ಸಿನಿಮಾ ಸುದ್ದಿ

ಹೀರೋ-ಹೀರೋಯಿನ್ ಇಲ್ಲ, ವಿಲನ್ ಗಳೇ ಎಲ್ಲಾ: 'BAD' ಚಿತ್ರಕ್ಕಾಗಿ ಜೊತೆಯಾದ ಪಿಸಿ ಶೇಖರ್-ನಕುಲ್ ಗೌಡ

'ರೋಮಿಯೋ', 'ಚಡ್ಡಿದೋಸ್ತ್', 'ಅರ್ಜುನ', 'ಸ್ಟೈಲ್ ಕಿಂಗ್ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಪಿ ಸಿ ಶೇಖರ್ ಇದೀಗ ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ.

ಹೀರೋ-ಹೀರೋಯಿನ್ ಇಲ್ಲ, ವಿಲನ್ ಗಳೇ ಎಲ್ಲಾ: 'BAD' ಚಿತ್ರಕ್ಕಾಗಿ ಜೊತೆಯಾದ ಪಿಸಿ ಶೇಖರ್-ನಕುಲ್ ಗೌಡ
ನಕುಲ್ ಗೌಡ.
Published On :

'ರೋಮಿಯೋ', 'ಚಡ್ಡಿದೋಸ್ತ್', 'ಅರ್ಜುನ', 'ಸ್ಟೈಲ್ ಕಿಂಗ್ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಪಿ ಸಿ ಶೇಖರ್ ಇದೀಗ ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ.

ನಕುಲ್ ಗೌಡ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ BAD ಎಂದು ಶೀರ್ಷಿಕೆ ನೀಡಲಾಗಿದೆ. ಈ ರೀತಿ ಹೆಸರಿಡಲು ಕಾರಣವೂ ಇದೆ. ಈ ಚಿತ್ರ ವಿಭಿನ್ನ ಪ್ರಯತ್ನವಾಗಿದ್ದು, ಚಿತ್ರದಲ್ಲಿ ನಾಯಕ ಹಾಗೂ ನಾಯಕಿಯೇ ಇರುವುದಿಲ್ಲ. ಎಲ್ಲರೂ ವಿಲನ್ ಗಳೇ ಆಗಿದ್ದಾರೆ.

“ರೋಷಮಾನ್ ಎಫೆಕ್ಟ್” ಎಂಬ ವಿಧಾನವನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗುತ್ತಿದೆ‌. ಜಪಾನ್ ನಿರ್ದೇಶರೊಬ್ಬರು ಈ ವಿಧಾನವನ್ನು ತಮ್ಮ ಚಿತ್ರದ ಮೂಲಕ ಪರಿಚಯಿಸಿದ್ದರು. ಈ ವಿಧಾನವನ್ನು ಪಿಸಿ ಶೇಖರ್ ಅವರು ಬಳಕೆ ಮಾಡಿದ್ದಾರೆ.  ಕನ್ನಡದಲ್ಲಿ ಇದರ ಬಳಕೆಯಾಗಿರುವುದು ವಿರಳ ಎನ್ನಬಹುದು. ಒಂದೇ ಕಥೆಯನ್ನೇ ಬೇರೆಬೇರೆಯವರು ಹೇಳುವ ವಿಧಾನ ಬೇರೆ ರೀತಿ ಆಗಿರುತ್ತದೆ.

ಚಿತ್ರದ ಚಿತ್ರೀಕರಣ ಮುಕ್ಕಾಲು ಭಾಗ ಪೂರ್ಣಗೊಂಡಿದ್ದು. ಕೆಲವು ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.

"ರಾಗ ಹಾಗೂ "ದಿ ಟೆರರಿಸ್ಟ್" ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಸಚಿನ್ ಬಿ ಹೊಳಗುಂಡಿ ಅವರು BAD ಚಿತ್ರಕ್ಕೆ ಸಂಭಾಷಣೆ ಬರೆದಿದ್ದರೆ, ಅರ್ಜುನ್ಯ ಅವರು ಸಂಗೀತ ನೀಡಿದ್ದಾರೆ. ಶಕ್ತಿ ಶೇಖರ್ ಛಾಯಾಗ್ರಹಣ ಮಾಡಿದ್ದು, ಜಿ. ರಾಜಶೇಖರ್ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.