ಸಿನಿಮಾ ಸುದ್ದಿ

ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ಪ್ರಥಮ್

ನಟ, ನಿರ್ದೇಶಕ, ಬಿಗ್ ಬಾಸ್ ವಿಜೇತ ಪ್ರಥಮ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಡ್ಯದ ಭಾನುಶ್ರೀ ಜೊತೆ ಅವರು ಸರಳವಾಗಿ ಮದುವೆಯಾಗಿದ್ದಾರೆ.

ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ಪ್ರಥಮ್
ನಟ ಪ್ರಥಮ್ ವಿವಾಹ
Published On :

ನಟ, ನಿರ್ದೇಶಕ, ಬಿಗ್ ಬಾಸ್  ವಿಜೇತ ಪ್ರಥಮ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಡ್ಯದ ಭಾನುಶ್ರೀ ಜೊತೆ ಅವರು ಸರಳವಾಗಿ ಮದುವೆಯಾಗಿದ್ದಾರೆ.

ಈ ಜೋಡಿಯನ್ನು ಶುಭ ಹಾರೈಸುವುದಕ್ಕಾಗಿ ಲವ್ಲಿ ಸ್ಟಾರ್ ಪ್ರೇಮ್, ಧ್ರುವ ಸರ್ಜಾ, ಗಾಯಕಿ ಇಶಾನಿ, ರಕ್ಷಕ್ ಬುಲೆಟ್ ಸೇರಿದಂತೆ ಹಲವಾರು ತಾರೆಯರು ಆಗಮಿಸಿದ್ದರು. ಎಲ್ಲರನ್ನೂ ಮದುವೆ ಕರೆಯಲಾರೆ ಎಂದು ಮೊದಲೇ ಪ್ರಥಮ್ ತಿಳಿಸಿದ್ದರು. ಎರಡು ಕುಟುಂಬಗಳ ಸದಸ್ಯರು ಮತ್ತು ಆಪ್ತರ ಮುಂದೆ ಸರಳವಾಗಿ ಮದುವೆ ಆಗುವುದಾಗಿ ಅವರು ತಿಳಿಸಿದ್ದರು. ಹಾಗೆಯೇ ಪ್ರಥಮ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ನನ್ನದು ಕಂಪ್ಲೀಟ್ ಅರೇಂಜ್ಡ್ ಮ್ಯಾರೇಜ್. ಯಾವುದೇ ಆಡಂಬರ, ವೈಭವ ಇರುವುದಿಲ್ಲ. ನೀವೆಲ್ಲರೂ ಹೇಗೆ ಬದುಕುತ್ತಿದ್ದೀರೋ ನಾವು ಕೂಡ ಹಾಗೇ. ನನ್ನ ಕೈಹಿಡಿಯುವವರು ಮಾಧ್ಯಮ, ಸೋಷಿಯಲ್ ಮೀಡಿಯಾ, ಪಬ್ಲಿಸಿಟಿ ಇಂದ ತುಂಬಾ ದೂರ. ಸಿದ್ಧರಾಮಯ್ಯ, ರವಿಚಂದ್ರನ್ ಅವ್ರ ಹೆಂಡ್ತಿ ಥರ ಅಂದುಕೊಳ್ಳಿ. ಮದುವೆ ಅವ್ರು ಹೇಗೇ ಮಾಡುತ್ತಾರೋ ಅವರಿಷ್ಟ. ನನಗೆ ದೇವಸ್ಥಾನದಲ್ಲಿ ಆಗುವ ಆಸೆ. ಅವ್ರಿಷ್ಟದಂತೆ ಅವ್ರು ಮಾಡ್ಲಿ ಬಿಡಿ. ನನ್ನ ಕಡೆಯಿಂದ ಒಂದು 200-300 ಜನರಿಗೆ ಒಂದು ಸಿಂಪಲ್ ಬೀಗರ ಊಟ‌. ಬಹುಶಃ ನಮ್ಮ ಕುಟುಂಬದ ಕೊನೆಯ ನಾನ್‌ವೆಜ್ ಊಟ ಇದಾಗಿರಬಹುದು’’ ಎಂದು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಪ್ರಥಮ್ ಬರೆದುಕೊಂಡಿದ್ದರು.

ಕಳೆದ ವಾರವಷ್ಟೇ ಇವರು ಸೋಷಿಯಲ್ ಮೀಡಿಯಾದಲ್ಲಿ, ‘ಮುಂದಿನ ವಾರ ಮದುವೆ. ಅಲ್ಲೇ ಬಂದು ಆಶೀರ್ವಾದ ಮಾಡಬೇಕು ಅಂತೇನೂ ಇಲ್ಲ. ಕರೆಯೋಕೆ ಸಂಭ್ರಮವೂ ಇಲ್ಲ. ಆಹ್ವಾನ ಪತ್ರಿಕೆ ತಲುಪಿಸೋದೇ ಹರಸಾಹಸ. ಹಾಗಂತ ಸುಮ್ಮನೆ ಫಾರ್ವರ್ಡ್ ಮೇಸೆಜ್ ಹಾಕಿ ನಿಮ್ಮನ್ನ ಮದುವೆಗೆ ಕಾಟಾಚಾರಕ್ಕೆ ಕರೆಯೋದಿಲ್ಲ. ಈಗ ಎಲ್ಲಿರ್ತೀರೋ ಅಲ್ಲಿಂದಲೇ ಹಾರೈಸಿ. ಗ್ರ್ಯಾಂಡ್ ಆಗಬಹುದಿತ್ತು. ನನಗೆ ಆಸಕ್ತಿ ಇಲ್ಲ. ಸರಳವಾಗಿ ಆಗ್ತಿರೋ ಕಾರಣ ನೀವು ಇದ್ದಲ್ಲಿಯೇ ಹಾರೈಸಿ ಎಂದು ಪ್ರಥಮ್ ಬರೆದುಕೊಂಡಿದ್ದಾರೆ.

ಮಂಡ್ಯ ಮೂಲದ ಹುಡುಗಿ ಭಾನುಶ್ರೀ. ಮಾಸ್ಟರ್ ಡಿಗ್ರಿ ಓದಿರುವ ಭಾನುಶ್ರೀ ತುಂಬಾ ಸಿಂಪಲ್ ಹುಡುಗಿ ಅಂತೆ. ಹಿತವಾಗಿ ಮಿತವಾಗಿ ಮಾತನಾಡುವ ಭಾನುಶ್ರೀ ಸೋಷಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಂಡಿದ್ದಾರೆ. ಭಾನುಶ್ರೀ ಹಾಗೂ ಪ್ರಥಮ್‌ಗೆ ದೇವಸ್ಥಾನದಲ್ಲಿ ಮದುವೆಯಾಗುವ ಆಸೆ ಇತ್ತು. ಆದರೆ, ಕುಟುಂಬಸ್ಥರ ನಿರ್ಧಾರದಂತೆ ಸರಳವಾಗಿ, ಅಷ್ಟೇ ಸಾಂಪ್ರದಾಯಿಕವಾಗಿ ಪ್ರಥಮ್ ಹಾಗೂ ಭಾನುಶ್ರೀ ವಿವಾಹ ನೆರವೇರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.