ಸಿನಿಮಾ ಸುದ್ದಿ

ಲೂಸ್ ಮಾದ ಯೋಗಿಗೆ ಬರ್ತ್ ಡೆ ಗಿಫ್ಟ್; ಹೆಡ್ ಬುಷ್ ಸಿನಿಮಾ ಪೋಸ್ಟರ್ ರಿವೀಲ್!

ಲೂಸ್ ಮಾದ ಯೋಗಿ 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅವರ ಅಭಿಮಾನಿಗಳಿಂದ ಹಾಗೂ ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಲೂಸ್ ಮಾದ ಯೋಗಿಗೆ ಬರ್ತ್ ಡೆ ಗಿಫ್ಟ್; ಹೆಡ್ ಬುಷ್ ಸಿನಿಮಾ ಪೋಸ್ಟರ್ ರಿವೀಲ್!
ಹೆಡ್ ಬುಷ್ ಪೋಸ್ಟರ್
Published On :

'ದುನಿಯಾ’ ಚಿತ್ರದಲ್ಲಿ ಲೂಸ್ ಮಾದ ಎಂಬ ಖಳನಾಯಕನ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಪ್ರತಿಭಾವಂತ ನಟ ಯೋಗಿ, ಲೂಸ್ ಮಾದ ಎಂದೇ ಖ್ಯಾತಿ ಪಡೆದಿದ್ದಾರೆ. ಲೂಸ್ ಮಾದ ಯೋಗಿ  32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅವರ ಅಭಿಮಾನಿಗಳಿಂದ ಹಾಗೂ ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಯೋಗಿ ಹುಟ್ಟು ಹಬ್ಬದ ಪ್ರಯುಕ್ತ ಅವರ ಮುಂಬರುವ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಹೆಡ್ ಬುಷ್ ಚಿತ್ರದಲ್ಲಿ ನಟ ಲೂಸ್ ಮಾದ ಯೋಗಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಪಾತ್ರದ ಹೆಸರು ಗಂಗ ಎಂಬುದು ಈಗ ರಿವೀಲ್ ಆಗಿದ್ದು, ಯೋಗಿಯ ಲುಕ್ ಕೂಡ ಪೋಸ್ಟರ್‌ನಲ್ಲಿ ರಿವೀಲ್ ಆಗಿದೆ. ಈ ಪೋಸ್ಟರ್‌ನಲ್ಲಿ ಲೂಸ್ ಮಾದ ಯೋಗಿ ಸಿಕ್ಕಾ ಪಟ್ಟೆ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ.

ಯೋಗಿ ತಮ್ಮ ಸಿನಿಮಾ ಜರ್ನಿಯಲ್ಲಿ ಬಹಳಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಸಿದ್ಲಿಂಗು ಸಿನಿಮಾ ಅವರಿಗೆ ಬಹಳಷ್ಟು ಹೆಸರು ತಂದುಕೊಟ್ಟಿತು. ಆದರೆ ಅವರ ನಿರ್ಮಾಣದ ಯಕ್ಷ ಸಿನಿಮಾ ದೊಡ್ಡ ಹೊಡೆತ ನೀಡಿತು. ಈಗ ಮತ್ತೆ ಯೋಗಿ ಪುಟಿದೆದ್ದಿದ್ದು ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಲಂಕೆ, ಕಿರಿಕ್ ಶಂಕರ್ ಸೇರಿದಂತೆ ವಿವಿಧ ಸಿನಿಮಾಗಳು ಬಿಡುಗಡೆಯಾಗಿ ಹೆಸರು ಮಾಡಿದೆ. ವಿನೋದ್​ ಪ್ರಭಾಕರ್ ಜೊತೆ ಲಂಕಾಸುರ ಸೇರಿದಂತೆ ಅನೇಕ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

ಹೆಡ್ ಬುಷ್ ನಲ್ಲಿ ಯೋಗಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಹೆಡ್ ಬುಷ್‌ನಲ್ಲಿ ರಫ್ ಅಂಡ್ ಟಫ್ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. "ಗಂಗಾ ಪಾತ್ರದಲ್ಲಿ ಯೋಗಿ ಮತ್ತೊಂದು ನಾಯಕನಂತಿದ್ದಾರೆ, ಇದು ಧನಂಜಯ್ ಅವರ ಪಾತ್ರಕ್ಕೆ ಸಮಾನವಾಗಿದೆ ಯೋಗಿ ಅದ್ಭುತ ನಟರಾಗಿದ್ದು, ಈ ಚಿತ್ರದ ಮೂಲಕ ಅವರು ತಮ್ಮ ಸ್ಟಾರ್ ಸ್ಥಾನಮಾನವನ್ನು ಮರಳಿ ಪಡೆಯುತ್ತಾರೆಎಂದು ಡೈರೆಕ್ಟರ್ ಶೂನ್ಯ ತಿಳಿಸಿದ್ದಾರೆ.

ಹೆಡ್ ಬುಷ್‌ಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಈ ಚಿತ್ರದಲ್ಲಿ ವಿ ರವಿಚಂದ್ರನ್, ವಸಿಷ್ಟ ಎನ್ ಸಿಂಹ, ಶ್ರುತಿ ಹರಿಹರನ್, ಪಾಯಲ್ ರಜಪೂತ್ ಮತ್ತು ರಘು ಮುಖರ್ಜಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೋಮಣ್ಣ ಟಾಕೀಸ್ ಸಹಯೋಗದಲ್ಲಿ ಡಾಲಿ ಪಿಕ್ಚರ್ಸ್ ನಿರ್ಮಿಸಿರುವ ಈ ಚಿತ್ರ ಅಗ್ನಿ ಶ್ರೀಧರ್ ಅವರ ಆತ್ಮಕಥೆ ಮೈ ಡೇಸ್ ಇನ್ ದಿ ಅಂಡರ್‌ವರ್ಲ್ಡ್ ಕಥೆ ಆಧರಿಸಿದೆ. ಚಿತ್ರ ಅಕ್ಟೋಬರ್ 21 ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.