ಜೂನ್ 9 ರಂದು ಲಾವಣ್ಯ ತ್ರಿಪಾಠಿ ಮತ್ತು ವರುಣ್ ತೇಜ್ ನಿಶ್ಚಿತಾರ್ಥ, ಶೀಘ್ರದಲ್ಲೇ ಮದುವೆಯ ಕರೆಯೋಲೆ
ಟಾಲಿವುಡ್ ನಟರಾದ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಹಲವಾರು ವರ್ಷಗಳಿಂದ ರಿಲೇಶನ್‌ಷಿಪ್‌ನಲ್ಲಿದ್ದಾರೆ ಎಂಬುದು ಹಳೆಯ ಸುದ್ದಿ. ಆದರೂ, ಅವರು ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದೇ ಹೇಳಿಕೊಂಡು ಬಂದಿದ್ದರು. ಆದರೆ, ಈಗ ಜೂನ್ 9 ರಂದು ಇಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಮತ್ತು ನಂತರ ಮದುವೆಗೆ ಶೀಘ್ರದಲ್ಲೇ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಟಾಲಿವುಡ್ ನಟರಾದ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಹಲವಾರು ವರ್ಷಗಳಿಂದ ರಿಲೇಶನ್‌ಷಿಪ್‌ನಲ್ಲಿದ್ದಾರೆ ಎಂಬುದು ಹಳೆಯ ಸುದ್ದಿ. ಆದರೂ, ಅವರು ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದೇ ಹೇಳಿಕೊಂಡು ಬಂದಿದ್ದರು. ಆದರೆ, ಈಗ ಜೂನ್ 9 ರಂದು ಇಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಮತ್ತು ನಂತರ ಮದುವೆಗೆ ಶೀಘ್ರದಲ್ಲೇ ನಡೆಯಲಿದೆ ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ. ನಿಶ್ಚಿತಾರ್ಥವು ಮನೆಯಲ್ಲಿ ಅಥವಾ ಹೈದರಾಬಾದ್‌ನ ಯಾವುದಾದರೊಂದು ಸ್ಥಳದಲ್ಲಿ ಕುಟುಂಬದ ಆಪ್ತರ ಸಮ್ಮುಖದಲ್ಲಿ ನಡೆಯಲಿದೆ ಎಂದು ಖಚಿತಪಡಿಸಲಾಗಿದೆ.
ಲಾವಣ್ಯ ತ್ರಿಪಾಠಿ (32) ಮತ್ತು ವರುಣ್ ತೇಜ್ (36) ಸದ್ಯಕ್ಕೆ ವಿದೇಶದಲ್ಲಿದ್ದು, ಜೂನ್ 1 ರಂದು ಹೈದರಾಬಾದ್‌ಗೆ ಹಿಂತಿರುಗಲಿದ್ದಾರೆ ಎಂದು ವರದಿಯಾಗಿತ್ತು. ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ. ಇಬ್ಬರು ನಿಶ್ಚಿತಾರ್ಥಕ್ಕೆ ಸಿದ್ಧತೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ವರುಣ್ ತೇಜ್ ನಟ ಚಿರಂಜೀವಿ ಅವರ ಸೋದರಳಿಯ ಮತ್ತು ರಾಮ್ ಚರಣ್ ಅವರ ಸೋದರ ಸಂಬಂಧಿ. ಬಹಳ ಸಮಯದ ನಂತರ ಈ ಕುಟುಂಬದಲ್ಲಿ ಶುಭಕಾರ್ಯವೊಂದು ನಡೆಯಲಿದೆ. ಕೊನಿಡೆಲ ನಾಗೇಂದ್ರ ಅಥವಾ ನಾಗ ಬಾಬು ಅವರು ಮೆಗಾಸ್ಟಾರ್ ಚಿರಂಜೀವಿ ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಸಹೋದರರಾಗಿದ್ದಾರೆ. ವರುಣ್ ತೇಜ್ ಅವರ ತಂದೆಯಾಗಿರುವ ನಾಗ ಬಾಬು ಅವರು ತೆಲುಗು ಚಿತ್ರರಂಗದಲ್ಲಿ ನಟ ಮತ್ತು ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ.
ರಾಮ್ ಚರಣ್, ಉಪಾಸನಾ ಕೊನಿಡೇಲ, ಸಾಯಿ ಧರಮ್ ತೇಜ್, ಅಲ್ಲು ಸಿರಿಶ್, ಸುಶ್ಮಿತಾ ಕೊನಿಡೇಲ, ಶ್ರೀಜಾ ಕೊನಿಡೇಲ, ಪವನ್ ಕಲ್ಯಾಣ್ ಮತ್ತು ಚಿರಂಜೀವಿ ಸೇರಿದಂತೆ ಇಡೀ ಕೊನಿಡೇಲ ಕುಟುಂಬ ಅದ್ದೂರಿಯಾಗಿ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲಿದೆ. ಅಲ್ಲು ಅರ್ಜುನ್ ಮತ್ತು ಅವರ ಕುಟುಂಬ ಕೂಡ ಆಗಮಿಸುವ ನಿರೀಕ್ಷೆಯಿದೆ.
ಇತ್ತೀಚೆಗಷ್ಟೇ ಇಟಲಿಯ ರೋಮ್‌ನಿಂದ ವರುಣ್ ತೇಜ್ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಲಾವಣ್ಯ ಕೂಡ ತಾನು ಪ್ರಯಾಣಿಸುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದರು. ಇಬ್ಬರು ಇದೀಗ ಒಟ್ಟಿಗೆ ವಿದೇಶಕ್ಕೆ ತೆರಳಿದ್ದಾರೆ ಎಂದು ನೆಟಿಜನ್‌ಗಳು ಊಹಿಸಿದ್ದರು.
ಲಾವಣ್ಯ-ವರುಣ್ ಲವ್ ಸ್ಟೋರಿ
ಲಾವಣ್ಯ ತ್ರಿಪಾಠಿ ಮತ್ತು ವರುಣ್ ತೇಜ್ ಮಿಸ್ಟರ್ ಮತ್ತು ಅಂತರಿಕ್ಷಂ ನಂತಹ ಕೆಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅವರು 2017 ರಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಅವರು ಈ ಮೊದಲೇ ಮದುವೆಯಾಗುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಈವರೆಗೂ ಅದು ನಿಜವಾಗಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


