ಸಿನಿಮಾ ಸುದ್ದಿ

ಡೈರೆಕ್ಟರ್ ಪಿ.ಸಿ. ಶೇಖರ್, 'ಲವ್ ಮಾಕ್ಟೇಲ್' ಕೃಷ್ಣ ಸಿನಿಮಾಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಆಯ್ಕೆ

ಆಶಿಕಾ ರಂಗನಾಥ್ ಅಭಿನಯದ ಅವತಾರ ಪುರುಷ, ಮದಗಜ ಮತ್ತು ರೇಮೊ ಮೂರು ಸಿನಿಮಾಗಳು ಬಿಡುಗಡೆಗೆ ಕಾದುನಿಂತಿವೆ. ಅಲ್ಲದೆ ಮೆಡಿಕಲ್ ಥ್ರಿಲ್ಲರ್ ಸಿನಿಮಾ O2 ಸಿನಿಮಾದಲ್ಲಿಯೂ ಆಶಿಕಾ ನಟಿಸುತ್ತಿದ್ದಾರೆ.

ಡೈರೆಕ್ಟರ್ ಪಿ.ಸಿ. ಶೇಖರ್, 'ಲವ್ ಮಾಕ್ಟೇಲ್' ಕೃಷ್ಣ ಸಿನಿಮಾಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಆಯ್ಕೆ
ಆಶಿಕಾ ರಂಗನಾಥ್
Published On :

ಬೆಂಗಳೂರು: ನಟಿ ಆಶಿಕಾ ರಂಗನಾಥ್, ಲವ್ ಮಾಕ್ಟೇಲ್ ನಟ ಕೃಷ್ಣ ಮತ್ತು ನಿರ್ದೇಶಕ ಪಿ.ಸಿ ಶೇಖರ್ ಅವರ ನೂತನ ಸಿನಿಮಾಗೆ ನಾಯಕಿಯಾಗಿ ಸೇರ್ಪಡೆಗೊಂಡಿದ್ದಾರೆ. 

ಇತ್ತೀಚಿಗೆಷ್ಟೆ ಡಾರ್ಲಿಂಗ್ ಕೃಷ್ಣ, ನಟ ಕಡ್ಡಿಪುಡಿ ಚಂದ್ರು, ಪಿ.ಸಿ ಶೇಖರ್ ಕಾಂಬಿನೇಶನ್ ನಲ್ಲಿ ಹೊಸ ಸಿನಿಮಾ ನಿರ್ಮಾಣಗೊಳ್ಳುತ್ತಿರುವುದಾಗಿ ಘೋಷಣೆಯಾಗಿತ್ತು. ಈ ಸಿನಿಮಾವನ್ನು ಕಡ್ಡಿಪುಡಿ ಚಂದ್ರು ನಿರ್ಮಾಣ ಮಾಡುತ್ತಿದ್ದಾರೆ ಎನ್ನುವುದು ವಿಶೇಷ.

ಸಿನಿಮಾ ಚಿತ್ರೀಕರಣ ಈ ತಿಂಗಳಾಂತ್ಯ ಪ್ರಾರಂಭಗೊಳ್ಳಲಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಇದೀಗ ಆಶಿಕಾ ರಂಗನಾಥ್ ಇನ್ನೂ ಹೆಸರಿಡದ ನೂತನ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. 

ಆಶಿಕಾ ರಂಗನಾಥ್ ಅಭಿನಯದ ಅವತಾರ ಪುರುಷ, ಮದಗಜ ಮತ್ತು ರೇಮೊ ಮೂರು ಸಿನಿಮಾಗಳು ಬಿಡುಗಡೆಗೆ ಕಾದುನಿಂತಿವೆ. ಅಲ್ಲದೆ ಮೆಡಿಕಲ್ ಥ್ರಿಲ್ಲರ್ ಸಿನಿಮಾ O2 ಸಿನಿಮಾದಲ್ಲಿಯೂ ಆಶಿಕಾ ನಟಿಸುತ್ತಿದ್ದಾರೆ. O2 ಸಿನಿಮಾವನ್ನು ರಾಘವ್ ಮತ್ತು ಪ್ರಶಾಂತ್ ರಾಜ್ ನಿರ್ದೇಶಿಸುತ್ತಿದ್ದಾರೆ. ವಿಶೇಷವೆಂದರೆ ತಮಿಳಿನಲ್ಲಿ ಪಾದಾರ್ಪಣೆ ಮಾಡುತ್ತಿರುವ ಆಶಿಕಾ ನಟ ಅಥರ್ವ ಅಭಿನಯದ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

Related Article

ವಿಷ್ಣುವರ್ಧನ್ ಎವರ್ ಗ್ರೀನ್ ಸಿನಿಮಾ 'ಬಂಧನ' ಸೀಕ್ವೆಲ್ ನಲ್ಲಿ ಆದಿತ್ಯ; ಮಗನ ಚಿತ್ರಕ್ಕೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ

ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟ 'ದಿಯಾ' ಖ್ಯಾತಿಯ ಖುಷಿ ರವಿ

ಟೈಟಾನಿಕ್ ಹೀರೋಯಿನ್ ಕೇಟ್ ವಿನ್ಸ್ ಲೆಟ್ ಗೆ ಪ್ರತಿಷ್ಟಿತ ಎಮ್ಮೀ ಅವಾರ್ಡ್

ತಂದೆ-ತಾಯಿ ವಿರುದ್ಧವೇ ದೂರು ದಾಖಲಿಸಿದ ತಮಿಳು ನಟ ವಿಜಯ್!

ಜೇಮ್ಸ್ ಬಾಂಡ್ ಪಾತ್ರಕ್ಕೆ ಡೇನಿಯಲ್ ಕ್ರೇಗ್ ಭಾವಪೂರ್ಣ ವಿದಾಯ: ಕೊನೆಯ ಸೀನ್ ಶೂಟಿಂಗ್ ವೇಳೆ ಕಣ್ಣೀರಿಟ್ಟ ನಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.