ದೀಪಕ್ ಮಧುವನಹಳ್ಳಿ ನಿರ್ದೇಶನದ ರೋಮ್ಯಾಂಟಿಕ್ ಕಾಮಿಡಿಯಲ್ಲಿ ರಾಚೆಲ್ ಡೇವಿಡ್
ನಿರ್ದೇಶಕ ದೀಪಕ್ ಮಧುವನಹಳ್ಳಿ ಅವರ ಮುಂಬರುವ ರೋಮ್ಯಾಂಟಿಕ್ ಸಿನಿಮಾದಲ್ಲಿ ವೀಕೆಂಡ್ ನಟ ಮಿಲಿಂದ್ ಗೆ ರಾಚೆಲ್ ಡೇವಿಡ್ ನಾಯಕಿಯಾಗಲಿದ್ದಾರೆ.

ನಿರ್ದೇಶಕ ದೀಪಕ್ ಮಧುವನಹಳ್ಳಿ ಅವರ ಮುಂಬರುವ ರೋಮ್ಯಾಂಟಿಕ್ ಸಿನಿಮಾದಲ್ಲಿ ವೀಕೆಂಡ್ ನಟ ಮಿಲಿಂದ್ ಗೆ ರಾಚೆಲ್ ಡೇವಿಡ್ ನಾಯಕಿಯಾಗಲಿದ್ದಾರೆ.
ರಾಮಾ ರಾಮಾ ರೇ, ಒಂದಲ್ಲ ಎರಡಲ್ಲ ಇತ್ತೀಚಿನ ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ಕೇವಲ ಚಿತ್ರ ನಿರ್ದೇಶನದಲ್ಲಿ ಮಾತ್ರ ತೊಡಗಿಸಿಕೊಂಡಿಲ್ಲ. ನಿರ್ದೇಶನದ ಜೊತೆಗೆ ಸಿನಿಮಾ ನಿರ್ಮಾಣ, ವಿತರಣೆಯಲ್ಲೂ ಬಿಜಿಯಾಗಿರುವುದು ಗೊತ್ತೇ ಇದೆ. ಇದೀಗ ಪೂರ್ಣ ಪ್ರಮಾಣದ ಸಿನಿಮಾ ನಿರ್ಮಾಣದಲ್ಲಿ ಅವರ ತಂಡ ತೊಡಗಿಸಿಕೊಂಡಿದೆ
2018ರಲ್ಲಿ ತೆರೆಕಂಡ ಅನಂತ್ ನಾಗ್ ಅಭಿನಯದ ವೀಕೆಂಡ್ ಸಿನಿಮಾದಲ್ಲಿ ನಟಿಸಿದ್ದ ಮಿಲಿಂದ್ ಗಿದು ಎರಡನೇ ಸಿನಿಮಾ. ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಪಾತ್ರಕ್ಕೆ ತಯಾರಿಯೂ ಭರ್ಜರಿಯಾಗಿ ನಡೆಯುತ್ತಿದೆ. ಮಿಲಿಂದ್ ಜೋಡಿಯಾಗಿ ಲವ್ ಮಾಕ್ಟೈಲ್ ಖ್ಯಾತಿಯ ರಾಚೆಲ್ ಡೇವಿಡ್ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಸತ್ಯ ಪ್ರಕಾಶ್ ನಿರ್ದೇಶನದಲ್ಲಿ ತೆರೆಕಂಡ "ಮ್ಯಾನ್ ಆಫ್ ದಿ ಮ್ಯಾಚ್" ಸಿನಿಮಾ ಬಿಡುಗಡೆಯಾಗಿ ಉತ್ತಮ ವಿಮರ್ಶೆ ಪಡೆದುಕೊಂಡಿತ್ತು. ಈ ಚಿತ್ರವನ್ನು ನಿರ್ದೇಶನದ ಜೊತೆ ನಿರ್ಮಾಪಕ ಮಂಜುನಾಥ್ ಜೊತೆಗೂಡಿ ಸತ್ಯ ಹಾಗೂ ಮಯೂರ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಾಣ ಕೂಡ ಮಾಡಿದ್ದರು. ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು, ಈ ಚಿತ್ರಕ್ಕೂ ಮಯೂರ ಪಿಕ್ಚರ್ಸ್ ಡಿ. ಮಂಜುನಾಥ್ ಕೈ ಜೋಡಿಸಿದ್ದಾರೆ.
ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ಸತ್ಯ ಪ್ರಕಾಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಭಾಗ್ಯರಾಜ್, ರಾಜು ಜೇಮ್ಸ್ ಬಾಂಡ್, ಕಳ್ಬೆಟ್ಟದ ದರೋಡೆಕೋರರು ಸಿನಿಮಾ ನಿರ್ದೇಶಿಸಿರುವ ದೀಪಕ್ ಮಧುವನಹಳ್ಳಿ ನಾಲ್ಕನೇ ಸಿನಿಮಾವಿದು. ರೋಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ, ಲವಿತ್ ಕ್ಯಾಮೆರಾ ವರ್ಕ್, ಅಜಯ್ ಸಂಕಲನ ಚಿತ್ರಕ್ಕಿರಲಿದೆ.
ಇನ್ನು ಶೀರ್ಷಿಕೆ ಅಂತಿಮವಾಗದ ಈ ಚಿತ್ರಕ್ಕೆ ಸತ್ಯ ಪ್ರಕಾಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿದ್ದಾರೆ. ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ. "ಭಾಗ್ಯರಾಜ್"," ರಾಜು ಜೇಮ್ಸ್ ಬಾಂಡ್", "ಕಳ್ಬೆಟ್ಟದ ದರೋಡೆಕೋರರು" ಸಿನಿಮಾ ನಿರ್ದೇಶಿಸಿರುವ ದೀಪಕ್ ಮಧುವನಹಳ್ಳಿ ಅವರಿಗಿದು ನಾಲ್ಕನೇ ಸಿನಿಮಾವಾಗಿದೆ.
ಜುಲೈ ಅಂತ್ಯದಿಂದ ಚಿತ್ರದುರ್ಗದಲ್ಲಿ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಸಿದ್ಧವಾಗುತ್ತಿದೆ. ಹಿರಿಯ ನಟರಾದ ರಮೇಶ್ ಭಟ್, ಅವಿನಾಶ್ ಮತ್ತು ಸಾಧು ಕೋಕಿಲಾ ಅವರನ್ನು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


