ದೊಡ್ಡ ವೇದಿಕೆಯಲ್ಲಿ ಕೆಲಸ ಮಾಡಿದ್ದು ಹೊಸ ಅನುಭವ: 'ಡೊಳ್ಳು' ಸಿನಿಮಾ ನಿರ್ಮಾಪಕ ಪವನ್ ಒಡೆಯರ್
ಗೋವಿಂದಾಯ ನಮಃ, ಗೂಗ್ಲಿ, ರಣ ವಿಕ್ರಮ, ನಟಸಾರ್ವಭೌಮ ಚಿತ್ರಗಳ ನಿರ್ದೇಶಕ ಹಾಗೂ ಡೊಳ್ಳು ಚಿತ್ರದ ನಿರ್ಮಾಪಕ ಪವನ್ ಒಡೆಯರ್ ಇತ್ತೀಚೆಗೆ ನಡೆದ ಆಸ್ಕರ್ ತೀರ್ಪುಗಾರರ ಭಾಗವಾಗಿ ಆಯ್ಕೆಯಾಗಿದ್ದಾರೆ.

ಗೋವಿಂದಾಯ ನಮಃ, ಗೂಗ್ಲಿ, ರಣ ವಿಕ್ರಮ, ನಟಸಾರ್ವಭೌಮ ಚಿತ್ರಗಳ ನಿರ್ದೇಶಕ ಹಾಗೂ ಡೊಳ್ಳು ಚಿತ್ರದ ನಿರ್ಮಾಪಕ ಪವನ್ ಒಡೆಯರ್ ಇತ್ತೀಚೆಗೆ ನಡೆದ ಆಸ್ಕರ್ ತೀರ್ಪುಗಾರರ ಭಾಗವಾಗಿ ಆಯ್ಕೆಯಾಗಿದ್ದಾರೆ.
ತಮ್ಮ ಮುಂಬರುವ ರೆಮೋ ಸಿನಿಮಾದ ಪೋಸ್ಟ್-ಪ್ರೊಡಕ್ಷನ್ ಕೆಲಸದಲ್ಲಿ ಪವನ್ ಒಡೆಯರ್ ನಿರತರಾಗಿದ್ದಾರೆ. ನಿರ್ದೇಶಕರು, ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದಿಂದ 17 ಸದಸ್ಯರ ತೀರ್ಪುಗಾರರ ಭಾಗವಾಗಲು ವಿನಂತಿಸಿದ ಇಮೇಲ್ ಸ್ವೀಕರಿಸಿದ ನಂತರ ತಾವು ದಿಗ್ಭ್ರಮೆಗೊಂಡಿದ್ದಾಗಿ ತಿಳಿಸಿದ್ದಾರೆ.
ಈ ದೊಡ್ಡ ವೇದಿಕೆಯಲ್ಲಿರುವುದು ತಮಾಷೆಯಲ್ಲ. ಆ ಮಟ್ಟದಲ್ಲಿ ಯಾರಾದರೂ ನನ್ನ ಕೆಲಸವನ್ನು ಗುರುತಿಸಿದ್ದಾರೆ ಎಂದರೆ ನನಗೆ ಖುಷಿಯಾಗಿದೆ. ಈ ಆಹ್ವಾನವನ್ನು ನಾನು ಗೌರವವೆಂದು ಪರಿಗಣಿಸಿದೆ. ಅಲ್ಲದೆ, ನನ್ನ ಮೊದಲ ನಿರ್ಮಾಣದ ಡೊಳ್ಳು ಸಿನಿಮಾದಿಂದ ನನ್ನನ್ನು ಗುರತಿಸುವಂತಾಗಿದೆ ಎಂದು ಅವರು ಹೇಳಿದ್ದಾರೆ.
ಹಿಂದಿ, ತೆಲುಗು, ಮಲಯಾಳಂ ಗುಜರಾತಿ, ಬೆಂಗಾಲಿ ಸೇರಿದಂತೆ ವಿವಿಧ ಭಾಷೆಗಳಲ್ಲಿ 13 ಚಲನಚಿತ್ರಗಳನ್ನು ವೀಕ್ಷಿಸಿದ್ದಾಗಿ ಪವನ್ ತಿಳಿಸಿದ್ದಾರೆ. ಜನಪ್ರಿಯ ಅಸ್ಸಾಮಿ ಉಪಭಾಷೆಯಾದ ದಿಮಾಸಾದಲ್ಲಿ ಒಂದನ್ನು ವೀಕ್ಷಿಸಿದರು. “ನಾನು ಪ್ರತಿ ಚಿತ್ರವನ್ನು ಎಲ್ಲಾ ಕೋನದಿಂದ ನೋಡಿದೆ, ಒಬ್ಬ ವೀಕ್ಷಕನಾಗಿ, ವಿಮರ್ಶಕನಾಗಿ ಮತ್ತು ತಂತ್ರಜ್ಞನಾಗಿ ವೀಕ್ಷಿಸಿದ್ದೇನೆ.. ಆಸ್ಕರ್ ಪ್ರಶಸ್ತಿಗೆ ಪರಿಗಣಿಸಬೇಕಾದ ಚಲನಚಿತ್ರದ ಮಾನದಂಡವನ್ನು ನಾನು ಕಲಿತಿದ್ದೇನೆ. ಇದು ನನಗೆ ಸಂಪೂರ್ಣ ಹೊಸ ಅನುಭವವಾಗಿತ್ತು ಎಂದಿದ್ದಾರೆ.
ಭಾರತದ ವಿವಿಧ ಭಾಗಗಳಿಂದ ಸಾಕಷ್ಟು ಅನುಭವಿಗಳನ್ನು ಭೇಟಿ ಮಾಡಲು ವೇದಿಕೆ ನನಗೆ ಸಹಾಯ ಮಾಡಿತು ಎಂದು ಅವರು ಹೇಳುತ್ತಾರೆ. ಚೆಲೋ ಶೋ (ಕೊನೆಯ ಚಲನಚಿತ್ರ ಪ್ರದರ್ಶನ, ಪಾನ್ ನಳಿನ್ ನಿರ್ದೇಶಿಸಿದ ಗುಜರಾತಿ ಚಲನಚಿತ್ರ) ಆಸ್ಕರ್‌ಗೆ ಅಧಿಕೃತ ಪ್ರವೇಶ ಪಡೆದಿದೆ, ಇದು ಸರ್ವಾನುಮತದ ಆಯ್ಕೆಯಾಗಿದೆ ಎಂದು ಪವನ್ ಹೇಳುತ್ತಾರೆ.
"ಚೆಲೋ ಶೋ ಬಹಳಷ್ಟು ಭಾವನೆಗಳನ್ನು ಹೊಂದಿದ್ದು, ಚಿತ್ರವು ಭಾರತದ ಪರಿಪೂರ್ಣ ಮಿಶ್ರಣವಾಗಿದೆ, ಆಕರ್ಷಿಸುವ ಭರವಸೆ ಇದೆ ಎಂದು ಪವನ್ ಹೇಳುತ್ತಾರೆ, ಆಯ್ಕೆಯ ಭಾಗವಾಗಿದ್ದ ಎಲ್ಲಾ 13 ಚಿತ್ರಗಳು ಉತ್ತಮವಾಗಿವೆ, ಆದರೆ ಚೆಲೋ ಶೋ ಸಿನಿಮಾ ಎದ್ದು ಕಾಣುತ್ತದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


