ನೈಜ ಘಟನೆ ಆಧರಿತ ಮಹಿಳಾ ಪ್ರಧಾನ ಸಿನಿಮಾಗೆ 'ಪ್ರೇಮಂ ಪೂಜ್ಯಂ' ಖ್ಯಾತಿಯ ಬೃಂದಾ ಆಚಾರ್ಯ ನಾಯಕಿ!
ಪ್ರೇಮಂ ಪೂಜ್ಯಂ ಚಿತ್ರದಲ್ಲಿನ ಪಾತ್ರದ ಮೂಲಕ ಗಮನ ಸೆಳೆದಿರುವ ಮತ್ತು ಕೊನೆಯದಾಗಿ ಜೂಲಿಯೆಟ್ 2 ನಲ್ಲಿ ಕಾಣಿಸಿಕೊಂಡಿದ್ದ ನಟಿ ಬೃಂದಾ ಆಚಾರ್ಯ ಇದೀಗ ಮತ್ತೊಂದು ಆಸಕ್ತಿದಾಯಕ ಯೋಜನೆಗೆ ಸಹಿ ಹಾಕಿದ್ದಾರೆ.

ಪ್ರೇಮಂ ಪೂಜ್ಯಂ ಚಿತ್ರದಲ್ಲಿನ ಪಾತ್ರದ ಮೂಲಕ ಗಮನ ಸೆಳೆದಿರುವ ಮತ್ತು ಕೊನೆಯದಾಗಿ ಜೂಲಿಯೆಟ್ 2 ನಲ್ಲಿ ಕಾಣಿಸಿಕೊಂಡಿದ್ದ ನಟಿ ಬೃಂದಾ ಆಚಾರ್ಯ ಇದೀಗ ಮತ್ತೊಂದು ಆಸಕ್ತಿದಾಯಕ ಯೋಜನೆಗೆ ಸಹಿ ಹಾಕಿದ್ದಾರೆ.
ರೀತು ಎಂಬ ಶೀರ್ಷಿಕೆಯ ಈ ಚಿತ್ರಕ್ಕೆ ಡಾ. ಗೌರಿಶ್ರೀ ಕಥೆ, ಚಿತ್ರಕಥೆ, ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ. ಜನರಕ್ಷಕ ಮತ್ತು ಅಮೂಲ್ಯ ನಂತರ ಗೌರಿ ಶ್ರೀ ಅವರ ಮೂರನೇ ಚಿತ್ರ ಇದಾಗಿದೆ. ಚಿತ್ರ ಮಂಗಳವಾರ ಸೆಟ್ಟೇರಿದ್ದು, ಬೃಂದಾ ರೀತು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
'ರೀತು ಅಂದರೆ ಋತುಗಳು, ಇದು ಮಂಡ್ಯದ ನೈಜ ಕಥೆಯನ್ನು ಆಧರಿಸಿದೆ. ನಾನು ಬಬ್ಲಿ, ಸ್ವಾವಲಂಭಿ ಹುಡುಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಮದುವೆಯ ನಂತರ ಆಕೆಯ ಜೀವನದಲ್ಲಿ ತಿರುವುಗಳಿಗೆ ಕಾರಣವಾಗುತ್ತದೆ' ಎಂದು ಮಹಿಳಾ ನಿರ್ದೇಶಕಿಯೊಂದಿಗೆ ಕೆಲಸ ಮಾಡುವ ತಮ್ಮ ಹರ್ಷವನ್ನು ವ್ಯಕ್ತಪಡಿಸುತ್ತಾರೆ ಬೃಂದಾ.
ಬೃಂದಾ ಅವರಲ್ಲದೆ, ರೀತು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಆರ್ಯನ್, ಸುರೇಂದ್ರ, ಶೋಭರಾಜ್, ನಾಗೇಂದ್ರ ಅರಸ್, ಲಯ ಕೋಕಿಲಾ, ಆರಾಧ್ಯ ಮತ್ತು ತೇಜೆಸ್ವಿನಿ ನಟಿಸಿದ್ದಾರೆ. ಚಿತ್ರಕ್ಕೆ ಹೇಮಂತ್ ಸಂಗೀತ, ಸಂದೀಪ್ ಹೊನ್ನಾಳಿ ಛಾಯಾಗ್ರಹಣವಿದೆ.
ಈಮಧ್ಯೆ, ಬೃಂದಾ ಶಶಾಂಕ್ ಅವರ ಮುಂಬರುವ ಚಿತ್ರ ಕೌಸಲ್ಯ ಸುಪ್ರಜಾ ರಾಮ ಮತ್ತು ಇನ್ನೊಂದು ಕನ್ನಡ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ನಟಿ ವಿಎಫ್‌ಎಕ್ಸ್-ಹೆವಿ ಚಿತ್ರದೊಂದಿಗೆ ತಮಿಳಿಗೂ ಪದಾರ್ಪಣೆ ಮಾಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


