ದೇಶ

ಟಿವಿ ಧಾರಾವಾಹಿ ಚಿತ್ರೀಕರಣ ತಂಡದ ಮೇಲೆ ಪೊಲೀಸರ ದಾಳಿ: ನಟ ಸೇರಿ 18 ಜನರ ವಿರುದ್ಧ ಪ್ರಕರಣ

ಲಾಕ್ ಡೌನ್ ನಿರ್ಬಂಧವಿದ್ದರೂ ಟಿವಿ ಧಾರಾವಾಹಿ ಚಿತ್ರೀಕರಿಸುತ್ತಿದ್ದ ತಂಡದ ಮೇಲೆ ಪೊಲೀಸರು ದಾಳಿ ನಡೆಸಿ ನಟ ಸೇರಿದಂತೆ 18 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಟಿವಿ ಧಾರಾವಾಹಿ ಚಿತ್ರೀಕರಣ ತಂಡದ ಮೇಲೆ ಪೊಲೀಸರ ದಾಳಿ: ನಟ ಸೇರಿ 18 ಜನರ ವಿರುದ್ಧ ಪ್ರಕರಣ
ಸಂಗ್ರಹ ಚಿತ್ರ
Published On :

ತಿರುವನಂತಪುರಂ: ಲಾಕ್ ಡೌನ್ ನಿರ್ಬಂಧವಿದ್ದರೂ ಟಿವಿ ಧಾರಾವಾಹಿ ಚಿತ್ರೀಕರಿಸುತ್ತಿದ್ದ ತಂಡದ ಮೇಲೆ ಪೊಲೀಸರು ದಾಳಿ ನಡೆಸಿ ನಟ ಸೇರಿದಂತೆ 18 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

ಕೇರಳದ ತಿರುವನಂತಪುರದ ಎಡವಾ ಬಳಿಯ ಸಮುದ್ರ ಮುಂಭಾಗದ ರೆಸಾರ್ಟ್ ಮೇಲೆ ಐರೂರ್ ಪೊಲೀಸರ ತಂಡ ಶುಕ್ರವಾರ ದಾಳಿ ನಡೆಸಿತ್ತು.

ಓಡಮ್ ಬಳಿಯ ರೆಸಾರ್ಟ್‌ನಲ್ಲಿ ಸ್ಟೇಷನ್ ಹೌಸ್ ಅಧಿಕಾರಿ ಜಿ ಗೋಪಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದೆ. ಪ್ರಮುಖ ಮಲಯಾಳಂ ಮನರಂಜನಾ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದ 18 ಜನರನ್ನು ಪೊಲೀಸರು ಸುತ್ತುವರೆದು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. 

ಕೋವಿಡ್ ನಿರ್ಬಂಧಗಳನ್ನು ಮೀರಿದ ಕಾರಣಕ್ಕಾಗಿ ರೆಸಾರ್ಟ್ ಅನ್ನು ಸೀಲ್ ಮಾಡಲಾಗಿದೆ ಎಂದು ಎಸ್‌ಎಚ್‌ಒ ಗೋಪಕುಮಾರ್ ತಿಳಿಸಿದ್ದಾರೆ. 'ಈ ಪ್ರದೇಶಗಳಲ್ಲಿನ ರೆಸಾರ್ಟ್‌ಗಳನ್ನು ಮುಚ್ಚಲಾಗಿರುವುದರಿಂದ, ಶೂಟಿಂಗ್ ಆರಂಭದಲ್ಲಿ ಸ್ಥಳೀಯರ ಗಮನಕ್ಕೆ ಬರಲಿಲ್ಲ' ಎಂದು ಅವರು ಹೇಳಿದರು.

ಇದರ ಮಧ್ಯೆ ಹಿರಿಯ ಅಧಿಕಾರಿಗಳಿಗೆ ಶೂಟಿಂಗ್ ಬಗ್ಗೆ ಸುಳಿವು ಸಿಕ್ಕಿದ್ದು ಅದರ ಆಧಾರದ ಮೇಲೆ ದಾಳಿ ನಡೆಸಲಾಯಿತು. ಅನುಮೋದನೆ ಇಲ್ಲದೆ ರೆಸಾರ್ಟ್ ನಿರ್ಮಿಸಲಾಗಿದೆ. ಇನ್ನು ಸಮುದ್ರದ ಹತ್ತಿರ ಇದನ್ನು ನಿರ್ಮಿಸಲಾಗಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. 

ಮುಖ್ಯ ಪಾತ್ರಗಳಲ್ಲಿ ನಟಿಸಿದ ನಟರು ಗುರುವಾರ ಚಿತ್ರೀಕರಣಕ್ಕೆ ಹಾಜರಾಗಿದ್ದರು. ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.