ಸಿನಿಮಾ ಸುದ್ದಿ

ಚಂದ್ರ ಕೀರ್ತಿ ನಿರ್ದೇಶನದ ಹಾಸ್ಯ-ಥ್ರಿಲ್ಲರ್ 'ತೂತು ಮಡಿಕೆ' ಈ ವಾರ ತೆರೆಗೆ

ನಟ-ನಿರ್ಮಾಪಕ ಚಂದ್ರ ಕೀರ್ತಿ ಅವರ ಮುಂಬರುವ ಹಾಸ್ಯ-ಥ್ರಿಲ್ಲರ್ ತೂತು ಮಡಿಕೆ ಹಾಡುಗಳ ಮೂಲಕ ಚಿತ್ರದ ಕುರಿತ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ.

ಚಂದ್ರ ಕೀರ್ತಿ ನಿರ್ದೇಶನದ ಹಾಸ್ಯ-ಥ್ರಿಲ್ಲರ್ 'ತೂತು ಮಡಿಕೆ' ಈ ವಾರ ತೆರೆಗೆ
ತೂತು ಮಡಿಕೆ ಚಿತ್ರ
Published On :

ಬೆಂಗಳೂರು: ನಟ-ನಿರ್ಮಾಪಕ ಚಂದ್ರ ಕೀರ್ತಿ ಅವರ ಮುಂಬರುವ ಹಾಸ್ಯ-ಥ್ರಿಲ್ಲರ್ ತೂತು ಮಡಿಕೆ ಹಾಡುಗಳ ಮೂಲಕ ಚಿತ್ರದ ಕುರಿತ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ.

ಹೌದು.. ತೂತು ಮಡಿಕೆ ಎಂಬ ಶೀರ್ಷಿಕೆ ಮೂಲಕವೇ ಸಾಕಷ್ಟು ಕುತೂಹಲ ಕೆರಳಿಸಿದ್ದ ಈ ಚಿತ್ರ ಹಾಡುಗಳ ಮೂಲಕ ಮತ್ತಷ್ಟು ಬಝ್ ಸೃಷ್ಟಿಸಿದೆ. ಚಿತ್ರ ಇದೇ ವಾರ ತೆರೆಗೆ ಬರಲಿದ್ದು, ಚಿತ್ರದ ಹಾಡುಗಳ ತುಣುಕುಗಳು ಚಿತ್ರದ ಕುರಿತ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ. 

ಈ ಕುರಿತು ಮಾತನಾಡಿರುವ ಚಿತ್ರದ ನಟ-ನಿರ್ಮಾಪಕ ಚಂದ್ರ ಕೀರ್ತಿ ಅವರು, 'ನಟನಾಗಿ ಮತ್ತು 7 ವರ್ಷಗಳಿಂದ ಚಿತ್ರರಂಗದಲ್ಲಿದ್ದ ನನಗೆ ಸರಿಯಾದ ರೀತಿಯ ಪಾತ್ರಗಳು ಸಿಗಲಿಲ್ಲ. ಪೋಷಕ ಪಾತ್ರಗಳು ನನ್ನ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಯಾರೂ ನನ್ನನ್ನು ನಾಯಕನನ್ನಾಗಿ ಮಾಡಲು ಬಯಸದ ಕಾರಣ, ನಾನು ನಾಯಕರಲ್ಲಿ ಒಬ್ಬನಾಗಲು ನಿರ್ದೇಶಕನಾಗಬೇಕಾಯಿತು ಎಂದು ಹೇಳಿದ್ದಾರೆ.

ಈ ಚಿತ್ರಕ್ಕೆ ರಘು ನಿಡುವಳ್ಳಿ ಅವರ ಸಂಭಾಷಣೆ ಇದ್ದು, ತೂತು ಮಡಿಕೆಯು ಕೊಳೆಗೇರಿಯ ಹಿನ್ನೆಲೆಯಲ್ಲಿ ನಡೆಯುತ್ತದೆ ಮತ್ತು ಪುರಾತನ ಪ್ರತಿಮೆ ಸುತ್ತ ಈ ಕಥೆ ಸುತ್ತುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ. ನಂತರ ಕೆಲವು ಉಲ್ಲಾಸದ ಘಟನೆಗಳು ತಿರುವುಗಳಿಗೆ ಕಾರಣವಾಗುತ್ತದೆ. ಮಧುಸೂಧನ್ ರಾವ್ ಮತ್ತು ಶಿವಕುಮಾರ್ ಕೆಬಿ ನಿರ್ಮಿಸಿರುವ ಈ ಚಿತ್ರದಲ್ಲಿ ಪವನ ಗೌಡ ನಾಯಕಿಯಾಗಿ ನಟಿಸಿದ್ದಾರೆ. ತೂತು ಮಡಿಕೆ ಚಿತ್ರದಲ್ಲಿ ಗಿರೀಶ್ ಶಿವ ಮತ್ತು ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.