ಡೈಲಾಗ್ ಕಿಂಗ್ ಸಾಯಿಕುಮಾರ್ ನಟನೆಯ 'ರಾಕ್ಷಸರು' ಡಿಸೆಂಬರ್ 16 ರಂದು ರಿಲೀಸ್
ಡೈಲಾಗ್ ಕಿಂಗ್' ಸಾಯಿಕುಮಾರ್ ನಟನೆಯ 'ರಾಕ್ಷಸರು' ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಡಿಸೆಂಬರ್ 16 ರಂದು ತೆರೆ ಕಾಣುತ್ತಿದೆ.

ಡೈಲಾಗ್ ಕಿಂಗ್' ಸಾಯಿಕುಮಾರ್ ನಟನೆಯ 'ರಾಕ್ಷಸರು' ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಡಿಸೆಂಬರ್ 16 ರಂದು ತೆರೆ ಕಾಣುತ್ತಿದೆ.
ಚಿತ್ರರಂಗಕ್ಕೆ ಕಾಲಿಟ್ಟು 50 ವರ್ಷಗಳು ಕಳೆದಿವೆ. 25 ವರ್ಷದ ಹಿಂದ ತೆರೆಕಂಡ ಪೊಲೀಸ್ ಸ್ಟೋರಿ ನನಗೆ ಹೆಸರು ತಂದುಕೊಟ್ಟಿತ್ತು. ನನ್ನ ತಂದೆ-ತಾಯಿ ಕೂಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದರು. ನನಗಿಂತ ಒಳ್ಳೆಯ ಧ್ವನಿ, ಎತ್ತರ, ವರ್ಚಸ್ಸು ಇದ್ದರೂ ಕೂಡ ಹೀರೋ ಆಗೋಕೆ ಆಗಲಿಲ್ಲ. ನನ್ನ ತಾಯಿ ಡಾ ರಾಜ್‌ಕುಮಾರ್ ಜೊತೆ ಕೆಲಸ ಮಾಡಿದವರು.
ಕುಟುಂಬಕ್ಕಾಗಿ ತಾಯಿ ನಟನೆಯನ್ನು ತ್ಯಾಗ ಮಾಡಿದ್ದರು. ನನ್ನ ಮಕ್ಕಳು ನಟನೆಗೆ ಬಂದರೆ ನನ್ನ ತರ ಆಗುತ್ತಾರೆ ಅಂತ ಅಪ್ಪ ನಮಗೆ ಚಿತ್ರರಂಗ ಬೇಡ ಎಂದಿದ್ದರು. ತಾಯಿಗೆ ಮಾತ್ರ ನಾವು ನಟಿಸಲಿ ಎನ್ನೋದಿತ್ತು. ಬಿಎ, ಎಂಬಿಎ, ಎಂಫಿಲ್, ಎನ್‌ಸಿಸಿ ಮಾಡಿದ್ದರೂ ಕೂಡ ನಾನೇನೋ ಸಾಧನೆ ಮಾಡಬೇಕು ಎಂದು ಅಮ್ಮ ಬಯಸಿದ್ದಳು" ಎಂದು ಸಾಯಿಕುಮಾರ್ ಹೇಳಿದ್ದಾರೆ.
ಹೆತ್ತವರು ಸಿನಿಮಾ ನಂತರ ನಿರ್ದೇಶಕರು ಮತ್ತು ನಟ ಸಾಯಿ ಕುಮಾರ್ ಮತ್ತೆ ಒಂದಾಗಿದ್ದಾರೆ. “ನನಗೆ ಭಾವನಾತ್ಮಕ ಕಥೆಗಳ ಬಗ್ಗೆ ಒಲವು ಇದೆ. ಇದೇ ಮೊದಲ ಬಾರಿಗೆ ನಾನು ಕ್ರೈಮ್ ಥ್ರಿಲ್ಲರ್ ಅನ್ನು ಅನ್ವೇಷಿಸಲು ಪ್ರಯತ್ನಿಸುತ್ತಿದ್ದೇನೆ ಮತ್ತು ಸಾಯಿಕುಮಾರ್ ಈ ಚಿತ್ರದ ಮುಖವಾಗಿರುವುದರಿಂದ ನನಗೆ ಸಂತೋಷವಾಗಿದೆ ಎಂದು ನಿರ್ದೇಶಕ ಅಜಯ್ ಕುಮಾರ್ ತಿಳಿಸಿದ್ದಾರೆ.
ಎರಡು ಹಾಡುಗಳಿರುವ ಈ ಚಿತ್ರಕ್ಕೆ ಎಮಿಲ್ ಸಂಗೀತ ನೀಡಿದ್ದಾರೆ. ಜನಾರ್ದನ ಬಾಬು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಮನು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


