ಕೌಸಲ್ಯ ಸುಪ್ರಜಾ ರಾಮ: ಡಾರ್ಲಿಂಗ್ ಕೃಷ್ಣಗೆ ಮಿಲನಾ ನಾಗರಾಜ್ ನಾಯಕಿ?
ವಿಶಿಷ್ಟ ರೀತಿಯ ಕಥೆಗಳ ಮೂಲಕ ಹೆಸರುವಾಸಿಯಾಗಿರುವ ನಿರ್ದೇಶಕ ಶಶಾಂಕ್ ‘ಕೌಸಲ್ಯಾ ಸುಪ್ರಜಾ ರಾಮ’ ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸುತ್ತಿದ್ದಾರೆ.

ವಿಶಿಷ್ಟ ರೀತಿಯ ಕಥೆಗಳ ಮೂಲಕ ಹೆಸರುವಾಸಿಯಾಗಿರುವ ನಿರ್ದೇಶಕ ಶಶಾಂಕ್ ‘ಕೌಸಲ್ಯಾ ಸುಪ್ರಜಾ ರಾಮ’ ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸುತ್ತಿದ್ದಾರೆ.
ಬೃಂದಾ ಆಚಾರ್ಯ ನಾಯಕಿಯಾಗಿ ನಟಿಸಿದರೆ, ನಟಿ ಮಿಲನಾ ನಾಗರಾಜ್ ಪತಿ ಕೃಷ್ಣ ಅವರೊಂದಿಗೆ ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದಾರೆ. ಟ್ರೆಂಡಿಂಗ್‌ನಲ್ಲಿರುವ ಶಿವಾನಿ ಹಾಡಿನೊಂದಿಗೆ ರೀಲ್‌ಗಳನ್ನು ರಚಿಸುವುದರಿಂದ ಹಿಡಿದು, ಬಿಡುಗಡೆಯ ದಿನಾಂಕವನ್ನು ಘೋಷಿಸುವವರೆಗೆ, ಅವರು ಚಿತ್ರಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಇದು ಕೌಸಲ್ಯ ಸುಪ್ರಜಾ ರಾಮದಲ್ಲಿ ಕೃಷ್ಣನೊಂದಿಗೆ ತೆರೆಯ ಮೇಲೆ ಮತ್ತೆ ಒಂದಾಗುವುದರ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ.

ಶಶಾಂಕ್ ಆರಂಭದಲ್ಲಿಯೇ ನಮ್ಮ ಚಿತ್ರದಲ್ಲಿ ಇಬ್ಬರು ನಾಯಕಿಯರು ಎಂದು ಹೇಳಿದ್ದರು. ಆ ಇನ್ನೊಬ್ಬ ನಾಯಕಿ ಮಿಲನಾ ಇರಬಹದು ಎಂಬ ಅನುಮಾನಗಳಿವೆ. ನಿರ್ಮಾಪಕರು ಈ ಮಾಹಿತಿಯನ್ನು ಮುಚ್ಚಿಟ್ಟಿದ್ದರೂ, ಜುಲೈ 14 ರಂದು ಸುದೀಪ್ ಗೌರವಾನ್ವಿತ ಅತಿಥಿಯಾಗಿ ಚಿತ್ರದ ಟ್ರೈಲರ್ ಅನಾವರಣಗೊಳಿಸಲು ಯೋಜಿಸಿರುವ ನಿರ್ದೇಶಕ ಶಶಾಂಕ್, ಚಿತ್ರದಲ್ಲಿ ಮಿಲನಾ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ. ಒಂದು ವೇಳೆ ಕೃಷ್ಣ ಜೊತೆ ಮಿಲನಾ ನಟಿಸಿದರೇ ಇದು ಬೆಳ್ಳಿತೆರೆಯಲ್ಲಿ ಈ ಆಫ್-ಸ್ಕ್ರೀನ್ ಜೋಡಿಯ ಆರನೇ ಸಿನಿಮಾವಾಗಿದೆ.
ಈ ಹಿಂದೆ ನಮ್ ದುನಿಯಾ ನಮ್ ಸ್ಟೈಲ್, ಚಾರ್ಲಿ ಮತ್ತು ಲವ್ ಮಾಕ್‌ಟೇಲ್ ಸಿನಿಮಾಗಳಲ್ಲಿ ನಟಿಸಿದ್ದರು. ನಂತರ ಲವ್ ಬರ್ಡ್ಸ್ ನಲ್ಲಿ ಜೊತೆಯಾಗಿದ್ದರು. ಈಗ ಅವರ ಕೌಸಲ್ಯ ಸುಪ್ರಜಾ ರಾಮಾ ಸಿನಿಮಾದೊಂದಿಗೆ ಮುಂದುವರಿಯುತ್ತಿದೆ. ಮಿಸ್ಟರ್ ಬ್ಯಾಚುಲರ್ ಮತ್ತು ಲವ್ ಬರ್ಡ್ಸ್ ನಂತರ ಕೃಷ್ಣ ಅವರ ಕೌಸಲ್ಯ ಸುಪ್ರಜಾ ರಾಮ ಅವರ ವರ್ಷದ ಮೂರನೇ ಸಿನಿಮಾವಾಗಿದೆ.
ಪ್ರೇಮಂ ಪೂಜ್ಯಂ ಮತ್ತು ಜೂಲಿಯೆಟ್‌ನಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ಬೃಂದಾ ಆಚಾರ್ಯ ಅವರೊಂದಿಗೆ ಮೊದಲ ಬಾರಿ ಕೃಷ್ಣ ಜೋಡಿಯಾಗಲಿದ್ದಾರೆ. ಚಿತ್ರದಲ್ಲಿ ನಾಗಭೂಷಣ, ರಂಗಾಯಣ ರಘು, ಸುಧಾ ಬೆಳವಾಡಿ, ಮತ್ತು ಅಚ್ಯುತ್ ಕುಮಾರ್ ಸೇರಿದಂತೆ ಹಲವು ಮಂದಿ ನಟಿಸಿದ್ದಾರೆ.
ಕೌರವ ಪ್ರೊಡಕ್ಷನ್ ಹೌಸ್ ಮತ್ತು ಶಶಾಂಕ್ ಸಿನಿಮಾಸ್ ಜಂಟಿಯಾಗಿ ಕೌಸಲ್ಯ ಸುಪ್ರಜಾ ರಾಮ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸುಗ್ನನ್ ಛಾಯಾಗ್ರಹಣವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


