ಪ್ರೇಮ್ ನಿರ್ದೇಶಿಸಿ, ಧ್ರುವ ಸರ್ಜಾ ನಟಿಸಿರುವ 'ಕೆಡಿ' ಸಿನಿಮಾಗೆ ಏಕ್ ಲವ್ ಯಾ ಖ್ಯಾತಿಯ ರೀಷ್ಮಾ ನಾಣಯ್ಯ?
ಏಕ್ ಲವ್ ಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ರೀಷ್ಮಾ ನಾಣಯ್ಯ ಅವರು ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಪ್ರೇಮ್ ಅವರ ಮುಂಬರುವ ಬಹುಭಾಷಾ ಚಿತ್ರ 'ಕೆಡಿ - ದಿ ಡೆವಿಲ್' ನಲ್ಲಿ ಕೂಡ ನಟಿಸಲಿದ್ದಾರೆ ಎನ್ನಲಾಗಿದೆ. ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾ ನಾಯಕನಾಗಿ ನಟಿಸಿದ್ದಾರೆ.

ಏಕ್ ಲವ್ ಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮತ್ತು ನಂತರ ರಾಣಾದಲ್ಲಿ ಕೆಲಸ ಮಾಡಿದ ರೀಷ್ಮಾ ನಾಣಯ್ಯ, ಗಣೇಶ್-ಪ್ರೀತಂ ಗುಬ್ಬಿ ಅವರ ಮುಂಬರುವ ಚಿತ್ರ 'ಬಾನದಾರಿಯಲ್ಲಿ' ಸಿನಿಮಾದಲ್ಲೂ ನಟಿಸಿದ್ದಾರೆ. ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಉಪೇಂದ್ರ ಅವರ ನಿರ್ದೇಶನದ 'UI' ನಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ. ಈ ನಡುವೆ ಪ್ರೇಮ್ ಅವರ ಮುಂಬರುವ ಬಹುಭಾಷಾ ಚಿತ್ರ 'ಕೆಡಿ - ದಿ ಡೆವಿಲ್' ನಲ್ಲಿ ಕೂಡ ನಟಿಸಲಿದ್ದಾರೆ ಎನ್ನಲಾಗಿದೆ. ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾ ನಾಯಕನಾಗಿ ನಟಿಸಿದ್ದಾರೆ.
ಮೂಲಗಳ ಪ್ರಕಾರ, ಪ್ರೊಡಕ್ಷನ್ ಹೌಸ್ ಮತ್ತು ನಿರ್ದೇಶಕ ಪ್ರೇಮ್ ಅವರು ಚಿತ್ರಕ್ಕಾಗಿ ಕನ್ನಡದ ನಟಿಯನ್ನೇ ಆಯ್ಕೆ ಮಾಡುವ ಇಂಗಿತ ಹೊಂದಿದ್ದರು ಮತ್ತು ಅವರು ಈ ಹಿಂದೆ ಏಕ್ ಲವ್ ಯಾ ಚಿತ್ರದಲ್ಲಿ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದ ರೀಷ್ಮಾ ನಾಣಯ್ಯ ಅವರನ್ನೇ ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ.
ಧ್ರುವ ಸರ್ಜಾ ಮತ್ತು ರೀಷ್ಮಾ ಅವರಲ್ಲದೆ, ಚಿತ್ರದಲ್ಲಿ ರವಿಚಂದ್ರನ್, ಸಂಜಯ್ ದತ್ ಮತ್ತು ಶಿಲ್ಪಾ ಶೆಟ್ಟಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
1968 ಮತ್ತು 1978ರ ನಡುವೆ ನಡೆದಿರುವ ನೈಜ ಘಟನೆಯನ್ನು ಆಧರಿಸಿದ ಕೆಡಿಯನ್ನು ಅದ್ದೂರಿಯಾಗಿ ಲಾಂಚ್ ಮಾಡಲಾಗಿದೆ. ದೊಡ್ಡ ಬಜೆಟ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಬೆಂಬಲಿಸುತ್ತದೆ. ಚಿತ್ರತಂಡ ಆ ಕಾಲದ ಬೆಂಗಳೂರಿನ ಸೆಟ್‌ಗಳನ್ನು ಮರುಸೃಷ್ಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
Related Article
ಧ್ರುವ ಸರ್ಜಾಗೆ ಜೊತೆಯಾದ ಕೆಜಿಎಫ್ ಕಲಿ: ಮಾರ್ಟಿನ್ ಸಿನಿಮಾಗೆ ರವಿ ಬಸ್ರೂರ್ ಸಂಗೀತ
ಪ್ರೇಮ್-ಧ್ರುವ ಸರ್ಜಾ ಕಾಂಬಿನೇಷನ್ ನ 'ಕೆಡಿ' ಸೆಟ್ ಗೆ ಸಂಜಯ್ ದತ್ ಎಂಟ್ರಿ!
ಕೆ.ಡಿ ಸಿನಿಮಾಗಾಗಿ 23 ದಿನದಲ್ಲಿ 18 ಕೆಜಿ ತೂಕ ಇಳಿಸಿಕೊಂಡ ಧ್ರುವ ಸರ್ಜಾ!
ಜೋಗಿ ಪ್ರೇಮ್ ನಿರ್ದೇಶನದ - ಧ್ರುವ ಸರ್ಜಾ ನಟನೆಯ 'ಕೆಡಿ' ಸಿನಿಮಾಕ್ಕೆ 'ಕ್ರೇಜಿ ಸ್ಟಾರ್' ಖಡಕ್ ಎಂಟ್ರಿ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


