'ಖಾಸಗಿ ಪುಟಗಳು' ಚಿತ್ರದ ಮೂಲಕ ಸಂತೋಷ್ ಶ್ರೀಕಂಠಪ್ಪ ಅದೃಷ್ಟ ಪರೀಕ್ಷೆ!
ಕಿರುಚಿತ್ರಗಳ ಚಿತ್ರೀಕರಣದಲ್ಲಿ ಅನುಭವ ಹೊಂದಿರುವ ಸಂತೋಷ್ ಶ್ರೀಕಂಠಪ್ಪ ಅವರು ತಮ್ಮ ಮೊದಲ ಚಲನಚಿತ್ರವಾದ ಖಾಸಗಿ ಪುಟಗಳು ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಕಿರುಚಿತ್ರಗಳ ಚಿತ್ರೀಕರಣದಲ್ಲಿ ಅನುಭವ ಹೊಂದಿರುವ ಸಂತೋಷ್ ಶ್ರೀಕಂಠಪ್ಪ ಅವರು ತಮ್ಮ ಮೊದಲ ಚಲನಚಿತ್ರವಾದ ಖಾಸಗಿ ಪುಟಗಳು ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
'ಖಾಸಗಿ ಪುಟಗಳು' ಚಿತ್ರ ಸಂಪೂರ್ಣ ಹೊಸಬರ ಪ್ರಯತ್ನವಾಗಿದ್ದು, ಸಂತೋಷ್ ಶ್ರೀಕಂಠಪ್ಪ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಟ್ರೇಲರ್ ಹಾಗೂ ಚೆಂದದ ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿದೆ. ಇದೀಗ ಪ್ರೇಕ್ಷಕರ ಮುಂದೆ ಬರಲು ಸಿನಿಮಾ ರೆಡಿಯಾಗಿದ್ದು, ನವೆಂಬರ್ 18ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ: 'ನಮೋ ಭೂತಾತ್ಮ 2' ಮತ್ತೆ ಜೊತೆಯಾದ ಕೋಮಲ್-ಮುರಳಿ
“ಎಲ್ಲರ ಜೀವನದ ಡೈರಿಯಲ್ಲೂ ಯಾರಿಗೂ ಹೇಳಲಾಗದಂತಹ ಒಂದಷ್ಟು ಖಾಸಗಿ ವಿಷಯಗಳು, ಖಾಸಗಿ ಪುಟಗಳು ಇದ್ದೇ ಇರುತ್ತವೆ. ಅಂಥದ್ದೇ ಒಂದಷ್ಟು ವಿಷಯಗಳನ್ನು ಈ ಸಿನಿಮಾದಲ್ಲೂ ಹೇಳುತ್ತಿದ್ದೇವೆ. ಸಿನಿಮಾ ನೋಡುವ ಪ್ರತಿಯೊಬ್ಬರಿಗೂ, ಇದು ನನ್ನ ಜೀವನದಲ್ಲೂ ನಡೆದಿದೆ ಎನ್ನುವಷ್ಟರ ಮಟ್ಟಿಗೆ ನೈಜವಾಗಿ ಸಿನಿಮಾ ಮೂಡಿಬಂದಿದೆ. ಆರಂಭದಲ್ಲಿ ಈ ಸಿನಿಮಾಕ್ಕೆ ಏನು ಹೆಸರಿಡಬೇಕು ಎಂಬ ಯೋಚನೆಯಲ್ಲಿದ್ದಾಗ ಸಂಗೀತ ನಿರ್ದೇಶಕ ಮತ್ತು ಚಿತ್ರ ಸಾಹಿತಿ ಕೆ. ಕಲ್ಯಾಣ್ ಈ ಟೈಟಲ್ ತಿಳಿಸಿದರು. ಸಿನಿಮಾದ ಟೈಟಲ್ ಹೇಳುವಂತೆ ಎಲ್ಲರಿಗೂ ತಲುಪುವಂಥ ಖಾಸಗಿ ವಿಷಯಗಳೇ ಸಿನಿಮಾದ ಕಥೆ’ ಎನ್ನುವುದು “ಖಾಸಗಿ ಪುಟಗಳು’ ಸಿನಿಮಾದ ಕಥಾಹಂದರದ ಬಗ್ಗೆ ನಿರ್ದೇಶಕ ಸಂತೋಷ್ ಶ್ರೀಕಂಠಪ್ಪ ಅವರು ಹೇಳಿದ್ದಾರೆ.
ಚಿತ್ರವು ಉಡುಪಿಯ ಸುತ್ತಮುತ್ತಲಿನ ಕರಾವಳಿಯ ಹಿನ್ನೆಲೆಯನ್ನು ಹೊಂದಿದೆ “ಖಾಸಗಿ ಪುಟಗಳು ಸ್ನೇಹ, ಕಾಲೇಜು ಜೀವನ, ಪ್ರಣಯ ಮತ್ತು ತಪ್ಪಾದ ಕೆಲವು ನಿರ್ಧಾರಗಳು, ಕೆಲಸಗಳ ಪರಿಣಾಮಗಳಂತಹ ಅಂಶಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಗೋಣಿಚೀಲ, ಜೋಡಿ ಕುದುರೆ ಮತ್ತು ಸಂತೆಯಂತಹ ಕಿರುಚಿತ್ರಗಳಲ್ಲಿ ಕೆಲಸ ಮಾಡಿರುವ ವಿಶ್ವ ಅವರು, ಸಂತೋಷ್ ಶ್ರೀಕಂಠಪ್ಪ ನಿರ್ದೇಶನದ ಮೊದಲ ಚಿತ್ರದಲ್ಲಿ ನಾಯಕ ನಟನಾಗಿ ನಟಿಸುವ ಮೂಲಕ ಸ್ಯಾಂಡಲ್'ವುಡ್'ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಹಿಂದಿ ಥ್ರಿಲ್ಲರ್ ಚಿತ್ರದಲ್ಲಿ ಕೆಲಸ ಮಾಡಿರುವ ಲಿಯೋನಿಲ್ಲಾ ಶ್ವೇತಾ ಡಿಸೋಜಾ ಚಿತ್ರದ ನಾಯಕಿ ನಟಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಒಟ್ಟು ನಾಲ್ಕು ಹಾಡುಗಳಿವೆ,
ಕೆ. ಕಲ್ಯಾಣ್, ಪ್ರಮೋದ್ ಮರವಂತೆ, ತ್ರಿಲೋಕ್ ತ್ರಿವಿಕ್ರಮ್ ಸಾಹಿತ್ಯ ಬರೆದಿದ್ದಾರೆ. ಇನ್ನು ಶ್ವೇತಾ ಮತ್ತು ವಿಶ್ವ ಜೊತೆ ಚೇತನ್ ದುರ್ಗಾ, ನಂದಕುಮಾರ್,ಶ್ರೀಧರ್, ನಿರೀಕ್ಷಾ ಶೆಟ್ಟಿ, ದಿನೇಶ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


