'ಕಾಂತಾರ' ಸೀಕ್ವೆಲ್, ಬಾಲಿವುಡ್ ನಲ್ಲಿ ಆಫರ್ ಕುರಿತು ರಿಷಬ್ ಶೆಟ್ಟಿ ಹೇಳಿದ್ದು ಹೀಗೆ...
ಇತ್ತೀಚಿಗೆ ಬಿಡುಗಡೆಯಾದ ಆಕ್ಷನ್ ಥ್ರಿಲ್ಲರ್ 'ಕಾಂತಾರ' ಬಾಕ್ಸ್ ಆಫೀಸ್ ನಲ್ಲಿ 300 ಕೋಟಿ ರೂ. ದೋಚುವುದರೊಂದಿಗೆ ಭರ್ಜರಿ ಪ್ರದರ್ಶನ ಯಶಸ್ಸು ಗಳಿಸಿದ ನಂತರ ತನಗೆ ಬಾಲಿವುಡ್ ಚಿತ್ರ ನಿರ್ಮಾಪಕರಿಂದ ಆಫರ್ ಬಂದಿದ್ದಾಗಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಿಳಿಸಿದ್ದಾರೆ.

ಬೆಂಗಳೂರು: ಇತ್ತೀಚಿಗೆ ಬಿಡುಗಡೆಯಾದ ಆಕ್ಷನ್ ಥ್ರಿಲ್ಲರ್ 'ಕಾಂತಾರ' ಬಾಕ್ಸ್ ಆಫೀಸ್ ನಲ್ಲಿ 300 ಕೋಟಿ ರೂ. ದೋಚುವುದರೊಂದಿಗೆ ಭರ್ಜರಿ ಪ್ರದರ್ಶನ ಯಶಸ್ಸು ಗಳಿಸಿದ ನಂತರ ತನಗೆ ಬಾಲಿವುಡ್ ಚಿತ್ರ ನಿರ್ಮಾಪಕರಿಂದ ಆಫರ್ ಬಂದಿದ್ದಾಗಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಿಳಿಸಿದ್ದಾರೆ.
ಬಾಲಿವುಡ್ ಚಿತ್ರ ನಿರ್ಮಾಪಕರಿಂದ ಆಫರ್ ಬಂದದ್ದು ನಿಜ. ಆದರೆ, ಪ್ರಸ್ತುತ ಕನ್ನಡದಲ್ಲಿಯೇ ಚಿತ್ರ ಮಾಡಲು ಬಯಸುತ್ತೇನೆ. ಅಮಿತಾಬ್ ಬಚ್ಚನ್ ಅವರನ್ನು ಆರಾದಿಸುತ್ತೇನೆ, ಯುವ ಪೀಳಿಗೆಯ ನೆಚ್ಚಿನ ನಟರಾದ ಶಾಹಿದ್ ಕಪೂರ್ ಅಥವಾ ಸಲ್ಮಾನ್ ಖಾನ್ ನಂತಹ ಅನೇಕ ನಟರನ್ನು ಇಷ್ಟಪಡುವುದಾಗಿ ಎಎನ್ ಐ ಸುದ್ದಿಸಂಸ್ಥೆಗೆ ಅವರು ಹೇಳಿದರು.
ಸೆಪ್ಟೆಂಬರ್ 30 ರಂದು ಬಿಡುಗಡೆಯಾದ ಕಾಂತಾರ ಚಿತ್ರಕಥೆ, ಅದ್ಬುತ ದೃಶ್ಯಗಳಿಗೆ ಅಭಿಮಾನಿಗಳು ಪಿಧಾ ಆಗಿದ್ದು, ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಇತ್ತೀಚಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಸೂಪರ್ ಸ್ಟಾರ್ ರಜನಿಕಾಂತ್ ಕೂಡಾ ರಿಷಬ್ ಶೆಟ್ಟಿ ಅವರನ್ನು ಹೊಗಳಿದ್ದರು.
ಭಾರತೀಯ ಚಿತ್ರಗಳ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ, ಚಿತ್ರ ಬಿಡುಗಡೆಯಾದ ಮೂರನೇ ವಾರದ ಬಳಿಕವೂ ಹಿಂದಿ ಮಾರುಕಟ್ಟೆಯಲ್ಲಿ ಕಾಂತಾರ ರೂ. 50 ಕೋಟಿ ಬಾಚಿದ್ದು, ಕೆಜಿಎಫ್ 1 ಕಲೆಕ್ಷನ್ ಹಿಂದಿಕ್ಕಿದೆ. ಕಾಂತಾರ-2 ಕುರಿತು ಮಾತನಾಡಿದ ರಿಷಬ್ ಶೆಟ್ಟಿ, ಅದರ ಬಗ್ಗೆ ಇಲ್ಲಿಯವರೆಗೂ ಏನನ್ನೂ ಯೋಚಿಸಿಲ್ಲ. ಅಂತಹ ಸಂದರ್ಭ ಬಂದಾಗ ಅದನ್ನು ಘೋಷಿಸುತ್ತೇವೆ ಎಂದು ರಿಷಬ್ ಶೆಟ್ಟಿ ತಿಳಿಸಿದರು.
ಕಾಂತಾರ ಸಿನಿಮಾಕ್ಕೆ ಭಾರೀ ಪ್ರಶಂಸೆ ವ್ಯಕ್ತವಾದ ನಂತರ ಅದನ್ನು ಅಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


