ಝೀರಮ್ ಕಣಿವೆಯಲ್ಲಿ ಕಾಂಗ್ರೆಸ್ ನಾಯಕರ ಹತ್ಯಾಕಾಂಡ ಪ್ರಕರಣ: 13 ವರ್ಷಗಳ ಬಳಿಕ ಎಲ್ಲಾ 10 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಎನ್‌ಐಎ ಕೋರ್ಟ್
2013 Jhiram Ghati Naxal Attack: ಛತ್ತೀಸಗಢದ ಇತಿಹಾಸದಲ್ಲೇ ಅತ್ಯಂತ ಭೀಕರ ಎನ್ನಲಾದ 2013ರ ಝೀರಮ್ ಕಣಿವೆ ನಕ್ಸಲ್ ದಾಳಿ ಪ್ರಕರಣದ ವಿಚಾರಣೆ ನಡೆಸಿದ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ಜಗದಾಲ್‌ಪುರ (ಛತ್ತೀಸ್‌ಗಢ): ಛತ್ತೀಸಗಢದ ಇತಿಹಾಸದಲ್ಲೇ ಅತ್ಯಂತ ಭೀಕರ ಎನ್ನಲಾದ 2013ರ ಝೀರಮ್ ಕಣಿವೆ ನಕ್ಸಲ್ ದಾಳಿ ಪ್ರಕರಣದ ವಿಚಾರಣೆ ನಡೆಸಿದ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಅದರಂತೆ, ಬರೋಬ್ಬರಿ 13 ವರ್ಷಗಳ ಕಾಲ ನಡೆದ ಸುದೀರ್ಘ ನ್ಯಾಯಾಂಗ ವಿಚಾರಣೆಯ ಬಳಿಕ, ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾಗಿದ್ದ ಎಲ್ಲಾ ಹತ್ತು ಮಂದಿ ನಕ್ಸಲರಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಈ ಭೀಕರ ಘಟನೆ 2013ರ ಮೇ 25 ರಂದು ಬಸ್ತಾರ್‌ನ ಝೀರಂ ಕಣಿವೆಯಲ್ಲಿ ನಡೆದಿತ್ತು. ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಪರಿವರ್ತನ ಯಾತ್ರೆ ಕೈಗೊಂಡಿದ್ದರು. ಸುಮಾರು 250 ಮಂದಿ ಸಶಸ್ತ್ರ ನಕ್ಸಲರು ಸಾಮಾನ್ಯ ನಾಗರಿಕರ ವೇಷದಲ್ಲಿ ಬಂದು ಹಠಾತ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಅಂದಿನ ಕೆಪಿಸಿಸಿ ಅಧ್ಯಕ್ಷ ನಂದಕುಮಾರ್ ಪಟೇಲ್ ಮತ್ತು ಅವರ ಪುತ್ರ ದಿನೇಶ್ ಪಟೇಲ್, ಮಾಜಿ ವಿರೋಧ ಪಕ್ಷದ ನಾಯಕ ಮಹೇಂದ್ರ ಕರ್ಮಾ, ಮಾಜಿ ಕೇಂದ್ರ ಸಚಿವ ವಿ.ಸಿ. ಶುಕ್ಲಾ, ಮಾಜಿ ಶಾಸಕ ಉದಯ್ ಮುದ್ಲಿಯಾರ್ ಸೇರಿದಂತೆ 11 ಹಿರಿಯ ನಾಯಕರು ಮತ್ತು ಭದ್ರತಾ ಸಿಬ್ಬಂದಿ ಸೇರಿ ಒಟ್ಟು 29 ಜನರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು. ಜೊತೆಗೆ, 30ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದರು.
ದಾಳಿಯಲ್ಲಿ ಹುತಾತ್ಮರಾದ ಪ್ರಮುಖ ನಾಯಕರು:
ಈ ಅತ್ಯಂತ ಭೀಕರ ರಾಜಕೀಯ ದಾಳಿಯಲ್ಲಿ ಅಂದಿನ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಂದಕುಮಾರ್ ಪಟೇಲ್, ಅವರ ಪುತ್ರ ದಿನೇಶ್ ಪಟೇಲ್, ಸಲ್ವಾ ಜುಡುಮ್ ಸಂಸ್ಥಾಪಕ ಮಹೇಂದ್ರ ಕರ್ಮಾ (ಬಸ್ತಾರ್ ಟೈಗರ್), ಮಾಜಿ ಕೇಂದ್ರ ಸಚಿವ ವಿದ್ಯಾಚರಣ್ ಶುಕ್ಲಾ ಮತ್ತು ಉದಯ್ ಮುದಲಿಯಾರ್ ಸೇರಿದಂತೆ ಪ್ರಮುಖ ರಾಜಕಾರಣಿಗಳು ಹಾಗೂ 10ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಸೇರಿ ಒಟ್ಟು 29 ಜನರು ಬಲಿಯಾಗಿದ್ದರು.
ಮುಂದುವರೆದು, ಘಟನೆಯ ನಂತರ ಎನ್‌ಐಎ ತನಿಖೆ ನಡೆಸಿ ಇಬ್ಬರು ಅಗ್ರ ನಕ್ಸಲ್ ನಾಯಕರು ಸೇರಿದಂತೆ ಒಟ್ಟು 39 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿತ್ತು. ರಂಭದಲ್ಲಿ 11 ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಆದರೆ ವಿಚಾರಣೆಯ ಮಧ್ಯದಲ್ಲೇ ಒಬ್ಬ ಆರೋಪಿ ಜೈಲಿನಲ್ಲೇ ಮೃತಪಟ್ಟಿದ್ದರಿಂದ, ಉಳಿದ 10 ಅಪರಾಧಿಗಳಿಗೆ (ಇದರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ) ಇದೀಗ ಗಲ್ಲು ಶಿಕ್ಷೆಯಾಗಿದೆ. ಇನ್ನು, ಸುದೀರ್ಘ 13 ವರ್ಷಗಳ ಕಾಲ ನಡೆದ ಈ ವಿಚಾರಣೆಯ ಅವಧಿಯಲ್ಲಿ ಎನ್‌ಐಎ ಒಟ್ಟು 101 ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ತಪಾಸಣೆಗೊಳಪಡಿಸಿತ್ತು. ಆರಂಭದಲ್ಲಿ 11 ಆರೋಪಿಗಳ ವಿರುದ್ಧ ವಿಚಾರಣೆ ನಡೆದಿತ್ತಾದರೂ, ಒಬ್ಬ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾಗಲೇ ಮೃತಪಟ್ಟಿದ್ದರಿಂದ ಉಳಿದ 10 ಜನರಿಗೆ ಈಗ ಗಲ್ಲು ಶಿಕ್ಷೆಯಾಗಿದೆ. ಇನ್ನು, ನ್ಯಾಯಾಲಯದ ಈ ತೀರ್ಪಿನ ಅನ್ವಯ, ಶಿಕ್ಷೆಗೆ ಒಳಗಾದ ಅಪರಾಧಿಗಳಿಗೆ ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.
ಏತನ್ಮಧ್ಯೆ, ಛತ್ತೀಸಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯ್ ಅವರು ನ್ಯಾಯಾಲಯದ ಈ ತೀರ್ಪನ್ನು ಸ್ವಾಗತಿಸಿದ್ದು, "ಇದು ಜಗತ್ತಿಗೆ ಸಂದ ನ್ಯಾಯ", ಬಸ್ತಾರ್ ಪ್ರದೇಶವು ಈಗ ಶಾಂತಿಯತ್ತ ಹೆಜ್ಜೆ ಇಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಈ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, "ಕೇವಲ ದಾಳಿ ನಡೆಸಿದ ಕೆಳಹಂತದ ನಕ್ಸಲರಿಗೆ ಶಿಕ್ಷೆಯಾಗಿದೆ. ಆದರೆ ಇದರ ಹಿಂದೆ ದೊಡ್ಡ ರಾಜಕೀಯ ಪಿತೂರಿ ಇತ್ತು, ಅದನ್ನು ಎನ್‌ಐಎ ಸಂಪೂರ್ಣವಾಗಿ ತನಿಖೆ ಮಾಡಿಲ್ಲ. ನಿಜವಾದ ಸೂತ್ರಧಾರರು ಇನ್ನೂ ಹೊರಗಿದ್ದಾರೆ" ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



