ಸಿನಿಮಾ ಸುದ್ದಿಮಾರ್ಚ್ 17ಕ್ಕೆ ವಿಶ್ವದಾದ್ಯಂತ 4,000 ಥಿಯೇಟರ್ ಗಳಲ್ಲಿ 'ಕಬ್ಜ' ಬಿಡುಗಡೆ
ರಿಯಲ್ ಸ್ಟಾರ್ ಉಪೇಂದ್ರ ನಾಯಕ ನಟನಾಗಿ ಅಭಿನಯಿಸಿರುವ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಇದೇ ತಿಂಗಳ 17 ರಂದು ತೆರೆಗೆ ಅಪ್ಪಳಿಸಲಿದೆ. ವಿಶ್ವದಾದ್ಯಂತ 4,000 ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿದ್ದು, ಕೆಜಿಎಫ್-2, ಕಾಂತಾರ ನಂತರ ಮತ್ತೊಂದು ಕನ್ನಡ ಸಿನಿಮಾ ದೇಶಾದ್ಯಂತ ಸಿನಿ ರಸಿಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.