರಜನಿಕಾಂತ್ ಆ ನಂತರ ಅದನ್ನು ನಟ ಧನುಷ್ ಕೂಡ ಖಚಿತ ಪಡಿಸಿದ್ದರು. ಅದಾದ ನಂತರ ಇಬ್ಬರನ್ನೂ ಒಟ್ಟಾಗಿಸುವ ಪ್ರಯತ್ನ ನಡೆಯಿತು. ಸ್ವತಃ ರಜನಿಕಾಂತ್ ಅವರೇ ಇಬ್ಬರೊಂದಿಗೂ ಮಾತನಾಡಿದ್ದರು. ಆದರೆ, ಪ್ರಯತ್ನ ವಿಫಲವಾಗಿತ್ತು.

ಜನವರಿ 2022ರಲ್ಲೇ ಘೋಷಿಸಿದ್ದು ಈಗ ಕೋರ್ಟ್ ಮೆಟ್ಟಿಲು ಏರಿದೆ. ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ ಎಂದು ಆಪ್ತರು ಖಚಿತ ಪಡಿಸಿದ್ದರು ಎಂದು ಆಂಗ್ಲ ವೆಬ್ ಸೈಟ್ ವೊಂದು ವರದಿ ಮಾಡಿತ್ತು. ಪರಸ್ಪರ ಒಪ್ಪಿಗೆಯಿಂದ ಸೆಕ್ಷನ್ 13 ಬಿ ಅಡಿಯಲ್ಲಿ ಅವರು ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದರು. ಪರಸ್ಪರ ಪ್ರೀತಿಸಿ ಮದುವೆಯಾದ ಈ ಜೋಡಿಗೆ 18 ವರ್ಷಗಳ ನೆನಪುಗಳಿವೆ. ಲಿಂಗ ಮತ್ತು ಯಾತ್ರಾ ಹೆಸರಿನ ಇಬ್ಬರು ಪುತ್ರರೂ ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.