ಹಠಾತ್ ಸಿನಿಮಾ ಇಂಡಸ್ಟ್ರಿ ತೊರೆಯುವ ನಿರ್ಧಾರಕ್ಕೆ ಬಂದ ಜೆಕೆ: ಕಾರಣ ಏನು?
ಕೆಲವರು ಬಹಳ ತೊಂದರೆ ಕೊಟ್ಟಿದ್ದಾರೆ. ಹಿಂದಿ ಧಾರಾವಾಹಿ ಮಾಡುತ್ತಿದ್ದೆ ಒಳ್ಳೆಯ ಹೆಸರು ಗಳಿಸಿದ್ದೆ. ಹಿಂದಿ ಸಿನಿಮಾ ಒಂದರ ಅವಕಾಶ ಸಹ ನನಗೆ ದೊರಕಿತ್ತು ಇನ್ನೇನು ಚಿತ್ರೀಕರಣ ಪ್ರಾರಂಭವಾಗಬೇಕು ಎಂಬ ಸಮಯದಲ್ಲಿ ಅಲ್ಲಿಗೆ ಕರೆ ಮಾಡಿ ನನಗೆ ಸಿಕ್ಕ ಅವಕಾಶವನ್ನು ತಪ್ಪಿಸಲಾಯ್ತು.

ಬೆಂಗಳೂರು: ಅಶ್ವಿನಿ ನಕ್ಷತ್ರ ಖ್ಯಾತಿಯ ನಟ ಕಾರ್ತಿಕ್ ಜಯರಾಮ್ ಅಲಿಯಾಸ್ ಜೆಕೆ ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ಸಖತ್ ಸುದ್ದಿಯಾಗಿತ್ತು. ಆದರೀಗ ಜೆಕೆ ಸಿನಿಮಾ ಇಂಡಸ್ಟ್ರಿ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ‘ಗೌರವ ಇಲ್ಲದ ಕಡೆ ನಾನು ಇರಲ್ಲ. ಜನರಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ. ಚೆನ್ನಾಗಿದ್ದಾಗಲೇ ಸಿನಿಮಾ ಇಂಡಸ್ಟ್ರಿ ಬಿಡುತ್ತಿದ್ದೇನೆ’ ಎಂದಿದ್ದಾರೆ.
ಕೆಲವರು ಬಹಳ ತೊಂದರೆ ಕೊಟ್ಟಿದ್ದಾರೆ. ಹಿಂದಿ ಧಾರಾವಾಹಿ ಮಾಡುತ್ತಿದ್ದೆ ಒಳ್ಳೆಯ ಹೆಸರು ಗಳಿಸಿದ್ದೆ. ಹಿಂದಿ ಸಿನಿಮಾ ಒಂದರ ಅವಕಾಶ ಸಹ ನನಗೆ ದೊರಕಿತ್ತು ಇನ್ನೇನು ಚಿತ್ರೀಕರಣ ಪ್ರಾರಂಭವಾಗಬೇಕು ಎಂಬ ಸಮಯದಲ್ಲಿ ಅಲ್ಲಿಗೆ ಕರೆ ಮಾಡಿ ನನಗೆ ಸಿಕ್ಕ ಅವಕಾಶವನ್ನು ತಪ್ಪಿಸಲಾಯ್ತು. ಇಲ್ಲಿಯೂ ಸಹ ನನಗೆ ಬರಬೇಕಿದ್ದ ಅವಕಾಶವನ್ನು ತಪ್ಪಿಸಿದರು. ನನಗೇ ನೇರವಾಗಿ ಸವಾಲು ಹಾಕಿ 2022 ರ ವೇಳೆಗೆ ಇಂಡಸ್ಟ್ರಿ ಬಿಡುಸುತ್ತೇವೆ ಎಂದರು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜೆಕೆ ಅಭಿನಯದ 'ಐರಾವನ್' ಚಿತ್ರ ಜೂನ್ 16ಕ್ಕೆ ಬಿಡುಗಡೆ
ನನಗೆ ಬರುವ ಸಿನಿಮಾ ಅವಕಾಶಗಳನ್ನು ತಪ್ಪಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕಿತ್ತು ಅದಕ್ಕೂ ಕಲ್ಲು ಹಾಕಿದರು. ದುಷ್ಟರಿಂದ ನಾನು ದೂರ ಇರುತ್ತೇನೆ. ಹಾಗಾಗಿ ಸಿನಿಮಾ ಇಂಡಸ್ಟ್ರಿ ನನಗೆ ಬೇಡ. ನನಗೆ ನೆಮ್ಮದಿ ಮುಖ್ಯ. ನನ್ನ ಮಾತು ಯಾರಿಗೆ ಅರ್ಥವಾಗಬೇಕು ಅವರಿಗೆ ಅರ್ಥ ಆದರೆ ಸಾಕು. ಇಂಡಸ್ಟ್ರಿಯಲ್ಲಿ 14 ವರ್ಷದಿಂದ ಇದ್ದೇನೆ. ನಟನೆ ನನ್ನ ಪ್ಯಾಶನ್. ಈ ವೃತ್ತಿ ಇಲ್ಲ ಅಂದರೆ ಬೇರೆ ಇದೆ. ನಾನು ವಿದ್ಯಾವಂತʼʼ ಎಂದರು.
ನಟ ಜೆಕೆಗೆ, ಕನ್ನಡ- ಹಿಂದಿ ಕಿರುತೆರೆಯಲ್ಲಿ ಯಶಸ್ಸು ಸಿಕ್ಕ ಹಾಗೇ ಸಿನಿಮಾದಲ್ಲಿ ಸಿಗಲಿಲ್ಲ. ಆದರೆ, ಜೆಕೆ ಅವರು ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಆದರೆ ಈಗ ಹಠಾತ್ತನೇ ಚಿತ್ರರಂಗ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ. ಜೆಕೆ ನಟನೆಯ ‘ಐರಾವನ್’ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


