ಸಿನಿಮಾ ಸುದ್ದಿ

ರಾಜ್ ಶರಣ್ ನಿರ್ದೇಶನದ 'ಮೊದಲ ಮಳೆ' ಸಿನಿಮಾದಲ್ಲಿ ಒಂಬತ್ತು ಮಂದಿ ನಾಯಕಿಯರು!

ರಾಜ್ ಶರಣ್ ಅವರ ನಿರ್ದೇಶನದ ಎರಡನೇ ಸಿನಿಮಾ 'ಮೊದಲ ಮಳೆ'ಯಲ್ಲಿ ನಟ ರಾಜಾ ನರಸಿಂಹ ನಟಿಸಿದ್ದು, ಇದೀಗ ನಾಯಕಿಯರ ವಿಚಾರಕ್ಕೆ ಸುದ್ದಿಯಾಗಿದೆ. ಸಿನಿಮಾದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ಒಂಬತ್ತು ನಾಯಕಿಯರು ಇದ್ದಾರೆ.

ರಾಜ್ ಶರಣ್ ನಿರ್ದೇಶನದ 'ಮೊದಲ ಮಳೆ' ಸಿನಿಮಾದಲ್ಲಿ ಒಂಬತ್ತು ಮಂದಿ ನಾಯಕಿಯರು!
ಮೊದಲ ಮಳೆ ಸಿನಿಮಾದ ಪೋಸ್ಟರ್
Published On :

ರಾಜ್ ಶರಣ್ ಅವರ ನಿರ್ದೇಶನದ ಎರಡನೇ ಸಿನಿಮಾ 'ಮೊದಲ ಮಳೆ'ಯಲ್ಲಿ ನಟ ರಾಜಾ ನರಸಿಂಹ ನಟಿಸಿದ್ದು, ಇದೀಗ ನಾಯಕಿಯರ ವಿಚಾರಕ್ಕೆ ಸುದ್ದಿಯಾಗಿದೆ. ಸಿನಿಮಾದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ಒಂಬತ್ತು ನಾಯಕಿಯರು ಇದ್ದಾರೆ. ಸಾಹಿತ್ಯ ಪ್ರಕಾಶ್, ಪೂಜಾ ರಾಮಚಂದ್ರ, ಅಂಜಲಿ, ಉಷಾ, ಮತ್ತು ಪ್ರಿಯಾ ಶೆಟ್ಟಿ ಸೇರಿದಂತೆ ಒಂಬತ್ತು ಮಂದಿ ನಾಯಕಿಯರು ಸಿನಿಮಾದಲ್ಲಿದ್ದಾರೆ.

ನಿರ್ದೇಶಕರ ಪ್ರಕಾರ, ಹಾರರ್ ಕಾಮಿಡಿ ಎಂಟರ್‌ಟೈನರ್ ಆಗಿರುವ ಈ ಸಿನಿಮಾವು ನಿರೂಪಣೆಗೆ ನಿರ್ಣಾಯಕ ಕೊಂಡಿಯಾಗಿ ಮಳೆಯನ್ನು ಹೊಂದಿದೆ. 40 ದಿನಗಳಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮಡಿಕೇರಿ, ಸಕಲೇಶಪುರ, ಮೈಸೂರು, ಬೆಂಗಳೂರು ಭಾಗಗಳಲ್ಲಿ ಚಿತ್ರೀಕರಣ ನಡೆಸಿದೆ.

ಮೊದಲ ಮಳೆ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಮತ್ತು ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ರವೀಶ್ ಮತ್ತು ಪ್ರಸಾನಂದ್ ಭೋಜ ಶೆಟ್ಟರ್ ಅವರ ಸಂಗೀತವಿರುವ 'ಮೊದಲ ಮಳೆ'ಗೆ ಕೃಷ್ಣ ಪುರ್ಜರಿ ಮತ್ತು ಮನು ದಾಸಪ್ಪ ಎಂಬ ಇಬ್ಬರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಕರಿಸುಬ್ಬು, ಉಗ್ರಂ ರೆಡ್ಡಿ ಮತ್ತು ಜ್ಯೋತಿ ಮೂರೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.