Kousalya Supraja Rama

ಡಾರ್ಲಿಂಗ್ ಕೃಷ್ಣ ಅಭಿನಯದ 'ಕೌಸಲ್ಯಾ ಸುಪ್ರಜಾ ರಾಮ' ಒಟಿಟಿಯಲ್ಲಿ ಬಿಡುಗಡೆ!
ಶಶಾಂಕ್ ಬರೆದು ನಿರ್ದೇಶಿಸಿದ ಇತ್ತೀಚಿನ ಕನ್ನಡ ಚಲನಚಿತ್ರ ಕೌಸಲ್ಯ ಸುಪ್ರಜಾ ರಾಮ ಇದೀಗ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಾಗಿದೆ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ನಾಗಭೂಷಣ್ ಮತ್ತು ಬೃಂದಾ ಆಚಾರ್ಯ ನಟಿಸಿದ್ದಾರೆ.

ಜೈಲರ್, ಗದರ್ 2 ಸಿನಿಮಾಗಳ ನಡುವೆಯೂ ಗೆದ್ದ ಕನ್ನಡದ ಚಿತ್ರಗಳು; ಸಿನಿಪ್ರೇಮಿಗಳ ಫುಲ್ ಮಾರ್ಕ್ಸ್!
ಕನ್ನಡದ ‘ಕೌಸಲ್ಯ ಸುಪ್ರಜಾ ರಾಮ’ ಮತ್ತು ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಗಳು ಹಿಟ್ ಆಗಿ ಸಿನಿಪ್ರೇಮಿಗಳ ಮನ ಗೆಲ್ಲುತ್ತಿವೆ. ಬ್ಲಾಕ್‌ಬಸ್ಟರ್ ಚಿತ್ರಗಳಾದ 'ಗದರ್ 2' ಮತ್ತು ರಜಿನಿಕಾಂತ್ ನಟನೆಯ 'ಜೈಲರ್' ಸಿನಿಮಾಗಳ ಸುತ್ತಲಿನ ದೊಡ್ಡ ಹೈಪ್ ನಡುವೆಯೂ ಕೌಟುಂಬಿಕ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುವಲ್ಲಿ ಈ ಎರಡೂ ಚಿತ್ರಗಳು ಯಶಸ್ವಿಯಾಗಿವೆ.

ಜೈಲರ್, ಭೋಳಾ ಶಂಕರ್ ಗಾಗಿ, ಕನ್ನಡದ ಕೌಸಲ್ಯ ಸುಪ್ರಜಾ ರಾಮಾ ಚಿತ್ರದ ಎತ್ತಂಗಡಿ, ಚಿತ್ರತಂಡದಿಂದ ಪ್ರತಿಭಟನೆ
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಮತ್ತು ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಭೋಳಾ ಶಂಕರ್ ಚಿತ್ರಕ್ಕಾಗಿ ಕನ್ನಡದ ಕೌಸಲ್ಯ ಸುಪ್ರಜಾ ರಾಮಾ ಚಿತ್ರಕ್ಕೆ ಗೇಟ್ ಪಾಸ್ ನೀಡುತ್ತಿರುವ ಮಲ್ಟಿಪ್ಲೆಕ್ಸ್ ಗಳ ವಿರುದ್ಧ ಚಿತ್ರತಂಡ ಪ್ರತಿಭಟನೆಗೆ ಮುಂದಾಗಿದೆ.

'ಕೌಸಲ್ಯಾ ಸುಪ್ರಜಾ ರಾಮ' ಯಶಸ್ವಿ ಪ್ರದರ್ಶನ; ವಿದೇಶಗಳಲ್ಲೂ ಚಿತ್ರ ಬಿಡುಗಡೆಗೆ ಸಿದ್ಧತೆ
ಜುಲೈ 28 ರಂದು ಬಿಡುಗಡೆಯಾದ ಕೌಸಲ್ಯ ಸುಪ್ರಜಾ ರಾಮ (ಕೆಎಸ್‌ಆರ್) ಚಿತ್ರ ರಾಜ್ಯಾದ್ಯಂತ 2ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಬಗ್ಗೆ ಸಿನಿರಸಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಡಾರ್ಲಿಂಗ್ ಕೃಷ್ಣ ನಟನೆಯ 'ಕೌಸಲ್ಯ ಸುಪ್ರಜಾ ರಾಮ' ಎಲ್ಲರ ಜೀವನಕ್ಕೂ ಕನೆಕ್ಟ್ ಆಗುವ ಕಥೆ!
ಶಶಾಂಕ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟ್ರೈಲರ್ ಅನಾವರಣ ಮಾಡಿದರು.

ಕೌಸಲ್ಯಾ ಸುಪ್ರಜಾ ರಾಮ ಚಿತ್ರದ ಟ್ರೈಲರ್
ನಟ ಡಾರ್ಲಿಂಗ್ ಕೃಷ್ಣ ಮತ್ತು ಬ್ರಿಂದಾ ಆಚಾರ್ಯ ಅಭಿನಯದ ಕೌಸಲ್ಯಾ ಸುಪ್ರಜಾ ರಾಮ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಶಾಂಕ್ ನಿರ್ದೇಶಿಸಿದ್ದಾರೆ.

ಕೌಸಲ್ಯ ಸುಪ್ರಜಾ ರಾಮ: ಡಾರ್ಲಿಂಗ್ ಕೃಷ್ಣಗೆ ಮಿಲನಾ ನಾಗರಾಜ್ ನಾಯಕಿ?
ವಿಶಿಷ್ಟ ರೀತಿಯ ಕಥೆಗಳ ಮೂಲಕ ಹೆಸರುವಾಸಿಯಾಗಿರುವ ನಿರ್ದೇಶಕ ಶಶಾಂಕ್ ‘ಕೌಸಲ್ಯಾ ಸುಪ್ರಜಾ ರಾಮ’ ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸುತ್ತಿದ್ದಾರೆ.

'ಕೌಸಲ್ಯ ಸುಪ್ರಜಾ ರಾಮ' ಚಿತ್ರದಲ್ಲಿ ಬೃಂದಾ ಆಚಾರ್ಯ ನಟನೆ
ನಿರ್ದೇಶಕ ಶಶಾಂಕ್ ಅವರ ಮುಂದಿನ ಚಿತ್ರದಲ್ಲಿ ಕೃಷ್ಣ ನಾಯಕ ನಟನಾಗಿದ್ದರೆ, ನಾಯಕ ನಟಿ ಪಾತ್ರದಲ್ಲಿ ಬೃಂದಾ ಆಚಾರ್ಯ ಬಣ್ಣ ಹಚ್ಚಲಿದ್ದಾರೆ.

ಡಾರ್ಲಿಂಗ್ ಕೃಷ್ಣ ಅಭಿನಯದ, ಶಶಾಂಕ್ ನಿರ್ದೇಶನದ ಚಿತ್ರಕ್ಕೆ ಹೆಸರು 'ಕೌಸಲ್ಯ ಸುಪ್ರಜಾ ರಾಮ'
ಲವ್ ಮಾಕ್ಟೇಲ್ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣ ಇದೇ ಮೊದಲ ಬಾರಿಗೆ ಲವ್ 360 ಸಿನಿಮಾದ ನಿರ್ದೇಶಕ ಶಶಾಂಕ್ ಅವರೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಚಿತ್ರಕ್ಕೆ 'ಕೌಸಲ್ಯ ಸುಪ್ರಜಾ ರಾಮ' ಎಂದು ಹೆಸರಿಡಲಾಗಿದ್ದು, ಕುತೂಹಲ ಉಂಟುಮಾಡಿದೆ.

