ಸಿನಿಮಾ ಸುದ್ದಿ

'RRR' ವಿಶ್ಲೇಷಿಸಿದ ಅವತಾರ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್; ನಂಬಲಾಗುತ್ತಿಲ್ಲ ಎಂದ ಎಸ್ಎಸ್ ರಾಜಮೌಳಿ

ಪ್ರಶಸ್ತಿ ವಿಜೇತ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ತಮ್ಮ 'RRR' ಸಿನಿಮಾವನ್ನು ವಿಶ್ಲೇಷಿಸಲು 10 ನಿಮಿಷಗಳ ಕಾಲ ಕಳೆದಿದ್ದು, ತಾನು ವಿಶ್ವದ ಅಗ್ರಸ್ಥಾನದಲ್ಲಿರುವೆ ಎಂದು ಭಾಸವಾಯಿತು ಎಂದು ಭಾರತೀಯ ಚಲನಚಿತ್ರ ನಿರ್ದೇಶಕ ಎಸ್.ಎಸ್.ರಾಜಮೌಳಿ ತಿಳಿಸಿದ್ದಾರೆ.

'RRR' ವಿಶ್ಲೇಷಿಸಿದ ಅವತಾರ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್; ನಂಬಲಾಗುತ್ತಿಲ್ಲ ಎಂದ ಎಸ್ಎಸ್ ರಾಜಮೌಳಿ
ಎಸ್ ಎಸ್ ರಾಜಮೌಳಿ
Published On :

ಲಾಸ್ ಏಂಜಲೀಸ್: ಪ್ರಶಸ್ತಿ ವಿಜೇತ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ತಮ್ಮ 'RRR' ಸಿನಿಮಾವನ್ನು ವಿಶ್ಲೇಷಿಸಲು 10 ನಿಮಿಷಗಳ ಕಾಲ ಕಳೆದಿದ್ದು, ತಾನು ವಿಶ್ವದ ಅಗ್ರಸ್ಥಾನದಲ್ಲಿರುವೆ ಎಂದು ಭಾಸವಾಯಿತು ಎಂದು ಭಾರತೀಯ ಚಲನಚಿತ್ರ ನಿರ್ದೇಶಕ ಎಸ್.ಎಸ್.ರಾಜಮೌಳಿ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸ್ಟಾರ್ ನಿರ್ದೇಶಕರಾದ ರಾಜಮೌಳಿ, 'ಟೈಟಾನಿಕ್' ಮತ್ತು 'ಅವತಾರ್' ನಂತಹ ಸಿನಿಮಾಗಳನ್ನು ನಿರ್ದೇಶಿಸಿದ ಜೇಮ್ಸ್ ಕ್ಯಾಮರೂನ್‌ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಅನ್ನು ಹಂಚಿಕೊಳ್ಳುತ್ತಿರುವ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಮೊದಲ ಚಿತ್ರದಲ್ಲಿ, ಇಬ್ಬರು ಚರ್ಚೆ ನಡೆಸುತ್ತಿರುವುದನ್ನು ಕಾಣಬಹುದು. ಎರಡನೇ ಚಿತ್ರದಲ್ಲಿ, ಇಬ್ಬರು ಮಾತನಾಡುವಾಗ ರಾಜಮೌಳಿ ಕ್ಯಾಮರೂನ್ ಅವರ ಕೈಗಳನ್ನು ಹಿಡಿದಿದ್ದಾರೆ.

'ಮಹಾನ್ ಜೇಮ್ಸ್ ಕ್ಯಾಮರೂನ್ ಅವರು 'RRR' ವೀಕ್ಷಿಸಿದರು.. ಅವರು ಅದನ್ನು ತುಂಬಾ ಇಷ್ಟಪಟ್ಟರು ಮತ್ತು ಅವರು ತಮ್ಮ ಪತ್ನಿ ಸುಜಿಗೆ ಶಿಫಾರಸು ಮಾಡಿದರು ಮತ್ತು ಅವರ ಜೊತೆ ಮತ್ತೊಮ್ಮೆ ಸಿನಿಮಾ ವೀಕ್ಷಿಸಿದರು. ಸರ್ ನೀವು ನಮ್ಮೊಂದಿಗೆ ಚಲನಚಿತ್ರವನ್ನು ವಿಶ್ಲೇಶಿಸಲು ಸಂಪೂರ್ಣ 10 ನಿಮಿಷಗಳನ್ನು ಕಳೆದಿದ್ದೀರಿ ಎಂಬುದನ್ನು ನನಗಿನ್ನೂ ನಂಬಲಾಗುತ್ತಿಲ್ಲ. ನೀವು ಹೇಳಿದಂತೆ ನಾನು ಪ್ರಪಂಚದ ಅಗ್ರಸ್ಥಾನದಲ್ಲಿದ್ದೇನೆ... ಇಬ್ಬರಿಗೂ ಧನ್ಯವಾದಗಳು' ಎಂದು ರಾಜಮೌಳಿ ಬರೆದಿದ್ದಾರೆ.

ರಾಜಮೌಳಿ ಅವರು ಈ ಹಿಂದೆ ಸ್ಟೀವನ್ ಸ್ಪೀಲ್‌ಬರ್ಗ್ ಅವರನ್ನು ಭೇಟಿಯಾಗಿದ್ದರು. 'ನಾನು ದೇವರನ್ನು ಭೇಟಿಯಾದೆ!!!' ಎಂದು ರಾಜಮೌಳಿ ಅವರು ಸ್ಪೀಲ್‌ಬರ್ಗ್ ಅವರನ್ನು ಭೇಟಿಯಾದ ಚಿತ್ರಕ್ಕೆ ಶೀರ್ಷಿಕೆ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.