ಸಿನಿಮಾ ಸುದ್ದಿ

ಹಲವು ಹಿನ್ನಡೆಯ ನಡುವೆಯೂ 'ನಮ್ಮ ಹುಡುಗರು' ಸಿನಿಮಾ ನನಗೆ ವಿಶೇಷ: ನಿರಂಜನ್ ಸುಧೀಂದ್ರ

ಪ್ರಿಯಾಂಕಾ ಉಪೇಂದ್ರ ಅಭಿನಯದ ಸೆಕೆಂಡ್ ಹಾಫ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದ ರಿಯಲ್ ಸ್ಟಾರ್ ಉಪೇಂದ್ರ ಅವರ ಸೋದರ ಸಂಬಂಧಿ ನಿರಂಜನ್ ಸುಧೀಂದ್ರ ನಮ್ಮ ಹುಡುಗರು ಚಿತ್ರದ ಮೂಲಕ ನಾಯಕನಾಗಿದ್ದಾರೆ.

ಹಲವು ಹಿನ್ನಡೆಯ ನಡುವೆಯೂ 'ನಮ್ಮ ಹುಡುಗರು' ಸಿನಿಮಾ ನನಗೆ ವಿಶೇಷ: ನಿರಂಜನ್ ಸುಧೀಂದ್ರ
ನಿರಂಜನ ಸುಧೀಂದ್ರ
Published On :

ಪ್ರಿಯಾಂಕಾ ಉಪೇಂದ್ರ ಅಭಿನಯದ ಸೆಕೆಂಡ್ ಹಾಫ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದ ರಿಯಲ್ ಸ್ಟಾರ್ ಉಪೇಂದ್ರ ಅವರ ಸೋದರ ಸಂಬಂಧಿ ನಿರಂಜನ್ ಸುಧೀಂದ್ರ ನಮ್ಮ ಹುಡುಗರು ಚಿತ್ರದ ಮೂಲಕ ನಾಯಕನಾಗಿದ್ದಾರೆ.

ನಾಯಕನಾಗಿ ನನ್ನ ಪ್ರವೇಶ ನಾನು ಅಂದುಕೊಂಡಂತೆ ಆಗಲಿಲ್ಲ, ಇದೊಂದು ಹೋರಾಟವಾಗಿತ್ತು. ನಿರ್ಮಾಣ ಮತ್ತು ವಿತರಣೆಯ ತೊಂದರೆಯೂ ಅರ್ಥವಾಯಿತು. ಆದರೂ ಇದರಿಂದ ನಾನು ವಿಚಲಿತನಾಗಲಿಲ್ಲ, ನನ್ನ ತಾಳ್ಮೆ ಮತ್ತು ಶಾಂತ ಮನೋಭಾವ ಫಲ ನೀಡಿತು. ಪೂರ್ಣ ಪ್ರಮಾಣದ ನಾಯಕನಾಗಿ ನನ್ನ ಮೊದಲ ಸಿನಿಮಾ ಮೂಲಕ ಬಂದಿದ್ದೇನೆ ಎಂದು ನಿರಂಜನ್ ತಿಳಿಸಿದ್ದಾರೆ.

<strong>ನಿರಂಜನ್‌ ಸುಧೀಂದ್ರ</strong>
ನಿರಂಜನ್‌ ಸುಧೀಂದ್ರ

ನಟ ನಿರಂಜನ್‌ ಸುಧೀಂದ್ರ ನಟನೆಯ ‘ನಮ್‌ ಹುಡುಗ್ರು’ ಚಿತ್ರದ ಆಡಿಯೋ ಬಿಡುಗಡೆ ಆಗಿದೆ. ಹೆಚ್‌.ಬಿ. ಸಿದ್ದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ನಿರಂಜನ್‌ ಸುಧೀಂದ್ರ ಅವರಿಗೆ ನಾಯಕಿಯಾಗಿ ರಿಯಾ ರಣ್ವಿಕಾ ಕಾಣಿಸಿಕೊಂಡಿದ್ದಾರೆ. ‘ಇದು ನನ್ನ ಮೊದಲ ಸಿನಿಮಾ. ಈ ಸಿನಿಮಾ ಇಷ್ಟು ಚೆನ್ನಾಗಿ ಬಂದಿದೆ ಎಂದರೆ ಅದಕ್ಕೆ ಕಾರಣ ನಿರ್ಮಾಪಕ ಕೆ ಕೆ ಅಶ್ರಫ್‌, ನಮ್ಮ ಚಿತ್ರದ ನಾಯಕ ನಿರಂಜನ್‌.

ಹೆಚ್ ಬಿ ಸಿದ್ದು ನಿರ್ದೇಶನದ ‘ನಮ್ಮ ಹುಡುಗರು’ ಸಿನಿಮಾ ಮಂಡ್ಯ ಮತ್ತು ಮಂಗಳೂರಿನ ಹಳ್ಳಿಯಲ್ಲಿ ಶೂಟಿಂಗ್ ನಡೆಸಿದೆ. “ನಾಲ್ಕು ವರ್ಷಗಳ ಹಿಂದೆ ನಾನು ತೆಳ್ಳಗಿರುವಾಗ ಮತ್ತು ಕಾಲೇಜಿಗೆ ಹೋಗುವವನಂತೆ ಕಾಣುತ್ತಿದ್ದಾಗ ಚಿತ್ರ ಮಾಡಲಾಗಿತ್ತು. ಆಗ ನನ್ನ ವ್ಯಕ್ತಿತ್ವವು ಮಾಸ್ ಚಿತ್ರಗಳಿಗೆ ಹೊಂದಿಕೆಯಾಗಲಿಲ್ಲ, ಆದ್ದರಿಂದ ನಾನು ನಮ್ಮ ಹುಡುಗರಂತಹ ವಿಷಯವನ್ನು ಆರಿಸಬೇಕಾಯಿತು.

ನನಗೆ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು.  ನನ್ನ ಅಭಿನಯ, ನನ್ನ ನೃತ್ಯ ಕೌಶಲ್ಯ ಮತ್ತು ಪ್ರೇಕ್ಷಕರು ನನ್ನನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಮುಖ್ಯ. ಹಲವು ಹಿನ್ನಡೆಯ ನಡುವೆಯೂ ನಮ್ಮ ಹುಡುಗರು ಸಿನಿಮಾವನ್ನು ನಾನು ವಿಶೇಷವಾಗಿ ಪರಿಗಣಿಸುತ್ತೇನೆ ಏಕೆಂದರೆ ಇದು ನಾಯಕನಾಗಿ ನನ್ನ ಮೊದಲ ಚಿತ್ರವಾಗಿದೆ ಎಂದು ನಿರಂಜನ್ ತಿಳಿಸಿದ್ದಾರೆ.

ವಸಿಷ್ಠ ಸಿಂಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಯಾನ್ ರಾಯ್  ಸಂಗೀತ  ಮತ್ತು ಚಿದಾನಂದ್ ಎಚ್ ಕೆ ಮತ್ತು ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ. ತಮ್ಮ ಚಿಕ್ಕಪ್ಪ ಉಪೇಂದ್ರ ಅವರ ಸಪೋರ್ಟ್ ಬಗ್ಗೆ ಮಾತನಾಡಿದ ನಿರಂಜನ್,  ನಾನು ಜವಾಬ್ದಾರಿಯಿಂದ ನನ್ನ ವೃತ್ತಿ ಜೀವನವನ್ನು ನಡೆಸಬೇಕು ಎಂಬ ಬಗ್ಗೆ ಸ್ಪಷ್ಟತೆಯಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.