ಸಿನಿಮಾ ಸುದ್ದಿ

ಕೌಟುಂಬಿಕ ಮನರಂಜನಾ ಸಿನಿಮಾದಲ್ಲಿ ಪ್ರಣಾಮ್ ದೇವರಾಜ್; ನಾಯಕಿಯಾಗಿ ಖುಷಿ ರವಿ

ನಟ ಪ್ರಣಾಮ್ ದೇವರಾಜ್ ಕನ್ನಡ-ತೆಲುಗು ದ್ವಿಭಾಷಾ ವೈರಾ ಬಿಡುಗಡೆಗೆ ಸಜ್ಜಾಗುತ್ತಿದ್ದು ನಿರ್ದೇಶಕ ಶ್ರೀಕಾಂತ್ ಹುಣಸೂರ್ ಮುಂದಿನ ಸಿನಿಮಾಗೆ ಕೈ ಜೋಡಿಸಿದ್ದಾರೆ.

ಕೌಟುಂಬಿಕ ಮನರಂಜನಾ ಸಿನಿಮಾದಲ್ಲಿ ಪ್ರಣಾಮ್ ದೇವರಾಜ್; ನಾಯಕಿಯಾಗಿ ಖುಷಿ ರವಿ
ಪ್ರಣಾಮ್ ದೇವರಾಜ್ ಮತ್ತು ಖುಷಿ ರವಿ
Published On :

ನಟ ಪ್ರಣಾಮ್ ದೇವರಾಜ್ ಕನ್ನಡ-ತೆಲುಗು ದ್ವಿಭಾಷಾ ವೈರಾ ಬಿಡುಗಡೆಗೆ ಸಜ್ಜಾಗುತ್ತಿದ್ದು ನಿರ್ದೇಶಕ ಶ್ರೀಕಾಂತ್ ಹುಣಸೂರ್ ಮುಂದಿನ ಸಿನಿಮಾಗೆ ಕೈ ಜೋಡಿಸಿದ್ದಾರೆ.

ಚಿತ್ರದಲ್ಲಿ ಖುಷಿ ರವಿ ನಾಯಕಿಯಾಗಿ ನಟಿಸಿದ್ದು, ರಂಗಾಯಣ ರಘು ಪ್ರಮುಖ ಪಾತ್ರದಲ್ಲಿದ್ದಾರೆ. ಶ್ರೀಕಾಂತ್ ಈ ಹಿಂದೆ ನಿರ್ದೇಶಕರಾದ ಪ್ರೇಮ್, ಆರ್ ಚಂದ್ರು, ಚೇತನ್ ಕುಮಾರ್ ಮತ್ತು ಹರಿ ಸಂತೋಷ್ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದರು. ದೂರದರ್ಶನ ಧಾರಾವಾಹಿಯನ್ನೂ ನಿರ್ದೇಶಿಸಿದ್ದಾರೆ. ಮುಂಬರುವ ಚಿತ್ರಕ್ಕೆ ನಿರ್ದೇಶನದ ಜೊತೆಗೆ, ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ಬರೆದಿದ್ದಾರೆ.

ಚಿತ್ರಕ್ಕೆ ಸನ್ ಆಫ್ ಮುತ್ತಣ್ಣ ಎಂದು ಹೆಸರಿಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕೌಟುಂಬಿಕ ನಾಟಕವಾಗಿ ಬಿಂಬಿತವಾಗಿರುವ ಈ ಕಥೆಯು ತಂದೆ-ಮಗನ ಸಂಬಂಧದ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ರಂಗಾಯಣ ರಘು ನಿವೃತ್ತ ಮಿಲಿಟರಿ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಪ್ರಣಾಮ್ ಮಗನ ಪಾತ್ರದಲ್ಲಿ ನಟಿಸಿದ್ದಾರೆ.

ಇದೇ ಮೊದಲ ಬಾರಿಗೆ ಪ್ರಣಮ್ ಮತ್ತು ಖುಷಿ ಮೊದಲ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಗಿರೀಶ್ ಶಿವಣ್ಣ, ಸುಚೇಂದ್ರ ಪ್ರಸಾದ್, ದತ್ತಣ್ಣ ಮತ್ತು ಸುಧಾ ಬೆಳವಾಡಿ ಸಹ ನಟಿಸಲಿದ್ದಾರೆ. ಲೋಹಿತ್ ನಿರ್ಮಿಸಿರುವ ಈ ಚಿತ್ರದ ತಾಂತ್ರಿಕ ತಂಡದಲ್ಲಿ ಸಂಗೀತ ಸಂಯೋಜಕ ಸಚಿನ್ ಬಸ್ರೂರ್ ಮತ್ತು ಛಾಯಾಗ್ರಾಹಕ ಸ್ಕೇಟಿಂಗ್ ಕೃಷ್ಣ ಇದ್ದಾರೆ. ಚಿತ್ರ ಫೆಬ್ರವರಿ 20 ರಂದು ತೆರೆಗೆ ಬರಲಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.