ಬೆಂಕಿಪಟ್ಣ ಖ್ಯಾತಿಯ ಪ್ರತಾಪ್ ನಾರಾಯಣ್‌ರ 'ಉತ್ತಮರು' ಸಿನಿಮಾ ಫೆಬ್ರುವರಿ 10 ರಂದು ಬಿಡುಗಡೆ
'ಒಂಥರಾ ಬಣ್ಣಗಳು' (2019) ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಬೆಂಕಿಪಟ್ಣ ಸಿನಿಮಾದ ನಟ ಪ್ರತಾಪ್ ನಾರಾಯಣ್ 4 ವರ್ಷಗಳ ನಂತರ ಇದೀಗ ತಮ್ಮ ಮುಂದಿನ ಚಿತ್ರ 'ಉತ್ತಮರು' ಮೂಲಕ ಬೆಳ್ಳಿತೆರೆಗೆ ಮರಳಿದ್ದಾರೆ.

'ಒಂಥರಾ ಬಣ್ಣಗಳು' (2019) ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಬೆಂಕಿಪಟ್ಣ ಸಿನಿಮಾದ ನಟ ಪ್ರತಾಪ್ ನಾರಾಯಣ್ 4 ವರ್ಷಗಳ ನಂತರ ಇದೀಗ ತಮ್ಮ ಮುಂದಿನ ಚಿತ್ರ 'ಉತ್ತಮರು' ಮೂಲಕ ಬೆಳ್ಳಿತೆರೆಗೆ ಮರಳಿದ್ದಾರೆ. ಗ್ಯಾಂಗ್‌ಸ್ಟರ್ ಕಥೆಯುಳ್ಳ ಸಿನಿಮಾ ಎಂದು ಬಿಂಬಿಸಲಾದ ಈ ಚಿತ್ರಕ್ಕೆ ರೋಹಿತ್ ಶ್ರೀನಿವಾಸ್ ಅವರ ನಿರ್ದೇಶನ, ಚಿತ್ರಕಥೆ ಮತ್ತು ಛಾಯಾಗ್ರಹಣವಿದೆ. ಚಿತ್ರವು ಮುಂದಿನ ವಾರ ಫೆಬ್ರುವರಿ 10 ರಂದು ಥಿಯೇಟರ್‌ಗೆ ಬರಲು ಸಿದ್ಧವಾಗಿದೆ.
'ಉತ್ತಮರು ಚಿತ್ರದ ಕಥೆ ಸತ್ಯ ಅವರ ಸುತ್ತ ಸುತ್ತುತ್ತದೆ. ಅವರ ಜೀವನವು ಆಕಸ್ಮಿಕ ಆಶ್ಚರ್ಯಗಳಿಂದ ತುಂಬಿದೆ. ಅದು ಅವರನ್ನು ಹೊಸ ಎತ್ತರಕ್ಕೆ ಎಳೆದೊಯ್ಯುತ್ತದೆ. ಆತ ಮುಂದೆ ಎದುರಿಸುವ ಪರಿಣಾಮಗಳು ಮತ್ತು ಅವನ ಕುಟುಂಬದ ಮೇಲೆ ಅದರ ಪ್ರಭಾವವು ಚಿತ್ರದ ಉಳಿದ ಭಾಗವನ್ನು ರೂಪಿಸುತ್ತದೆ' ಎಂದು ನಿರ್ದೇಶಕ ರೋಹಿತ್ ಹೇಳುತ್ತಾರೆ.
ಉತ್ತಮರು ಚಿತ್ರಕ್ಕೆ ಆರ್.ಎಸ್. ಗಣೇಶ್ ನಾರಾಯಣ್ ಅವರ ಸಂಗೀತವಿದೆ ಮತ್ತು ಜಯಂತ್ ಕಾಯ್ಕಿಣಿ ಮತ್ತು ಅರಸು ಅಂತಾರೆ ಅವರ ಸಾಹಿತ್ಯವಿದೆ.
ಚಿತ್ರದಲ್ಲಿ ರಂಗಾಯಣ ರಘು, ಕೆ.ಎಸ್. ಶ್ರೀಧರ್, ಬಾಲ ರಾಜವಾಡಿ, ಕಡ್ಡಿಪುಡಿ ಚಂದ್ರು, ರಘುರಾಮ್, ಪಲ್ಲವಿ ಮೋಹನರಾಜು ಮತ್ತು ಬಿಂದು ರಕ್ಷಿತಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ.
ಪ್ರತಾಪ್ ನಾರಾಯಣ್ ಅವರು ತಮ್ಮ ಮುಂದಿನ, ಹೊಯ್ಸಳ ಚಿತ್ರದ ಬಿಡುಗಡೆಗೆ ಕುತೂಹಲದಿಂದ ಎದುರು ನೋಡುತ್ತಿದ್ದು, ಇದು ಮಾರ್ಚ್ 30 ರಂದು ಬಿಡುಗಡೆಯಾಗಲಿದೆ. ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾದಲ್ಲಿ ಧನಂಜಯ್ ನಾಯಕನಾಗಿ ನಟಿಸಿದ್ದಾರೆ ಮತ್ತು ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್ ನಿರ್ಮಿಸಿರುವ ವಿಜಯ್ ಎನ್ ಅವರ ನಿರ್ದೇಶನದಲ್ಲಿ ಪ್ರತಾಪ್ ಪ್ರತಿನಾಯಕನಾಗಿ ನಟಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


