ಜನಪ್ರಿಯ ಮಲಯಾಳಂ ಕಿರುತೆರೆ ನಟ ನೇಣಿಗೆ ಶರಣು: ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟ ಕಾರಣ ಶಂಕೆ
ಕಾಲೇಜು ದಿನಗಳಿಂದಲೇ ಅವರ ಕಿರುತೆರೆ ನಂಟು ಪ್ರಾರಂಭವಾಗಿತ್ತು. ಕಳೆದ 22 ವರ್ಷಗಳಿಂದ ಅವರು ಕಿರುತೆರೆಯಲ್ಲಿ ಸಕ್ರಿಯರಾಗಿ ಜನಪ್ರಿಯತೆ ಗಳಿಸಿದ್ದರು.

ತಿರುವನಂತಪುರ: ಕೇರಳದ ಜನಪ್ರಿಯ ಕಿರುತೆರೆ ನಟ, ನಿರೂಪಕ ರಮೇಶ್ ವಲಿಯಸಲ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮನೆಯಲ್ಲಿ ಪತ್ತೆಯಾಗಿದೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.
ಅವರು ಕಾಲೇಜು ದಿನಗಳಿಂದಲೇ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಅಲ್ಲಿಂದಲೇ ಅವರ ಕಿರುತೆರೆ ನಂಟು ಪ್ರಾರಂಭವಾಗಿತ್ತು. ಕಳೆದ 22 ವರ್ಷಗಳಿಂದ ಅವರು ಕಿರುತೆರೆಯಲ್ಲಿ ಸಕ್ರಿಯರಾಗಿ ಜನಪ್ರಿಯತೆ ಗಳಿಸಿದ್ದರು.
ತಿರುವನಂತಪುರದ ಅವರ ನಿವಾಸದಲ್ಲಿ ಅವರು ನೇಣಿಗೆ ಶರಣಾಗಿರುವುದನ್ನು ಪತ್ನಿಯೇ ಮೊದಲು ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಕೊರೊನಾ ಸಾಂಕ್ರಾಮಿಕದಿಂದ ಲಾಕ್ ಡೌನ್ ಹೇರಿಕೆಯಾಗಿದ್ದರಿಂದ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ.
Related Article
ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ: ಕಿರುತೆರೆ ನಟ ಪರ್ಲ್ ಪುರಿ ಬಂಧನ
ಕಿರುತೆರೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದ ಮೋಹನ್ ಲಾಲ್ ಅಭಿನಯದ ‘ದೃಶ್ಯಂ 2’
141 ಕೋಟಿ ರೂ. ವಂಚನೆ ಪ್ರಕರಣ: ಪ್ರಸಿದ್ಧ ಕಿರುತೆರೆ ನಟ ಅನುಜ್ ಸಕ್ಸೇನಾ ಅರೆಸ್ಟ್
ಗುರುಪ್ರಸಾದ್'ಗೆ ಕಿರುತೆರೆ ನಟಿ ರಚಿತಾ ಮಹಾಲಕ್ಷ್ಮೀ ಜೋಡಿ!
ಮುಂಬಯಿ: ಕಿರುತೆರೆ ನಟಿ ದಿವ್ಯಾ ಭಟ್ನಾಗರ್ ಕೊರೋನಾಗೆ ಬಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


