'ಕೌಸಲ್ಯ ಸುಪ್ರಜಾ ರಾಮ' ಚಿತ್ರದಲ್ಲಿ ಬೃಂದಾ ಆಚಾರ್ಯ ನಟನೆ
ನಿರ್ದೇಶಕ ಶಶಾಂಕ್ ಅವರ ಮುಂದಿನ ಚಿತ್ರದಲ್ಲಿ ಕೃಷ್ಣ ನಾಯಕ ನಟನಾಗಿದ್ದರೆ, ನಾಯಕ ನಟಿ ಪಾತ್ರದಲ್ಲಿ ಬೃಂದಾ ಆಚಾರ್ಯ ಬಣ್ಣ ಹಚ್ಚಲಿದ್ದಾರೆ.

ನಿರ್ದೇಶಕ ಶಶಾಂಕ್ ಅವರ ಮುಂದಿನ ಚಿತ್ರದಲ್ಲಿ ಕೃಷ್ಣ ನಾಯಕ ನಟನಾಗಿದ್ದರೆ, ನಾಯಕ ನಟಿ ಪಾತ್ರದಲ್ಲಿ ಬೃಂದಾ ಆಚಾರ್ಯ ಬಣ್ಣ ಹಚ್ಚಲಿದ್ದಾರೆ.
ಪ್ರೇಮಮ್ ಪೂಜ್ಯಮ್, ಜ್ಯೂಲಿಯೆಟ್-2 ನಲ್ಲಿ ನಟಿಸಿದ್ದ ನಟಿ, ಈಗ ಕೃಷ್ಣ ಹಾಗೂ ಶಶಾಂಕ್ ಅವರೊಂದಿಗೆ ಮೊದಲ ಬಾರಿಗೆ ಸಿನಿಮಾದ ಯೋಜನೆಯೊಂದಕ್ಕೆ ಜೊತೆಯಾಗಿದ್ದಾರೆ. ಕೌಟುಂಬಿಕ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ತಾಯಿ-ಮಗನ ಸೆಂಟಿಮೆಂಟ್ ಇರಲಿದೆ.
ನಟಿ ಬೃಂದಾದ ಪಾತ್ರದ ಬಗ್ಗೆ ವಿವರ ಹಂಚಿಕೊಂಡಿರುವ ಶಶಾಂಕ್, ನಟಿ ಶಿವಾನಿ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ಸಾಂಪ್ರದಾಯಿಕ ಹಾಗೂ ಆಧುನಿಕ ದೃಷ್ಟಿಕೋನದ ನಡುವೆ ಸಮತೋಲನ ಕಾಯ್ದುಕೊಳ್ಳುವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಅವರ ಪಾತ್ರ ಇಂದಿನ ಪೀಳಿಗೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿರುವ ನಿರ್ದೇಶಕ ಶಶಾಂಕ್, ಬೃಂದಾ ಅವರನ್ನು ಪ್ರತಿಭಾವಂತ ನಟಿ ಎಂದು ಹೇಳಿದ್ದಾರೆ.
ಸಿನಿಮಾಗೆ ಆಫರ್ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡಿರುವ ಬೃಂದಾ, ಮತ್ತೊಂದು ಸಿನಿಮಾ ಶೂಟಿಂಗ್ ವೇಳೆಯಲ್ಲಿ ನಿರ್ದೇಶಕರು ನನ್ನನ್ನು ನೋಡಿದ್ದರು. ನಾನೂ ಅವರ ಸಿನಿಮಾಗಳ ಅಭಿಮಾನಿಯಾಗಿದ್ದೆ, ಮೊಗ್ಗಿನ ಮನಸು ನನ್ನ ಅಚ್ಚುಮೆಚ್ಚಿನ ಚಿತ್ರ. ಅವರೊಂದಿಗೆ ಕೆಲಸ ಮಾಡಲು ನಾನೂ ಆಸಕ್ತಳಾಗಿದ್ದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


