ಸಿನಿಮಾ ಸುದ್ದಿ

ಕೆಜಿಎಫ್ 2, RRR ಹಿಂದಿಕ್ಕಿ IMDbಯಲ್ಲಿ ಅತೀ ಹೆಚ್ಚು ರೇಟಿಂಗ್ ಪಡೆದ ಕಾಂತಾರ!

ಸ್ಟಾರ್ ನಿರ್ದೇಶಕರ ಎಸ್.ಎಸ್ ರಾಜಮೌಳಿ, ಭರವಸೆಯ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನೂ ಹಿಂದಿಕ್ಕಿ ರಿಷಬ್ ಶೆಟ್ಟಿ ಮುನ್ನುಗ್ಗುತ್ತಿದ್ದಾರೆ.

ಕೆಜಿಎಫ್ 2, RRR ಹಿಂದಿಕ್ಕಿ IMDbಯಲ್ಲಿ ಅತೀ ಹೆಚ್ಚು ರೇಟಿಂಗ್ ಪಡೆದ ಕಾಂತಾರ!
ಕಾಂತಾರ ಚಿತ್ರದ ಸ್ಟಿಲ್
Published On :

ಬೆಂಗಳೂರು: ಸ್ಟಾರ್ ನಿರ್ದೇಶಕರ ಎಸ್.ಎಸ್ ರಾಜಮೌಳಿ, ಭರವಸೆಯ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನೂ ಹಿಂದಿಕ್ಕಿ ರಿಷಬ್ ಶೆಟ್ಟಿ ಮುನ್ನುಗ್ಗುತ್ತಿದ್ದಾರೆ. ರಾಜಮೌಳಿಯವರ ಆರ್ ಆರ್ ಆರ್, ಪ್ರಶಾಂತ್ ನೀಲ್ ಅವರ ಕೆಜಿಎಫ್ 2 ಚಿತ್ರಕ್ಕಿಂತಲೂ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರಾ ಚಿತ್ರ ಅತಿಹೆಚ್ಚು IMDb ರೇಟಿಂಗ್ ಪಡೆದಿದೆ.

ನಿರ್ಮಾಪಕ-ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಕಾಂತಾರವು IMDb ನಲ್ಲಿ 10 ರಲ್ಲಿ 9.5 ರೇಟಿಂಗ್‌ನೊಂದಿಗೆ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ. ಮೂಲತಃ ಕನ್ನಡದಲ್ಲಿ ತಯಾರಾದ ಈ ಚಿತ್ರವು ಯಶ್ ಅವರ ಕೆಜಿಎಫ್ 2 (8.4/10) ಮತ್ತು ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ (8/10) ಅನ್ನು ಮೀರಿಸಿದೆ.

ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸೆಪ್ಟೆಂಬರ್ 30ರಂದು ಬಿಡುಗಡೆಯಾಯಿತು. ಕನ್ನಡ ಚಲನಚಿತ್ರವು ಸಕಾರಾತ್ಮಕ ವಿಮರ್ಶೆಗಳಿಗೆ ತೆರೆದುಕೊಂಡಿತು. ಈ ಚಿತ್ರ ಕರ್ನಾಟಕದಲ್ಲಿ 70 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಅದರ ಯಶಸ್ಸನ್ನು ನೋಡುತ್ತಿರುವ ಕಾಂತಾರ ನಿರ್ಮಾಪಕರು ಚಿತ್ರದ ಡಬ್ಬಿಂಗ್ ಆವೃತ್ತಿಯನ್ನು ಇತರ ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಚಿತ್ರದ ಹಿಂದಿ ಆವೃತ್ತಿಯು ಇಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದರೆ, ತಮಿಳು ಮತ್ತು ತೆಲುಗು ಆವೃತ್ತಿಯು ಅಕ್ಟೋಬರ್ 15 ರಂದು ದೊಡ್ಡ ಪರದೆಯಲ್ಲಿ ಬರಲಿದೆ.

ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿಯೊಂದಿಗೆ, ಅಚ್ಯುತ್ ಕುಮಾರ್ ಮತ್ತು ಸಪ್ತಮಿ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಕೆಜಿಎಫ್ ಮತ್ತು ಕೆಜಿಎಫ್ 2 ನ ತಯಾರಕರಾದ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.