ಸಿನಿಮಾ ಸುದ್ದಿ

ಮಾರ್ಚ್ 17ಕ್ಕೆ ವಿಶ್ವದಾದ್ಯಂತ 4,000 ಥಿಯೇಟರ್ ಗಳಲ್ಲಿ 'ಕಬ್ಜ' ಬಿಡುಗಡೆ

ರಿಯಲ್ ಸ್ಟಾರ್ ಉಪೇಂದ್ರ ನಾಯಕ ನಟನಾಗಿ ಅಭಿನಯಿಸಿರುವ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಇದೇ ತಿಂಗಳ 17 ರಂದು ತೆರೆಗೆ ಅಪ್ಪಳಿಸಲಿದೆ. ವಿಶ್ವದಾದ್ಯಂತ 4,000 ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿದ್ದು, ಕೆಜಿಎಫ್-2, ಕಾಂತಾರ ನಂತರ ಮತ್ತೊಂದು ಕನ್ನಡ ಸಿನಿಮಾ ದೇಶಾದ್ಯಂತ ಸಿನಿ ರಸಿಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಮಾರ್ಚ್ 17ಕ್ಕೆ ವಿಶ್ವದಾದ್ಯಂತ 4,000 ಥಿಯೇಟರ್ ಗಳಲ್ಲಿ 'ಕಬ್ಜ' ಬಿಡುಗಡೆ
ಕಬ್ಜ ಚಿತ್ರದ ಫೋಸ್ಟರ್
Published On :

ರಿಯಲ್ ಸ್ಟಾರ್ ಉಪೇಂದ್ರ ನಾಯಕ ನಟನಾಗಿ ಅಭಿನಯಿಸಿರುವ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಇದೇ ತಿಂಗಳ 17 ರಂದು ತೆರೆಗೆ ಅಪ್ಪಳಿಸಲಿದೆ. ವಿಶ್ವದಾದ್ಯಂತ 4,000 ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿದ್ದು, ಕೆಜಿಎಫ್-2, ಕಾಂತಾರ ನಂತರ ಮತ್ತೊಂದು ಕನ್ನಡ ಸಿನಿಮಾ ದೇಶಾದ್ಯಂತ ಸಿನಿ ರಸಿಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಈಗಾಗಲೇ ಮುಂಬೈ, ಹೈದ್ರಾಬಾದ್, ಸೇರಿದಂತೆ ದೇಶದ ಹಲವಡೆ ಭರ್ಜರಿ ಪ್ರಚಾರ ನಡೆಸಿರುವ ಚಿತ್ರತಂಡ, ಬಿಡುಗಡೆಗೆ ಸಜ್ಜಾಗಿದ್ದು, ಮಾರ್ಚ್ 17 ರಂದು ಸಿನಿಮಾ ತೆರೆ ಕಾಣಲಿದೆ ಎಂದು ನಿರ್ದೇಶಕ ಚಂದ್ರು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ವಿಶ್ವದಾದ್ಯಂತ ಹಲವು ಭಾಷೆಗಳಲ್ಲಿ 4,000 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. 

ಎಂಟಿಬಿ ನಾಗರಾಜ್ ಪ್ರಸ್ತುತಪಡಿಸಿದ ಮತ್ತು ಸಿದ್ಧೇಶ್ವರ ಎಂಟರ್‌ಪ್ರೈಸಸ್ ಅಡಿಯಲ್ಲಿ ಚಂದ್ರು ನಿರ್ಮಿಸಿರುವ ಚಿತ್ರದಲ್ಲಿ ಶ್ರೀಯಾ ಶರಣ್ ನಾಯಕಿಯಾಗಿದ್ದು, ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅನೂಪ್ ರೇವಣ್ಣ, ಪ್ರಮೋದ್ ಶೆಟ್ಟಿ, ಮುರಳಿ ಶರ್ಮಾ, ಕಬೀರ್ ದುಹಾನ್ ಸಿಂಗ್, ಜಯಪ್ರಕಾಶ್ ಮತ್ತು ಕೋಟಾ ಶ್ರೀನಿವಾಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕಬ್ಜ ಸಿನಿಮಾದ ತಾಂತ್ರಿಕ ತಂಡದಲ್ಲಿ ಕ್ಯಾಮೆರಾದ ಹಿಂದೆಎಜೆ ಶೆಟ್ಟಿ ಮತ್ತು ಸಂಕಲನಕಾರರಾಗಿ ಮಹೇಶ್ ಎಸ್ ರೆಡ್ಡಿ ಮತ್ತು ಸಂಗೀತ ನಿರ್ದೇಶಕರಾಗಿ ರವಿ ಬಸ್ರೂರ್ ಅವರನ್ನು ಒಳಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.