'ವಿಕ್ರಾಂತ್ ರೋಣ ಭಾರತೀಯ ಕಥೆಯನ್ನು ವಿಶ್ವಮಟ್ಟದಲ್ಲಿ ಹೇಳುವಂತಹ ಮಹತ್ವಾಕಾಂಕ್ಷೆಯ ಸಿನಿಮಾ'
ಕಿಚ್ಚ ಸುದೀಪ್ ಅಭಿನಯದ ವಿಕ್ರಂತ್ ರೋಣ ಸಿನಿಮಾ ಹೊಸ ಬೆಳವಣಿಗೆಗಳೊಂದಿಗೆ ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸುತ್ತದೆ. ಈ ಪ್ಯಾನ್-ಇಂಡಿಯನ್ ಚಿತ್ರಕ್ಕೆ ಜಾಕ್ವೆಲಿನ್ ಫರ್ನಾಂಡೀಸ್ ಸೇರ್ಪಡೆಯೊಂದಿಗೆ ನಿರೀಕ್ಷೆಗಳು ಗಗನಕ್ಕೇರಿವೆ.

ಕಿಚ್ಚ ಸುದೀಪ್ ಅಭಿನಯದ ವಿಕ್ರಂತ್ ರೋಣ ಕಿಚ್ಚ ಸುದೀಪ್ ಅಭಿನಯದ ವಿಕ್ರಂತ್ ರೋಣ ಸಿನಿಮಾ ಹೊಸ ಬೆಳವಣಿಗೆಗಳೊಂದಿಗೆ ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸುತ್ತದೆ. ಈ ಪ್ಯಾನ್-ಇಂಡಿಯನ್ ಚಿತ್ರಕ್ಕೆ ಜಾಕ್ವೆಲಿನ್ ಫರ್ನಾಂಡೀಸ್ ಸೇರ್ಪಡೆಯೊಂದಿಗೆ ನಿರೀಕ್ಷೆಗಳು ಗಗನಕ್ಕೇರಿವೆ.
ಜಾಕ್ವೆಲಿನ್ ಅತ್ಯಂತ ವೃತ್ತಿಪರ ನಾಯಕಿ , ಬೆಳಗ್ಗೆ 9 ಗಂಟೆಗೆ ಸೆಟ್ ಗೆ ಆಗಮಿಸುವ ಜಾಕ್ವೆಲಿನ್ 9.30ರವರೆಗೂ ಯಾವುದೇ ಗಡಿಬಿಡಿಯಿಲ್ಲದೇ ಸಮಯ ಕಳೆಯುತ್ತಾರೆ ಎಂದು ನಿರ್ಮಾಪಕ ಮಂಜುನಾಥ ಗೌಡ ವಿವರಿಸಿದ್ದಾರೆ.
ಆಕೆಯ ಡೈಲಾಗ್ ಡೆರಿವರಿ ಮತ್ತು ಆಕೆಯ ನಟನೆ ಬಗ್ಗೆ ನಟ ಸುದೀಪ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರು ದಿನಗಳ ಶೂಟಿಂಗ್ ಗಾಗಿ ಕಲಾ ನಿರ್ದೇಶಕ ಶಿವಕುಮಾರ್ 5 ಕೋಟಿ ರು. ವೆಚ್ಚದಲ್ಲಿ ಅದ್ಧೂರಿ ಸೆಟ್ ನಿರ್ಮಿಸಿದ್ದಾರೆ.
300 ಡ್ಯಾನ್ಸರ್ ಗಳು ಸುದೀಪ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ನಟಿಸಿದ್ದಾರೆ. ಕೆಜಿಎಫ್ 2ರ ನಂತರ ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ಅದ್ಧೂರಿ ಸಿನಿಮಾ ಇದಾಗಿದೆ ಎಂದು ಮಂಜುನಾಥ ಗೌಡ ತಿಳಿಸಿದ್ದಾರೆ.
'ವಿಕ್ರಾಂತ್ ರೋಣ ಭಾರತೀಯ ಕಥೆಯನ್ನು ವಿಶ್ವಮಟ್ಟದಲ್ಲಿ ಹೇಳುವಂತಹ ಪ್ರಯತ್ನ. ನಾನು ಈ ಸಿನಿಮಾದ ಭಾಗವಾಗಿದ್ದು ಖುಷಿಯ ವಿಚಾರ. ನನ್ನ ದೃಶ್ಯಗಳು ಮತ್ತು ಹಾಡು ಅದ್ಭುತವಾಗಿ ಮೂಡಿಬಂದಿವೆ' ಎಂದು ಸಂತಸ ವ್ಯಕ್ತಪಡಿಸಿದರು ಜಾಕ್ವೆಲಿನ್ ಫರ್ನಾಂಡಿಸ್.
ವಿಕ್ರಾಂತ್ ರೋಣ ಆ್ಯಕ್ಷನ್ ಸಿನಿಮಾವಾಗಿದ್ದು, ನನಗೆ ಅಪಾರ ಸಂತೋಷವಾಗಿದೆ. ಸಿನಿಮಾ ರಿಲೀಸ್ ಮಾಡಲು ನಾವು ಸಾಕಷ್ಟು ಉತ್ಸುಕರಾಗಿದ್ದೇವೆ ಎಂದು ನಿರ್ದೇಶಕ ಅನೂಪ್ ಭಂಡಾರಿ ತಿಳಿಸಿದ್ದಾರೆ.
ಇನ್ನೂ ಜಾಕ್ವೆಲಿನ್ ಜೊತೆಗಿನ ಕೆಲಸದ ಅನುಭವ ಹಂಚಿಕೊಂಡಿರುವ ಅನೂಪ್, ಆಕೆ ಸೆಟ್ ಗೆ ಬರುವ ಮೊದಲು ತಮ್ಮ ಶೂಟಿಂಗ್ ಬಗ್ಗೆ ಹೋಮ್ ವರ್ಕ್ ಮಾಡಿಕೊಳ್ಳುತ್ತಿದ್ದರು. ತಮ್ಮ ಪಾತ್ರದ ಬಗ್ಗೆ ಫೋನ್ ನಲ್ಲಿ ಮೊದಲೇ ಕೇಳಿ ತಿಳಿದುಕೊಳ್ಳುತ್ತಿದ್ದರು. ದಕ್ಷಿಣ ಭಾರತದ ಯಾವುದೇ ಭಾಷೆ ತಿಳಿಯದಿದ್ದರೂ ತಮ್ಮ ಪಾತ್ರಕ್ಕೆ ಡಬ್ ಮಾಡಲು ಪ್ರಯತ್ನಿಸಿದ್ದು ವಿಶೇಷವಾಗಿತ್ತು.
ಜಾಕ್ವೆಲಿನ್ ಸಿಂಹಳೀಯ ಮೂಲದವರಾಗಿದ್ದರು. ಕನ್ನಡ ಮತ್ತು ಸಿಂಹಳ ಲಿಪಿಯ ಸ್ವಾಮ್ಯತೆಯನ್ನು ಅವರು ಗಮನಿಸಿದ್ದಾರೆ. ಜಾಕ್ವೆಲಿನ್ ಗಾಗಿ ಅನೂಪ್ ಪತ್ನಿ ನೀತಾ ಶೆಟ್ಟಿ ವಸ್ತ್ರ ವಿನ್ಯಾಸ ಮಾಡಿದ್ದಾರೆ.
ದಕ್ಷಿಣ ಭಾರತದ ಭಾಷೆಗಳಲ್ಲಿ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿದ್ದು ಉತ್ತಮವಾಗಿ ಬರಲು ಬಯಸಿದ್ದಾರೆ. ನೀತಾ ಕೆಲಸದಿಂದ ಜಾಕ್ವೆಲಿನ್ ಪ್ರೇರಣೆ ಪಡೆದಿದ್ದಾರೆ. ಸಿನಿಮಾದಲ್ಲಿ ಹಸಿರು ಬಣ್ಣದ ಬಟ್ಟೆ ಧರಿಸಿದ್ದಾರೆ ಎಂದು ಅನೂಪ್ ತಿಳಿಸಿದ್ದಾರೆ.
ನಮ್ಮ ಎಡಿಟಿಂಗ್ ಬಗ್ಗೆ ನಟಿ ಆಶ್ಚರ್ಯಚಕಿತರಾದರು. ಸೆಟ್ಗಳಲ್ಲಿ ಎಡಿಟ್ ಮಾಡುವುದನ್ನು ನೋಡಲು ಆಕೆ ಆಸಕ್ತಿ ಹೊಂದಿದ್ದರು. ಪ್ರತಿ ಶೂಟಿಂಗ್ ನಂತರ, ಅವರು ನಮ್ಮ ಪ್ರಕ್ರಿಯೆಯ ಬಗ್ಗೆ ಕುತೂಹಲ ಹೊಂದಿದ್ದರು ಎಂದು ನಿರ್ದೇಶಕರು ಹೇಳಿದ್ದಾರೆ.
ವಿಕ್ರಾಂತ್ ರೋಣ ಬಹುಭಾಷಾ ಆಕ್ಷನ್-ಸಾಹಸ ಸಿನಿಮಾವಾಗಿದೆ. ಇದು 55 ದೇಶಗಳಲ್ಲಿ 14 ಭಾಷೆಗಳಲ್ಲಿ 3ಡಿ ಎಫೆಕ್ಟ್ ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಬಿ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ವಿಲಿಯಂ ಡೇವಿಡ್ ಕ್ಯಾಮೆರಾ ಕೆಲಸ ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ತಾರಾಗಣದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


