ರಮೇಶ್ - ಗಣೇಶ್ ಕಾಂಬಿನೇಷನ್‌ನ ಮಲ್ಟಿಸ್ಟಾರರ್ ಸಿನಿಮಾಗೆ ವಿಖ್ಯಾತ್ ಆ್ಯಕ್ಷನ್ ಕಟ್!
ಪುಷ್ಪಕ ವಿಮಾನ ಮತ್ತು ಮಾನ್ಸೂನ್ ರಾಗದಂತಹ ಸಿನಿಮಾ ನಿರ್ಮಿಸಿರುವ ವಿಖ್ಯಾತ್ ತಮ್ಮ ಆರನೇ ಸಿನಿಮಾ ನಿರ್ಮಾಣದ ಮೂಲಕ ದಶಕಗಳ ತಮ್ಮ ನಿರ್ದೇಶನದ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾರೆ.

ಪುಷ್ಪಕ ವಿಮಾನ ಮತ್ತು ಮಾನ್ಸೂನ್ ರಾಗದಂತಹ ಸಿನಿಮಾ ನಿರ್ಮಿಸಿರುವ ವಿಖ್ಯಾತ್ ತಮ್ಮ ಆರನೇ ಸಿನಿಮಾ ನಿರ್ಮಾಣದ ಮೂಲಕ ದಶಕಗಳ ತಮ್ಮ ನಿರ್ದೇಶನದ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾರೆ. ಚಲನಚಿತ್ರ ನಿರ್ಮಾಪಕ ವಿಖ್ಯಾತ್ ಎಆರ್, ಮೂಲತಃ ನಿರ್ದೇಶಕರಾಗಲು ಬಯಸಿದ್ದರು, ಆದರೆ ಅನಿರೀಕ್ಷಿತವಾಗಿ ನಿರ್ಮಾಣಕ್ಕೆ ತೊಡಗಿದರು.
ನಟ ರಮೇಶ್ ಮತ್ತು ನಟ ಗಣೇಶ್ ಕಾಂಬಿನೇಷನ್‌ನ ಈ ಮಲ್ಟಿಸ್ಟಾರರ್ ಸಿನಿಮಾವನ್ನು ವಿಖ್ಯಾತ್ ಎ ಆರ್ ನಿರ್ದೇಶನ ಮಾಡಲಿದ್ದಾರೆ. ಕನ್ನಡದಲ್ಲಿ ಪುಷ್ಪಕ ವಿಮಾನ, ಇನ್ಸ್‌ಪೆಕ್ಟರ್ ವಿಕ್ರಮ್, ಮಾನ್ಸೂನ್ ರಾಗ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಇದೇ ಮೊದಲ ಬಾರಿಗೆ ನಿರ್ದೇಶನಕ್ಕೂ ಇಳಿದಿದ್ದಾರೆ. ರಮೇಶ್ ಅರವಿಂದ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಲಾಗಿದೆ.
ಇನ್ನೂ ಟೈಟಲ್ ಇಡದ ಈ ಸಿನಿಮಾದಲ್ಲಿ ಮೊದಲ ಬಾರಿಗೆ ರಮೇಶ್ ಅರವಿಂದ್ ಮತ್ತು ಗಣೇಶ್ ಒಟ್ಟಾಗಿ ನಡೆಸುತ್ತಿದ್ದಾರೆ. ರಮೇಶ್ ಅರವಿಂದ್ ಮತ್ತು ಗಣೇಶ್ ವಿದೇಶದಲ್ಲಿ ಸೈನಿಕರ ನಡುವೆ ನಿಂತಿರುವ ಒಂದು ಫೋಟೋ ಕಾಣಬಹುದಾಗಿದೆ. ಇದೊಂದು ಎಮೋಷನಲ್ ಕಥೆಯಾಗಿದ್ದು ವಿಶಿಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಯಾರೆಲ್ಲ ಈ ಸಿನಿಮಾಕ್ಕಾಗಿ ಕೆಲಸ ಮಾಡಲಿದ್ದಾರೆ? ಯಾವಾಗ ಈ ಸಿನಿಮಾ ಶುರುವಾಗಲಿದೆ ಎಂಬೆಲ್ಲ ಮಾಹಿತಿಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ. ಹಲವು ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗಲಿದೆ.
ನನ್ನ 100 ನೇ ಸಿನಿಮಾ ಪುಷ್ಪಕ ವಿಮಾನಕ್ಕೆ ವಿಖ್ಯಾತ್ ನಿರ್ಮಾಣದ ಹೊಣೆ ವಹಿಸಿಕೊಂಡಿದ್ದರು. ನಿರ್ದೇಶಕನಾಗುವ ಅವರ ಮೂಲ ಕನಸು ನನಸಾಗಬೇಕು ಎಂದು ನಾನು ಯಾವಾಗಲೂ ಬಯಸಿದ್ದೆ. ಅವರ ಮೊದಲ ನಿರ್ದೇಶನದ ಚಿತ್ರದಲ್ಲಿ, ಹೆಚ್ಚಿನ ಸಾಮರ್ಥ್ಯ ಹೊಂದಿರುವ ಅತ್ಯಂತ ಸೂಕ್ಷ್ಮವಾದ ವಿಷಯ ಆಯ್ಕೆ ಮಾಡಿದ್ದಾರೆ ಎಂದು ರಮೇಶ್ ಅರವಿಂದ್ ತಿಳಿಸಿದ್ದಾರೆ.
ಗಣೇಶ್ ಅವರೊಂದಿಗೆ ಕೆಲಸ ಮಾಡುವ ಬಗ್ಗೆ ಮಾತನಾಡಿದ ನಟ ರಮೇಶ್, ಈ ಹಿಂದೆಯೇ ರಮೇಶ್ ಮತ್ತು ಗಣೇಶ್ ಒಟ್ಟಿಗೆ ಕೆಲಸ ಮಾಡಿದ್ದರು. ರಾಕ್‌ಲೈನ್ ವೆಂಕಟೇಶ್, ಅಲ್ಲು ಅರವಿಂದ್ ನಿರ್ಮಿಸಿದ್ದ 'ಸುಂದರಾಂಗ ಜಾಣ' ಚಿತ್ರಕ್ಕೆ ರಮೇಶ್ ಅರವಿಂದ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಅಲ್ಲಿ ಅವರು ಬರೀ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಗಣೇಶ್ ಹೀರೋ ಆಗಿದ್ದರೆ, ಶಾನ್ವಿ ಶ್ರೀವಾಸ್ತವ ನಾಯಕಿಯಾಗಿದ್ದರು. ಆದರೆ ಈಗ ಗಣೇಶ್ ಮತ್ತು ರಮೇಶ್ ಇಬ್ಬರು ಒಟ್ಟಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ.
ನಾವು ಒಟ್ಟಿಗೆ ಕೆಲಸ ಮಾಡಲು ಅನೇಕ ಆಫರ್ ಗಳು ಬಂದಿವೆ, ಆದರೆ ನೀವು ಇಬ್ಬರು ನಾಯಕರನ್ನು ಹಾಕಿದಾಗ, ಅವರ ಪಾತ್ರಗಳು ಗಣನೀಯ ಮತ್ತು ಸಮರ್ಥನೀಯವಾಗಿರಬೇಕು ಎಂದು ನಾನು ನಂಬುತ್ತೇನೆ. ಈ ಸಿನಿಮಾದಲ್ಲಿ ಆ ಎಲ್ಲಾ ಕಾವ್ಯಾತ್ಮಕ ಅಂಶಗಳಿವೆ ಎಂದು ರಮೇಶ್ ಅರವಿಂದ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


