ಸಿನಿಮಾ ಸುದ್ದಿ

ಕೆ.ಡಿ ಸಿನಿಮಾಗಾಗಿ 23 ದಿನದಲ್ಲಿ 18 ಕೆಜಿ ತೂಕ ಇಳಿಸಿಕೊಂಡ ಧ್ರುವ ಸರ್ಜಾ!

ಜೋಗಿ ಪ್ರೇಮ್ ನಿರ್ದೇಶನದ ಕೆ.ಡಿ ಸಿನಿಮಾಗಾಗಿ ನಟ ಧ್ರುವ ಸರ್ಜಾ ತೂಕ ಇಳಿಸಿಕೊಂಡಿದ್ದಾರೆ. ಈ ವಿಷಯವನ್ನು ಸ್ವತಃ ಪ್ರೇಮ್ ಅವರೇ ಹಂಚಿಕೊಂಡಿದ್ದಾರೆ.

ಕೆ.ಡಿ ಸಿನಿಮಾಗಾಗಿ 23 ದಿನದಲ್ಲಿ 18 ಕೆಜಿ ತೂಕ ಇಳಿಸಿಕೊಂಡ ಧ್ರುವ ಸರ್ಜಾ!
ಪ್ರೇಮ್ ಮತ್ತು ಧ್ರುವ ಸರ್ಜಾ
Published On :

ಜೋಗಿ ಪ್ರೇಮ್ ನಿರ್ದೇಶನದ ಕೆ.ಡಿ ಸಿನಿಮಾಗಾಗಿ ನಟ ಧ್ರುವ ಸರ್ಜಾ ತೂಕ ಇಳಿಸಿಕೊಂಡಿದ್ದಾರೆ. ಈ ವಿಷಯವನ್ನು ಸ್ವತಃ ಪ್ರೇಮ್ ಅವರೇ ಹಂಚಿಕೊಂಡಿದ್ದಾರೆ.

ಕೆವಿಎನ್‌ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಇದಾಗಿದ್ದು ಧ್ರುವ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಏಕೆಂದರೆ ಇದ್ದಕ್ಕಿದ್ದಂತೆ ಸಣ್ಣಗಾಗಿರು ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. 

'ಕೆಡಿ ಯುದ್ಧ ಭೂಮಿಗೆ ಎಂಟರ್‌ ಆಗಲು ಧ್ರುವ ಸರ್ಜಾ ರೆಡಿಯಾಗಿದ್ದಾರೆ. 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಯುದ್ಧವು ನಾಯಕನನ್ನು ಬಿಡಿಸಲು ಸಿದ್ಧವಾಗಿದೆ' ಎಂದು ಪ್ರೇಮ್ ಬರೆದುಕೊಂಡಿದ್ದಾರೆ.

ಕೆಡಿ ಸಿನಿಮಾ ಅನೌನ್ಸ್ ಮಾಡಿದ ಆರಂಭದಲ್ಲಿ ಸೆರೆ ಹಿಡಿದ ಫೋಟೋ ಮತ್ತು ಈಗ ತೂಕ ಇಳಿಸಿಕೊಂಡ ನಂತರ ಧ್ರುವ ಹೇಗೆ ಕಾಣಿಸಿಕೊಳ್ಳುತ್ತಿದ್ದಾರೆಂದು ಪ್ರೇಮ್ ಅಪ್ಲೋಡ್‌ ಮಾಡಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಧ್ರುವ ತೂಕ ಕಳೆದುಕೊಂಡಿರುವುದಕ್ಕೆ ಅಭಿಮಾನಿಗಳು ಗಾಬರಿ ಆಗಿದ್ದಾರೆ. ಸಣ್ಣ ದಪ್ಪ ಅಂತ ಆಗಾಗ ಬದಲಾಗುವುದಕ್ಕೆ ಹೋಗಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಪಾತ್ರಕ್ಕಾಗಿ ಧ್ರುವ ಸರ್ಜಾ ಡೆಡಿಕೇಷನ್ ಹೇಗಿರುತ್ತೆ ಎನ್ನುವುದನ್ನು ಬಿಡಿಸಿ ಹೇಳುವುದು ಬೇಕಾಗಿಲ್ಲ. ಒಂದು ಸಿನಿಮಾ ಮುಗಿಯೋವರೆಗೂ ಮತ್ತೊಂದು ಸಿನಿಮಾ ಒಪ್ಪಿಕೊಳ್ಳದ ಧ್ರುವ ಪಾತ್ರಕ್ಕಾಗಿ ತೂಕ ಹೆಚ್ಚಿಸುವುದು, ಇಳಿಸುವುದು, ಬಾಡಿ ಬಿಲ್ಡ್ ಮಾಡುವುದನ್ನು ಮಾಡುತ್ತಲೇ ಇರುತ್ತಾರೆ.

ಈ ಹಿಂದೆ 'ಪೊಗರು' ಚಿತ್ರದ ಶಿವನ ಪಾತ್ರಕ್ಕೂ ಇಂತದ್ದೇ ಸಾಹಸ ಮಾಡಿದ್ದರು. ಇದೀಗ ಇದೀಗ 'ಕೆಡಿ' ಚಿತ್ರಕ್ಕಾಗಿ 18 ಕೆಜಿ ತೂಕ ಇಳಿಸಿಕೊಂಡು ಸಿಕ್ಕಾಪಟ್ಟೆ ಸ್ಲಿಮ್ ಆಗಿ ದರ್ಶನ ಕೊಟ್ಟಿದ್ದಾರೆ. ಹಿಂದೆ ತಾವು ದಪ್ಪಗೆ ಇದ್ದ ಫೋಟೊ ಹಾಗೂ ಈಗ ಸಣ್ಣಗಾಗಿರುವ ಫೋಟೊವನ್ನು ಕೊಲಾಜ್ ಮಾಡಿ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.